ಮಾಹಿತಿ ಶಿಬಿರ ಉದ್ಘಾಟನೆ: “ನಿಜ ಅರಿತು ಅರ್ಹರಿಗೆ ಪರಿಹಾರ ಕೊಡಿ’


Team Udayavani, Mar 6, 2017, 6:25 PM IST

06-KARKAL-9.jpg

ಕುಂದಾಪುರ: ಅಪರಾಧ ಪ್ರಕರಣಗಳಲ್ಲಿ ನೊಂದಿರುವ ದೂರುದಾರರಿಗೆ ಪರಿಹಾರ ಸಿಗಬೇಕು. ಅವರಿಗೆ ಕಾನೂನು ಪ್ರಾಧಿಕಾರ ಪರಿಹಾರ ಸಿಗುವಂತೆ ಮಾಡಬೇಕಾಗಿರುವುದು ಅದರ ಹೆಚ್ಚಿನ ಹೊಣೆಗಾರಿಕೆಯಾಗಿದೆ. ನೊಂದವರಿಗೆ  ಕಾನೂನು ಪ್ರಾಧಿಕಾರದ ಪರಿಹಾರ ಸಿಗುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ  ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ‌ ರಾಜಶೇಖರ ವಿ. ಪಾಟೀಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಸಂಜೆ ತಾಲ್ಲೂಕು ಕಾನೂನು ಸೇವಾ ಸಮಿತಿ, ಬಾರ್‌ ಅಸೋಸಿಯೇಶನ್‌, ಅಭಿಯೋಗ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರ ಮತ್ತು ನೊಂದವರ ಪರಿಹಾರದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಐಪಿಸಿ 537 ನೇ ಕಲಂ ನಲ್ಲಿ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ನೀಡಬೇಕು ಎನ್ನುವ ಕುರಿತು ಒಂದಷ್ಟು ಅಂಶಗಳು ಇದ್ದರೂ, ಈ ಕಾನೂನು ವ್ಯಾಪ್ತಿಯ ಒಳಗೆ ನೊಂದವರಿಗೆ ನೀಡುವ ಪರಿಹಾರದ ಮೊತ್ತದ ಪ್ರಮಾಣ ನ್ಯಾಯ ಪೂರ್ಣವಾಗಿಲ್ಲ ಎನ್ನುವ ಸಮಷ್ಟಿ ಅಭಿಪ್ರಾಯಗಳ ಪರಿಗಣನೆಯನ್ನು ತೆಗೆದುಕೊಂಡು 357 (ಎ) ತಿದ್ದುಪಡಿಯನ್ನು ಮಾಡಿ ನೊಂದವರಿಗೆ ಪರಿಹಾರವನ್ನು ಒದಗಿಸುವಲ್ಲಿ ನ್ಯಾಯ ಪಾಲನೆ ಮಾಡುವ ಪ್ರಯತ್ನಗಳು ನಡೆದಿದೆ. ನಿಜವಾದ ಫಲನಾನುಭವಿಗಳಿಗ ಪರಿಹಾರ ಒದಗಿಸುವಲ್ಲಿ ತನಿಖಾಧಿಧಿಕಾರಿಗಳು ಪ್ರಯತ್ನಿಸಬೇಕು. ಪರಿಹಾರ ಹಣಕ್ಕಾಗಿ ಏಜೆಂಟರು ಹುಟ್ಟಿಕೊಳ್ಳದಂತೆ ತಡೆಬೇಕಾದ ಹೊಣೆಯೂ ಜಾಗೃತ ಸಮಾಜದ ಮುಂದಿದೆ  ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ ಅವರು ಸಿಆರ್‌ಪಿಸಿ 357ರಲ್ಲಿ ಅಪರಾಧ ಸಾಬೀತಾದ ಪ್ರಕರಣಗಳಲ್ಲಿ ನೊಂದವರಿಗೆ ಅಪರಾಧಿಧಿಯಿಂದ ಪಡೆಯಲಾದ ದಂಡ ಮೊತ್ತದಲ್ಲಿ ಒಂದಂಶ ಕೊಡಬೇಕು ಎನ್ನುವುದಕ್ಕೆ ಮಾತ್ರ ಸೀಮಿತವಾಗಿತ್ತು. ಕೆಲವೊಂದು ಅಪರಾಧ ಪ್ರಕರಣಗಳಿಗೆ ವಿಶೇಷ ಕಾನೂನು ರೂಪಣೆಯಾದಾಗ ಅದರಲ್ಲಿ ಪರಿಹಾರದ ಮೊತ್ತವನ್ನು ನಿಗದಿ ಪಡಿಸಲಾಗಿತ್ತು. ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ನೊಂದವ ರಿಗೆ ನೀಡಲಾಗುವ ಪರಿಹಾರ ಹಣ ಸಾಕಾಗುವುದಿಲ್ಲ, ಇದು ಹೆಚ್ಚಾಗಬೇಕು ಎನ್ನುವ ನ್ಯಾಯಾಧಿಧೀಶರ‌ ಅಭಿಪ್ರಾಯಗಳಿಗೆ ಮನ್ನಣೆ ನೀಡಿ 357(ಎ) ತಿದ್ದುಪಡಿಯ ಮೂಲಕ ಹೆಚ್ಚುವರಿ ಪರಿಹಾರವನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಕುಂದಾಪುರ ಬಾರ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ ಸಾಲಿಯಾನ್ಸ್‌, ಉಪವಿಭಾಗದ ಡಿವೈಎಸ್‌ಪಿ ಪ್ರವೀಣ್‌ ಎಚ್‌. ನಾಯಕ್‌, ಸಹಾಯಕ ಸರಕಾರಿ  ಅಭಿಯೋಜಕ ಸಂದೇಶ ಭಂಡಾರಿ, ತಾ.ಪಂ. ಅಧ್ಯಕ್ಷೆ ಜಯಶ್ರೀ  ಮೊಗವೀರ, ಉಪಾಧ್ಯಕ್ಷ ಪ್ರವೀಣ್‌ಕುಮಾರ ಶೆಟ್ಟಿ ಕಡೆR, ಪುರಸಭೆಯ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಗೃಹ ರಕ್ಷಕ ದಳ ಜಿಲ್ಲಾ ಸೆಕಂಡ್‌ ಇನ್‌ ಕಮಾಂಡ್‌ ರಾಜೇಶ್‌ ಕೆ.ಸಿ., ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವ ಪಡೀಲ್‌, ಎಸ್‌.ಐ. ನಾಸೀರ್‌ ಹುಸೇನ್‌  ಮೊದಲಾದವರು ಉಪಸ್ಥಿತರಿದ್ದರು.

ಬಾರ್‌ ಅಸೋಸೀಯೇಶನ್‌ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು, ನ್ಯಾಯವಾದಿ ರಾಘವೇಂದ್ರ ಚರಣ್‌ ನಾವಡ ನಿರೂಪಿಸಿದರು.  ಬೈಂದೂರು  ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜಪ್ಪ ವಂದಿಸಿದರು.

ಟಾಪ್ ನ್ಯೂಸ್

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.