ಗರೋಡಿ ಗೈಸ್ ಮಿನದನ ಉದ್ಘಾಟನೆ
Team Udayavani, Mar 6, 2017, 5:16 PM IST
ಕಾಪು: ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಯುವ ಜನರು ಬಾಹ್ಯ ಪ್ರಪಂಚದ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆಂಬ ಆತಂಕ – ಅಪವಾದಗಳಿವೆ. ಇದಕ್ಕೆ ಅಪವಾದ ವೆಂಬಂತೆ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾದ ಗರೋಡಿ ಗೈಯ್ಸ ವಾಟ್ಸಾಪ್ ಗ್ರೂಪ್‌ನ ಸದಸ್ಯರು ಗರೋಡಿ ಗೈಸ್ – ಮಿನದನ 2017 ಎಂಬ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿ, ತುಳುನಾಡ ಗರೋಡಿಗಳ ಬಗ್ಗೆ ವಿಸ್ಕೃತವಾಗಿ ಚರ್ಚಿಸಿ, ವಿಚಾರ-ವಿನಿಮಯ ಮಾಡಿ ಕೊಳ್ಳುವ ಮೂಲಕ ಇತರ ಯುವಕರಿಗೆ ಮಾದರಿಯಾಗಿ ಮೂಡಿ ಬಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಮಾತ್ರವಲ್ಲದೇ ಬೆಂಗಳೂರು, ಮುಂಬಯಿ, ಅರಬ್ ರಾಷ್ಟ್ರಗಳಲ್ಲಿ ನೆಲೆಸಿರುವ ಸುಮಾರು 176 ಮಂದಿ ಸದಸ್ಯರನ್ನು ಸೇರಿಸಿಕೊಂಡು ರಚಿಸಲಾಗಿರುವ ಗರೋಡಿ ಗೈಸ್ ವಾಟ್ಸಾéಪ್ ಗ್ರೂಪ್ ಇಂದು ಎಲ್ಲೆಡೆ ಮನೆಮಾತಾಗಿದ್ದು, ಈ ಗುಂಪಿನ ಸದಸ್ಯರೆಲ್ಲರ ಹಲವು ಸಮಯಗಳ ಹಿಂದಿನ ನಿರ್ಧಾರದಂತೆ ಮಾ. 5ರಂದು ಉಡುಪಿ-ಕಿನ್ನಿಮೂಲ್ಕಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಾಂಗಣದಲ್ಲಿ ಜತೆ ಸೇರಿ ಗರೋಡಿ ಗೈಸ್ – ಮಿನದನ 2017 ಎಂಬ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅತ್ಯಂತ ಅರ್ಥಪೂರ್ಣವಾಗಿ ನಡೆದ ಗರೋಡಿ ಗೈಸ್ – ಮಿನದನ 2017 ಬನ್ನಂಜೆ ಬಾಬು ಅಮೀನ್ ಅವರು ಉದ್ಘಾಟಿಸಿ, ವಿಚಾರಗೋಷ್ಠಿಯನ್ನು ನಡೆಸಿಕೊಟ್ಟರು.
ನಿಖೀಲ್ ಪೂಜಾರಿ ಹೆಬ್ರಿ, ಕೇಂಜ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್, ಗುರುರಾಜ್ ಪೂಜಾರಿ ಹೆಜಮಾಡಿ, ಕಿನ್ನಿಮೂಲ್ಕಿ ಗರೋಡಿಯ ಅರ್ಚಕ ಭಾಸ್ಕರ ಸುವರ್ಣ , ಅಗತ್ತಾಡಿ ದೋಲ ಬರಿಕೆಯ ಶೈಲೇಶ್ ಬಿರ್ವ ಅವರು ವಿಚಾರ ಮಂಡಿಸಿದರು.
ಗರೋಡಿ ಗೈಸ್ ವಾಟ್ಸಾಫ್ ಗ್ರೂಪ್‌ನ ಅಡ್ಮಿನ್‌ಗಳಾದ ಮಹೇಶ್ ಸುವರ್ಣ ಬೋಳೂರು, ದೀಪಕ್ ಬೋಳೂರು, ನಿತಿನ್ ಬೋಳೂರು ಸಂಚಾಲಕತ್ವದಲ್ಲಿ ಗರೋಡಿ ಗೈಸ್ ಮಿನದನ 2017 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪವನ್
ಅಮೀನ್ ಬೋಳೂರು, ಪಾಂಡು ಕೋಟ್ಯಾನ್, ರಜತ್ ಜತ್ತನ್, ನವೀನ್ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.