ಕುದಿಯುವ ನೀರು ಮೈಮೇಲೆ ಬಿದ್ದು 4 ವರ್ಷದ ಮಗು ಸಾವು
Team Udayavani, Mar 7, 2017, 11:55 AM IST
ಯಲಹಂಕ: ಸ್ನಾನಕ್ಕೆಂದು ಬಿಸಿ ಮಾಡಿಟ್ಟಿದ್ದ ನೀರು ಮೈಮೇಲೆ ಬಿದ್ದು ಬಾಲಕ ಮೃತಪಟ್ಟ ಘಟನೆ ಯಲಹಂಕ ಉಪನಗರ ಠಾಣೆ ವ್ಯಾಪ್ತಿಯ ಅಟ್ಟೂರು ಲೇಜೌಟ್ನಲ್ಲಿ ನಡೆದಿದೆ. ಲೇಔಟ್ ನಿವಾಸಿ ಆಶಾ ಎಂಬುವರ ಪುತ್ರ ಮಾರ್ಟಿನೆ ಶೇಷಾದ್ರಿ (4) ಮೃತ ಬಾಲಕ.
ಗಾರ್ಮೆಂಟ್ಸ್ ನೌಕರರಾಗಿರುವ ಆಶಾ ಅವರ ಪತಿ ಭರತ್, ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಆಶಾ ಅವರು ತಾಯಿ ಲಕ್ಷಮ್ಮ ಮತ್ತು ತಂದೆ ಕರಿನಾಗಪ್ಪಜತೆ ವಾಸವಿದ್ದಾರೆ. ಇವರು ನಿತ್ಯ ಸ್ನಾನಕ್ಕೆಂದು ಮನೆಯ ಹಾಲ್ನಲ್ಲೇ ಬಕೆಟ್ ಇರಿಸಿ, ಎಲೆಕ್ಟ್ರಿಕ್ ಕಾಯಿಲ್ ಬಳಸಿ ನೀರು ಬಿಸಿ ಮಾಡಿಕೊಳ್ಳುತ್ತಿದ್ದರು.
ಸೋಮವಾರ ಕೂಡ ಎಂದಿನಂತೆ ನೀರು ಬಿಸಿ ಮಾಡಲು ಬಕೆಟ್ಗೆ ಕಾಯಿಲ್ ಹಾಕಿದ್ದು, ನೀರು ಅಗತ್ಯಕ್ಕಿಂತ ಹೆಚ್ಚೇ ಬಿಸಿಯಾಗಿದೆ. ಲಕ್ಷ್ಮಮ್ಮ ಅವರು ಈ ನೀರಿಗೆ ಬೆರೆಸಲು ತಣ್ಣೀರು ತರಲು ಹೋದಾಗ, ಅಲ್ಲೇ ಆಟವಾಡುತ್ತಿದ್ದ ಮಗು, ಬಕೆಟ್ ಬಳಿ ಬಂದು ಕಾಯಿಲ್ ಎಳೆದಾಗ ಕುದಿಯುತ್ತಿದ್ದ ನೀರು ಮಗುವಿನ ಮೈಮೇಲೆ ಬಿದ್ದಿವೆ.
ಪರಿಣಾಮ, ಮಗುವಿನ ಮೈತುಂಬಾ ಬೊಬ್ಬೆ ಬಂದಿದ್ದು, ತಕ್ಷಣ ಸಮೀಪದ ಖಾಸಗಿ ಆಸ್ವತ್ರೆಗೆ ದಾಖಲಿಸಿದ್ದಾರೆ. ನಂತರ ವಿಕ್ಟೋರಿಯಾಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.