ವಿದ್ಯುತ್ ಬಳಕೆ: ನಿಯಮ ಬದಲಾವಣೆ
Team Udayavani, Mar 6, 2017, 12:09 PM IST
ಮಂಗಳೂರು: ವಿದ್ಯುತ್ ಬಳಕೆಗೆ ಸಂಬಂಧಿಸಿ ವಾಣಿಜ್ಯ ಬಳಕೆ ಪಾಲು ಒಟ್ಟು ವಿದ್ಯುತ್ ಬಳಕೆಯ ಶೇ. 25ಕ್ಕಿಂತ ಹೆಚ್ಚುವರಿ ಇದ್ದರೆ ಅದರಲ್ಲಿ ಗೃಹ ಬಳಕೆಯ ಪಾಲು ಎಷ್ಟೇ ಇದ್ದರೂ ಅದನ್ನು ಪರಿಗಣಿಸದೆ ವಾಣಿಜ್ಯ ದರವನ್ನೇ ವಿಧಿಸುವ ನಿಯಮಕ್ಕೆ ಸರಕಾರ ತಿದ್ದುಪಡಿ ತಂದಿದೆ.
ಅದರಂತೆ ಕಟ್ಟಡವೊಂದರಲ್ಲಿ ವಸತಿ ಮತ್ತು ವಾಣಿಜ್ಯ ಬಳಕೆ ಕೊಠಡಿಗಳೆರಡೂ ಇದ್ದು, ವಿದ್ಯುತ್ ಬಳಕೆಯಲ್ಲಿ ಶೇ. 25ಕ್ಕಿಂತ ಹೆಚ್ಚಿನ ಪಾಲು ವಾಣಿಜ್ಯ ಉದ್ದೇಶದ ವ್ಯವಸ್ಥೆಗೆ ವಿನಿಯೋಗವಾಗುತ್ತಿದ್ದರೆ ಮತ್ತು ಪಾರ್ಕಿಂಗ್ ಲೈಟ್, ಲಿಫ್ಟ್, ನೀರಿನ ಪಂಪ್ ಸಂಪೂರ್ಣವಾಗಿ ವಾಸ್ತವ್ಯದ ವ್ಯವಸ್ಥೆಗೆ ಬಳಕೆಯಾಗಿದ್ದರೆ ವಿದ್ಯುತ್ ದರಕ್ಕೆ ಸಂಬಂಧಿಸಿ ವಸತಿ ದರ ವಿಧಿಸಲಾಗುವುದು. ಈ ಹಿಂದೆ ಅದಕ್ಕೆ ವಾಣಿಜ್ಯ ದರ ವಿಧಿಸಲಾಗುತ್ತಿತ್ತು. ಈ ಬಗ್ಗೆ ಕಳೆದ 2016 ನವೆಂಬರ್ ತಿಂಗಳ ರಾಜ್ಯ ಪತ್ರದಲ್ಲಿ ತಿದ್ದುಪಡಿ ಬಗ್ಗೆ ಪ್ರಕಟನೆ ಹೊರಡಿಸಲಾಗಿದೆ.
ವಸತಿ ಮತ್ತು ವಾಣಿಜ್ಯ ವ್ಯವಸ್ಥೆಗಳೆರಡೂ ಒಂದೇ ಕಟ್ಟಡದಲ್ಲಿದ್ದು, ವಾಣಿಜ್ಯದ ಉಪಯೋಗ ಶೇ. 25 ಮೀರಿದಲ್ಲಿ ವಸತಿಗೆ ಮಾತ್ರ ಉಪಯೋಗವಾಗುವ ವಿದ್ಯುತ್‌ಗೆ ವಾಣಿಜ್ಯ ದರ ನಿಗದ ಪಡಿಸುತ್ತಿರುವುದನ್ನು ಪ್ರಶ್ನಿಸಿ ಮಂಗಳೂರಿನ ಮಾಜಿ ಕಾರ್ಪೊರೇಟರ್ ಜಪ್ಪು ಮಾರ್ಕೆಟ್‌ನ ಜೆ.ವಿ. ಡಿ’ಮೆಲ್ಲೊ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಅಪೀಲು ಅರ್ಜಿಯಾಗಿ ಪರಿಗಣಿಸಿ ಆಯೋಗ ಈ ಹಿಂದಿನ ನಿಯಮಕ್ಕೆ ತಿದ್ದುಪಡಿ ತಂದಿದೆ. ಇದು ರಾಜ್ಯದ ಎಲ್ಲ ಎಸ್ಕಾಂಗಳಿಗೆ ಅನ್ವಯವಾಗುತ್ತದೆ ಎಂದು ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
Bantwal: ಕೆಎಸ್‌ಆರ್‌ಟಿಸಿ ಬಸ್-ಬೈಕ್ ಢಿಕ್ಕಿ; ದಂಪತಿಗೆ ಗಾಯ
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.