ಜಿಎಸ್‌ಟಿ ವಿಚಾರ ಸಂಕಿರಣ: ನೂತನ ತೆರಿಗೆ ನೀತಿಗೆ ಹೊಂದಿಕೊಳ್ಳಲು ಸಲಹೆ
Team Udayavani, Mar 6, 2017, 4:30 PM IST
ಮಡಿಕೇರಿ: ದೇಶದಲ್ಲಿ ಜಾರಿಗೆ ಬರುತ್ತಿ ರುವ ಜಿಎಸ್‌ಟಿ (ಗೂಡ್ಸ್ ಸರ್ವಿಸ್ ಟ್ಯಾಕ್ಸ್) ತೆರಿಗೆ ಪದ್ಧತಿ ಅತ್ಯಂತ ಸರಳ ಮತ್ತು ಪಾರದರ್ಶಕವಾಗಿದ್ದು, ಇದಕ್ಕೆ ವರ್ತಕರು ಹೊಂದಿಕೊಳ್ಳುವ ಅಗತ್ಯವಿದೆ ಎಂದು ಸೇವಾ ತೆರಿಗೆ ಇಲಾಖಾ ಆಯುಕ್ತರಾದ ಎಂ. ವಿನೋದ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರವ್ಯಾಪಿ ಜಾರಿಗೆ ತರಲು ಉದ್ದೇಶಿಸಲಾಗಿರುವ ಏಕರೂಪದ ಜಿಎಸ್‌ಟಿ ತೆರಿಗೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ವರ್ತಕ ಸಮುದಾಯ ಹಾಗೂ ಸಾರ್ವಜ ನಿಕರಿಗೆ ಮಾಹಿತಿಯನ್ನು ಒದಗಿಸುವ ಜಿಎಸ್‌ಟಿ ತೆರಿಗೆ ವಿಚಾರ ಸಂಕಿರಣ ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆಯಿತು.
ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಎಂ. ವಿನೋದ್ ಕುಮಾರ್, ಜಿಎಸ್‌ಟಿ ಪದ್ಧತಿ ಜನಸ್ನೇಹಿ ಯಾಗಿದೆ ಎಂದು ಅಭಿಪ್ರಾಯಪಟ್ಟರು. ಹೊಸ ತೆರಿಗೆ ನೀತಿಯ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.
ಜುಲೈ 1ರಿಂದ ಜಾರಿಗೆ ಬರಲಿರುವ ಜಿಎಸ್‌ಟಿ ಪದ್ಧತಿಯನ್ನು ಯಶಸ್ವಿಗೊಳಿಸಲು ವರ್ತಕರ ಸಹಕಾರ ಅಗತ್ಯವೆಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದ ತೆರಿಗೆಗಳನ್ನು ಒಳಗೊಂಡ ಏಕರೂಪದ ಜಿಎಸ್‌ಟಿ ತೆರಿಗೆ ನೋಂದಣಿ ಮತ್ತು ಪಾವತಿಗಳೆರಡು ಆನ್‌ಲೈನ್ ಮೂಲಕ ನಡೆಯಲಿದ್ದು, ಇದೊಂದು ರಾಷ್ಟ್ರದ ತೆರಿಗೆ ಸಂಗ್ರಹ ಪದ್ಧತಿಯಲ್ಲಿನ ಅತೀ ದೊಡ್ಡ ಕ್ರಾಂತಿಯೆಂದು ಅಭಿಪ್ರಾಯಪಟ್ಟರು.
ನೂತನ ತೆರಿಗೆ ಪದ್ಧತಿಯನ್ನು ಯಶಸ್ವಿಗೊಳಿಸಲು ತೆರಿಗೆ ಪಾವತಿದಾರರಿಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಎಂ. ವಿನೋದ್ ಕುಮಾರ್ ತಿಳಿಸಿದರು.
ತೆರಿಗೆ ಇಲಾಖಾ ಅಧಿಕಾರಿ ವೆಂಕಟೇಶ್ ಮಾತನಾಡಿ, ಅನೇಕ ವಿಧದ ತೆರಿಗೆಗಳು ಜನ ಸಾಮಾನ್ಯರಿಗೆ ಕ್ಲಿಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿತ್ತು. ಇದೀಗ ಜಾರಿಗೆ ಬಂದಿರುವ ಜಿಎಸ್‌ಟಿ ಏಕರೂಪದ ತೆರಿಗೆ ಪದ್ಧತಿ ಹೆಚ್ಚು ಅನುಕೂಲವನ್ನು ಕಲ್ಪಿಸಲಿದೆ ಎಂದರು.
ಉತ್ಪಾದನೆ ಮತ್ತು ಮಾರಾಟವನ್ನು ಹೊರತು ಪಡಿಸಿದಂತೆ ಸರಬರಾಜಿಗೆ ಮಾತ್ರ ತೆರಿಗೆ ಸೀಮಿತವಾಗಿರಲಿದೆ. ಕೇಂದ್ರದ ಹಣಕಾಸು ಸಚಿವ
ಅರುಣ್ ಜೇಟಿ ನೇತೃತ್ವದಲ್ಲಿ 29 ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುವ ಜಿಎಸ್‌ಟಿ ಕೌನ್ಸಿಲ್ ಈ ನೂತನ ತೆರಿಗೆ ಪದ್ಧತಿಯನ್ನು ಕ್ರಮ ಬದ್ಧವಾಗಿ ಜಾರಿಗೆ ತರುವ ನಿರ್ಧಾರವನ್ನು ಕೈಗೊಳ್ಳಲಿದೆ. ಪ್ರಸ್ತುತ ವ್ಯಾಟ್, ಸರ್ವೀಸ್ ಟ್ಯಾಕ್ಸ್, ಸೇಲ್ಸ್ ಟ್ಯಾಕ್ಸ್ ಮೊದಲಾದ ತೆರಿಗೆಗಳಿವೆ. ಮುಂಬರುವ ದಿನಗಳಲ್ಲಿ ಇವೆಲ್ಲವು ಜಿಎಸ್‌ಟಿ ಮೂಲಕ ಏಕ ರೂಪದ ತೆರಿಗೆಯಾಗಿ ಮಾರ್ಪಡಲಿದೆ ಎಂದರು.
ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯ ಮತ್ತು ಕೇಂದ್ರದ ವಿವಿಧ ತೆರಿಗೆಗಳು ಜಿಎಸ್‌ಟಿ ಮೂಲಕ ಏಕ ರೂಪದ ತೆರಿಗೆಯಾಗಿ ಮಾರ್ಪಟ್ಟಿದೆ. ಇದರಿಂದ ಸರಕು ಸಾಗಣೆ ಮತ್ತು ಮಾರಾಟದ ಸಂದರ್ಭ ತೆರಿಗೆ ಬೀಳುವ ಸಂಕಷ್ಟ ದೂರವಾಗಲಿದೆ.
ರಾಷ್ಟ್ರವ್ಯಾಪಿ ಜಿಎಸ್‌ಟಿ ತೆರಿಗೆ ಏಕರೂಪ ದ್ದಾಗಿರುತ್ತದೆ ಮತ್ತು ಯಾವುದೇ ಸರಕಿಗೆ ತೆರಿಗೆಯಿಂದ ವಿನಾಯಿತಿ ಇದ್ದುದೇ ಆದಲ್ಲಿ ಅದು ಇಡೀ ರಾಷ್ಟ್ರಕ್ಕೆ ಅನ್ವಯವಾಗುವುದರಿಂದ ವರ್ತಕ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿನೋದ್ ಕುಮಾರ್ ತಿಳಿಸಿದರು.
ಜಿಎಸ್‌ಟಿ ತೆರಿಗೆ ಪದ್ಧತಿಯಡಿ ಪ್ರತಿಯೊಂದು ಸರಕಿಗೂ ಪ್ರತ್ಯೇಕವಾದ ಕೋಡ್ ನೀಡಲಾಗುತ್ತದೆ ಎಂದು ತಿಳಿಸಿದ ವೆಂಕಟೇಶ್, ಜಿಎಸ್‌ಟಿ ಪದ್ಧತಿಯಡಿ ಎಲ್ಲ ರಾಜ್ಯಗಳಲ್ಲಿ ತೆರಿಗೆ ಏಕರೂಪದಲ್ಲಿ ಇರುವಂತೆ ನೋಡಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಸ್ಥಾನೀಯ ಸಮಿತಿ ಸಂಘಟನೆ
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎಸ್. ಪ್ರಕಾಶ್ ಮಾತನಾಡಿ, ಸಂಸ್ಥೆಯ ಸ್ಥಾನೀಯ ಸಮಿತಿಗಳನ್ನು ಮತ್ತಷ್ಟು ಸಂಘಟಿಸುವ ಮೂಲಕ ಜಿಎಸ್‌ಟಿ ಪದ್ಧತಿ ಕುರಿತು ಜಾಗೃತಿ ಮೂಡಿಸಿ ಹೊಸ ತೆರಿಗೆ ನೀತಿಯನ್ನು ಜಿಲ್ಲೆಯಲ್ಲಿ ಯಶಸ್ವಿ ಗೊಳಿಸಲಾಗುವುದೆಂದು ತಿಳಿಸಿದರು.
ಸೆಂಟ್ರಲ್ ಎಕ್ಸೆçಸ್‌ನ ಜೋನಲ್ ಕಮೀಷನರ್ ರಾಜ್ ಕುಮಾರ್, ಕಸ್ಟಮ್ಸ್‌ನ ಕಮಿಷನರ್ ರಾಜೀವ್ ತಿವಾರಿ, ಸೆಂಟ್ರಲ್ ಎಕ್ಸೆ„ಸ್‌ನ ಕಮಿಷನರ್ ಜಿ.ವಿ. ಕೃಷ್ಣರಾವ್ ಪಾಲ್ಗೊಂಡು ಜಿಎಸ್‌ಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.