ಯಡಿಯೂರಪ್ಪರಿಂದ ರಾಜ್ಯ ಸರ್ಕಾರದ ಬಗ್ಗೆ ಅಪಪ್ರಚಾರ: ದಿನೇಶ ಗುಂಡೂರಾವ್
Team Udayavani, Mar 6, 2017, 3:45 AM IST
ಹುಬ್ಬಳ್ಳಿ: ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯದ ಒತ್ತಡ, ಅಧಿಕಾರ ಸಿಗುತ್ತದೋ, ಇಲ್ಲವೋ ಎಂಬ ಆತಂಕದಿಂದಾಗಿ ಹತಾಶಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರಕ್ಕೆ ಮುಂದಾಗಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಯಡಿಯೂರಪ್ಪ-ಕೆ.ಎಸ್. ಈಶ್ವರಪ್ಪ ಅವರ ಗುಂಪುಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಬಿಜೆಪಿಯಲ್ಲಿ ಯಡಿಯೂರಪ್ಪರ ಮಾತಿಗೆ ಮನ್ನಣೆ ಇಲ್ಲವಾಗುತ್ತಿದ್ದು, ಈ ಎಲ್ಲ ಒತ್ತಡಗಳನ್ನು ಮರೆಮಾಚಲು ಹಾಗೂ ಹೈಕಮಾಂಡ್ ಓಲೈಕೆಗಾಗಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಕ್ಕೆ ಮುಂದಾಗಿದ್ದಾರೆಂದರು.
ಯಡಿಯೂರಪ್ಪ ಮಾತೆತ್ತಿದರೆ ರೈತ ನಾಯಕ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಬರದ ಹಿನ್ನೆಲೆ ರೈತರ ನೆರವಿಗೆ ಕೇಂದ್ರದಿಂದ ಸಾಲಮನ್ನಾ ಅಥವಾ ಹೆಚ್ಚಿನ ಪರಿಹಾರ ತರುವ ಬಗ್ಗೆ ಮಾತನಾಡದೆ, ಕೇವಲ ಕೀಳು ಮಟ್ಟದ ಆರೋಪಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಬಿಜೆಪಿ ಸರ್ಕಾರದಲ್ಲಿ ಏನೆಲ್ಲ ಹಗರಣಗಳು ನಡೆದವು, ಭ್ರಷ್ಟಾಚಾರ ಎಂಬುದು ಎಲ್ಲಿಗೆ ಮುಟ್ಟಿತ್ತು ಎಂಬುದು ಜನರಿಗೆ ತಿಳಿದಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.