ದ್ರಾಕ್ಷಿಗೆ ಬಂಪರ್‌ ಬೆಲೆನಾ? ಹೌದು ಸ್ವಾಮಿ


Team Udayavani, Mar 6, 2017, 1:28 PM IST

06-ISIRI-4.jpg

ಬೇಸಿಗೆ, ಬರ ಒಟ್ಟೊಟ್ಟಿಗೆ ತಟ್ಟಿದರೂ ಶೆ ಶೈಲಯ್ಯ ನಾಗಯ್ಯರ ಜಮೀನಿಗೆ ಏನೂ ಆಗಿಲ್ಲ. ಹಸಿ ದ್ರಾಕ್ಷಿ ಫ‌ಳ, ಫ‌ಳ ಹೊಳೆಯುತ್ತಿದೆ, ಅದು ಒಣದ್ರಾಕ್ಷಿಯಾಗಿ ಮಾರುಕಟ್ಟೆಗೆ ಹೋಗುತ್ತಿದೆ. ಇದೆಲ್ಲ ಹೇಗಪ್ಪಾ ಅಂದರೆ… ಇದರ ಹಿಂದೆ  12ಕಿ.ಮೀ ದೂರದಿಂದ ನೀರು ತಂದು ಹೊಯ್ದ ಶ್ರಮವಿದೆ. ಬೆವರಿದೆ. 

ಉತ್ತರ ಕರ್ನಾಟಕದಲ್ಲಿ ಬಿಸಿಲ ಬೇಗೆ, ಬರದ ಛಾಯೆ ಶುರುವಾಗಿದೆ. ಆದರೆ ಇವ್ಯಾವುವೂ ಬಸವನಬಾಗೇವಾಡಿಯ ಹೆಬ್ಟಾಳ ಗ್ರಾಮದ ರೈತ ಶ್ರೀಶೈಲಯ್ಯ ನಾಗಯ್ಯ ಜಾವರಮಠ (ಜೆ.ಪಿ.ಸ್ವಾಮಿ) ಅವರಿಗೆ ತಟ್ಟಿಲ್ಲ ಎನಿಸುತ್ತದೆ.  ಅವರು ತಮ್ಮ 4 ಏಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು 4 ತಿಂಗಳಲ್ಲಿ 5 ಲಕ್ಷ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.  

ಈಗಂತೂ ಉತ್ತರಕರ್ನಾಟಕದಲ್ಲಿ ಬೇಸಿಗೆ ದಿನದಲ್ಲಿ ಕಾಗೆ, ಗುಬ್ಬಚ್ಚಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಇಂತ ಸಂದರ್ಭದಲ್ಲಿ ಜೆಪಿ ಸ್ವಾಮಿ 4 ಏಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಗೆ ಟ್ಯಾಂಕರ್‌ ಮೂಲಕ ನೀರು ಉಣಿಸಿ ಬಂಪರ್‌ ಬೆಳೆ ತೆಗೆದು, ಬರಗಾಲದಲ್ಲೂ ದ್ರಾಕ್ಷಿ ಬೆಳೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಐದು ವರ್ಷದ ಹಿಂದೆ ದ್ರಾಕ್ಷಿಯನ್ನು ನಾಟಿ ಮಾಡಿದ್ದರು. ಮುಂದೆ ಪ್ರತಿವರ್ಷ ಬರಗಾಲ ಹೆಚ್ಚಾಗಿ ಆವರಸಿತು.  ಆಗ 4 ಏಕರೆ ದ್ರಾಕ್ಷಿ$ ಬೆಳೆಗೆ ಸಮರ್ಪಕವಾದ ನೀರು ಪುರೈಕೆಗೆ ಆಗಲಿಲ್ಲ. ಇದಕ್ಕೆ ಮಾಡಿದ ಉಪಾಯ ಏನೆಂದರೆ,  ಕಳೆದ 3 ವರ್ಷದಿಂದ ಬಸವನಬಾಗೇವಾಡಿ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಇರುವ ಇವಲ ತೋಟಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಇದರಿಂದ ಒಂದೇ ಒಂದು ದ್ರಾಕ್ಷಿ ಗಿಡ ಕೂಡ ಒಣಗಿದ ಉದಾಹರಣೆ ಇಲ್ಲ. 

ಮಾರುಕಟ್ಟೆಯ ಸ್ಥಿತಿ 
ಈಗ ಮಾರುಕಟ್ಟೆಯಲ್ಲಿ ಹಸಿ ದ್ರಾಕ್ಷಿಗೆ ಪ್ರತಿ ಕೆ.ಜಿ. ಗೆ 40 ರಿಂದ 60 ರೂ. ಮಾರುಕಟ್ಟೆ ಇದೆ. ಆದರೆ ರೈತರಿಂದ ವ್ಯಾಪಾರಸ್ಥರು ರೈತನ ಜಮೀನಿಗೆ ಬಂದು ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋಗಬೇಕಾದರೆ ರೈತನಿಂದ ಆ ವ್ಯಾಪಾರಸ್ಥ ಪ್ರತಿ ಒಂದು ಕೆ.ಜಿ.ಗೆ 30 ರಿಂದ 35 ರೂ ಗೆ ಖರೀದಿ ಮಾಡುತ್ತಾರೆ. ಆದರೆ ಎಲ್ಲಾ ದ್ರಾಕ್ಷಿ$ಯನ್ನು ಆ ವ್ಯಾಪಾರಸ್ಥ ಪ್ರತಿ ಒಂದು ಕೆ.ಜಿ.ಗೆ 30 ರಿಂದ 35 ರೂ ಗೆ ಖರೀದಿ ಮಾಡುವದಿಲ್ಲಾ.  ತನಗೆ ಇಷ್ಟವಾದ ಮತ್ತು ಉತ್ತಮ ಇರುವ ಹಸಿ ದ್ರಾಕ್ಷಿ$ಯನ್ನು ಮಾತ್ರ ಖರೀದಿಸುತ್ತಾನೆ. ಹೀಗಾಗಿ ರೈತನಿಗೆ ಇದರಿಂದ ಲಾಭವಾಗುವುದಿಲ್ಲಾ. ಹಿಂದುಳಿದ ದ್ರಾಕ್ಷಿ$ ಅಡ್ಡಾ ದಿಡ್ಡಿಗೆ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಹೀಗಾಗಿ ಹೆಚ್ಚಾಗಿ ರೈತರು ಒಣ ದ್ರಾಕ್ಷಿಯತ್ತ ಹೊರಳಿರುವುದು ಸಾಮಾನ್ಯವಾಗಿದೆ. 

 ಸ್ವಾಮಿಗೆ ನಾಲ್ಕು ಎಕರೆ ಹಸಿ ದ್ರಾಕ್ಷಿ ಬೆಳೆಯಲು ವರ್ಷಕ್ಕೆ ನಾಲ್ಕು ಲಕ್ಷ ಖರ್ಚು. ಆಮೇಲೆ ಒಂದು ಎಕರೆಗೆ ನಾಲ್ಕು ಟನ ಒಣದ್ರಾಕ್ಷಿ ಸಿಗುತ್ತದೆ. ಇದರ ಸಿಗುವ ಮಾರುಕಟ್ಟೆ ಮೌಲ್ಯ ಕೆ.ಜಿಗೆ 170ರಿಂದ 200ರೂ. ಸರಾಸರಿ ಎಕರೆಗೆ ನಾಲ್ಕು ಲಕ್ಷ ಆದಾಯ.  ಹೀಗೆ ಲಾಭದ ಗಂಟು ಇದೆ ಅಂತ ತೋರಿಸಿಕೊಟ್ಟಿದ್ದಾರೆ. 

ಒಣದ್ರಾಕ್ಷಿ ಮಾಡಲು ಕಷ್ಟ ಏನಿಲ್ಲ.  ಬೆಳೆಗಳ ಅನುಗುಣವಾಗಿ  1 ಲಕ್ಷ ದಿಂದ 1.50 ಲಕ್ಷದ ವರೆಗೆ ಶೆಡ್‌ ನಿರ್ಮಾಣ ಮಾಡುತ್ತಾರೆ.  ಒಣ ದ್ರಾಕ್ಷಿ$ ಮಾಡಲು ಇದಕ್ಕೆ ಸಮಯ 15 ರಿಂದ 20 ದಿನ ಮಾತ್ರ ಬೇಕು. ನಂತರ ಇದಕ್ಕೆ ವಾತಾವರಣದ ಆಧಾರದ ಮೇಲೆ ಕೆಲವರು ಗಂಧಕವನ್ನು ನೀಡುತ್ತಾರೆ. ಒಣ ದ್ರಾಕ್ಷಿ$ ಮಾಡುವ ಮೊದಲು ಕಾಬೊಟಿನ್‌ ಆಯಿಲ್‌ ಬಳಿಸಬೇಕು. ಆಗ ಉತ್ತಮವಾದ ಒಣ ದ್ರಾಕ್ಷಿ$ 15 ರಿಂದ 20 ದಿನದಲ್ಲಿ ರೈತನ ಕೈಗೆ ಸಿಗುತ್ತದೆ. ನಂತರ ಆತ ಒಳ್ಳೆಯ ಬೆಲೆ ಸಿಗುವ ಮಾರುಕಟ್ಟೆಗೆ ಅದನ್ನು  ಮಾರಾಟ ಮಾಡಲು ಮುಂದಾಗುತ್ತಾರೆ. ಸ್ವಾಮಿ ಕೆಲ ಸಲ  ರೈತರು ವಿಜಯಪುರ ನಗರದಲ್ಲಿ,  ಇನ್ನೂ ಕೆಲ ಸಲ ಮಹಾರಾಷ್ಟ್ರದ ತಾಸಗಾಂವಗೆ ಮಾರಾಟ ಮಾಡುತ್ತಾರೆ. ಇಲ್ಲಿ ಬೆಲೆ ಇಳಿಮುಖವಾದರು ಅಲ್ಲಿ ಕೆ.ಜಿಗೆ  150 ರಿಂದ 180 ರೂ. ವರೆಗೆ ಬೆಲೆ ಸಿಗುತ್ತದೆ ಎನ್ನುತ್ತಾರೆ ಸ್ವಾಮಿ. 

ಪ್ರಕಾಶ.ಜಿ. ಬೆಣ್ಣೂರ

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.