ಡಬ್ಬಿಂಗ್ ವಿರೋಧಿ ಹೋರಾಟ ಬೆಂಬಲಿಸಲು ವಾಟಾಳ್ ಮನವಿ
Team Udayavani, Mar 7, 2017, 12:30 PM IST
ಬೆಂಗಳೂರು: ರಾಜ್ಯದಲ್ಲಿ ಡಬ್ಬಿಂಗ್ ಚಿತ್ರ ಪ್ರದರ್ಶನ ವಿರೋಧಿಸಿ ಮಾರ್ಚ್ 9ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲು ಮುಂದಾ ಗಿರುವ ಕನ್ನಡ ಒಕ್ಕೂಟವು ಡಬ್ಬಿಂಗ್ ವಿರೋಧಿಸುವವರೆಲ್ಲಾ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ವಾಟಾಳ್ ನಾಗರಾಜ್, “ಡಬ್ಬಿಂಗ್ ಚಿತ್ರಗಳ ರೂಪದಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾಯ ತಲೆದೋರಿದೆ. ಹಾಗಾಗಿ ಡಬ್ಬಿಂಗ್ ವಿರೋಧಿಸಿ ಕರೆಯಲಾಗಿದ್ದ ಸಭೆಯಲ್ಲಿ ಬೃಹತ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ,” ಎಂದು ಹೇಳಿದರು.
“ಡಬ್ಬಿಂಗ್ ವಿರೋಧಿಸಿ ಮಾ.9ರ ಬೆಳಗ್ಗೆ 10.30ಕ್ಕೆ ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ರ್ಯಾಲಿ ನಡೆಸಲಾಗುವುದು. ಕನ್ನಡಿಗರ ಶಕ್ತಿ ಪ್ರದರ್ಶನಕ್ಕಾಗಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಚಿತ್ರ ರಂಗದ ಎಲ್ಲರೂ, ಡಬ್ಬಿಂಗ್ ವಿರುದ್ಧ ವಿರುವವರು ಹೋರಾಟದಲ್ಲಿ ಪಾಲ್ಗೊಳ್ಳಬೇಕು,” ಎಂದು ಮನವಿ ಮಾಡಿದರು.
ಡಬ್ಬಿಂಗ್ ವಿರೋಧಕ್ಕೆ ದೊಡ್ಡ ಇತಿಹಾಸವಿದ್ದು, 53 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿ ಕೊಂಡು ಬರಲಾಗಿದೆ. ಸಾಕಷ್ಟು ಹಿರಿ ಯರು ಹೋರಾಟ ಮಾಡಿ ತಡೆಹಿಡಿ ದಿದ್ದ ಡಬ್ಬಿಂಗ್ ಚಿತ್ರ ಪ್ರದರ್ಶನಕ್ಕೆ ಮತ್ತೆ ಅವಕಾಶ ನೀಡಿದರೆ ಹಿಂದೆ ಹೋರಾಡಿದವರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.
ಡಬ್ಬಿಂಗ್ ಬೆಂಬಲಿಸುವವರು ಕನ್ನಡ ದ್ರೋಹಿಗಳು, ಕಪಟಿಗಳು, ದರೋಡೆಕೋರರು. “ಎನೈ ಅರಿಂದಾಳ್’ ತಮಿಳುಚಿತ್ರವನ್ನು “ಸತ್ಯದೇವ್ ಐಪಿಎಸ್’ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಮಾಡಿ ಪ್ರದರ್ಶಿಸಲು ಕೆಲವರು ಮುಂದಾಗಿದ್ದಾರೆ. ಈ ಚಿತ್ರದ ನಟ ಅಜಿತ್ ಕಾವೇರಿ ವಿಚಾರ ದಲ್ಲಿ ರಾಜ್ಯಕ್ಕೆ ವಿರುದ್ಧವಾಗಿ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆ ನಟನ ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ರೂಪದಲ್ಲಿ ಬಂದರೆ ರಾಜ್ಯದ ಕತೆಯೇನು ಎಂದು ಹೇಳಿದರು.
ನಿರ್ಮಾಪಕ, ನಿರ್ದೇಶಕನನ್ನು ಬಂಧಿಸಬೇಕು: ಈ ಡಬ್ಬಿಂಗ್ ಚಿತ್ರ ಬಿಡುಗಡೆಯಿಂದ ಕನ್ನಡಿಗರು ಹಾಗೂ ತಮಿಳು ಭಾಷಿಕರ ನಡುವೆ ಸಂಘರ್ಷಕ್ಕೆ ಕಾರಣವಾಗಿ ಅಶಾಂತಿ ಸೃಷ್ಟಿಯಾಗಬಹುದು. ಹಾಗಾಗಿ ಈ ಡಬ್ಬಿಂಗ್ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಕೂಡಲೇ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧಿಸಬೇಕು.ಈ ಇಬ್ಬರನ್ನು ರಾಜ್ಯ ದಿಂದ ಗಡಿಪಾರು ಮಾಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಅಭಿನಂದನೆ: “ಸತ್ಯದೇವ್ ಐಪಿ ಎಸ್’ ಚಿತ್ರವನ್ನು ರಾಜ್ಯದ 50 ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಯತ್ನಿ ಸಿದರೂ ಎಲ್ಲಿಯೂ ತೆರೆ ಕಂಡಿಲ್ಲ. ಇದಕ್ಕಾಗಿ ರಾಜ್ಯದ ಚಿತ್ರಮಂದಿರ ಮಾಲೀಕರನ್ನು ಅಭಿನಂದಿಸುತ್ತೇನೆ ಎಂದರು. ಹಿರಿಯ ನಟ ಸುಂದರ್‌ರಾಜ್, “ಡಬ್ಬಿಂಗ್ ವಿರುದ್ಧ ನಡೆದ ಹೋರಾಟದ ಲಾಭ ಪಡೆದವರು ಇಂದು ಹವಾನಿಯಂತ್ರಿತ ಕೊಠಡಿ ಯಲ್ಲಿ ಆರಾಮವಾಗಿದ್ದಾರೆ. ಆದರೆ ಹೋರಾಟಗಾರರು ಇಂದಿಗೂ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಎರಡೆರಡು ಸಂಘ, ಮಂಡಳಿಗಳು ರಚನೆಯಾಗುತ್ತಿವೆ.
ಹೋರಾಟಗಾರ ರಿಂದಾಗಿ ಕಲಾವಿದರೆಲ್ಲಾ ಅನ್ನ ತಿನ್ನುತ್ತಿದ್ದೇವೆ. ಹೋರಾಟಗಾರರಿಂದಾ ಗಿಯೇ ಇಂದು ಹಲವರು ಸ್ವಂತ ಮನೆ ಕಟ್ಟಿದ್ದಾರೆ, ಕಾರಿನಲ್ಲಿ ಓಡಾಡುತ್ತಿ ದ್ದಾರೆ. ಎಲ್ಲರೂ ಹೋರಾಟ ಬೆಂಬಲಿ ಸಬೇಕು,” ಎಂದರು. ನಟಿ ತಾರಾ ಅನುರಾಧ, ಕನ್ನಡ ಸೇನೆಯ ಕೆ.ಆರ್.ಕುಮಾರ್, ಕರ್ನಾ ಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ನಿರ್ದೇಶಕ ಎಚ್.ವಾಸು ಇತರರು ಉಪಸ್ಥಿತರಿದ್ದರು.
ನಾಲಗೆ ಕತ್ತರಿಸುತ್ತೇವೆ
ಡಬ್ಬಿಂಗ್ ವಿಚಾರ ಆಗಾಗ್ಗೆ ಸದ್ದು ಮಾಡುತ್ತಿದ್ದು, ಡಬ್ಬಿಂಗ್ ಚಿತ್ರಕ್ಕೆ ಮೊದಲಿನಿಂದಲೂ ನನ್ನ ವಿರೋಧವಿದೆ. ಕಳೆದ ಶುಕ್ರವಾರ ರಾಜ್ಯದ ಚಿತ್ರಮಂದಿರಗಳಲ್ಲಿ ಡಬ್ಬಿಂಗ್ ಚಿತ್ರದ ಬಿಡುಗಡೆಗೆ ಯತ್ನ ನಡೆದರೂ ಎಲ್ಲೂ ಪ್ರದರ್ಶನ ಕಂಡಿಲ್ಲ. ಡಬ್ಬಿಂಗ್ ಬಗ್ಗೆ ಯಾರಾದರೂ ಮಾತನಾಡಿದರೆ ಅವರ ನಾಲಗೆ ಕತ್ತರಿಸುತ್ತೇವೆ ಎಂದು ಕಲಾವಿದ ಬುಲೆಟ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ ಬೇಕು ಎನ್ನುವವರು ಅಸಂಘಟಿತರಾಗಿದ್ದು, ಬೇಡ ಎನ್ನುವವರು ಸಂಘಟಿತ ರಾಗಿದ್ದಾರೆ. 100 ಕೋಟಿ ರೂ. ಇರಲಿ, 500 ಕೋಟಿ ರೂ. ಬಜೆಟ್‌ನ ಚಿತ್ರವಿರಲಿ 5ರಿಂದ 10 ಲಕ್ಷ ರೂ. ವೆಚ್ಚದಲ್ಲಿ ಡಬ್ಬಿಂಗ್ ಚಿತ್ರ ರೂಪಿಸಬಹುದು. ತುಟಿ ಚಲನೆಗೆ ಭಾಷೆ ಬರೆದಾಗ ಅದರಲ್ಲಿ ಸಂಸ್ಕೃತಿಯ ಸತ್ವ ಇರುವುದಿಲ್ಲ. ಇದು ಮಕ್ಕಳಲ್ಲಿ ಕನ್ನಡ ಕಲಿಕೆ ಮೇಲೆ ಭಾರಿ ಪರಿಣಾಮ ಬೀರಲಿದೆ.
-ನಾಗೇಂದ್ರ ಪ್ರಸಾದ್, ಚಿತ್ರ ಸಾಹಿತಿ
40- 50 ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಡೆದ ಹೋರಾಟದಲ್ಲಿ ಚಿತ್ರರಂಗದ ದಿಗ್ಗಜರ ಜತೆಗೆ ವಾಟಾಳ್‌ರವರು ಕೂಡ ಪಾಲ್ಗೊಂಡಿದ್ದರು. ಶೋಕಿಗಾಗಿ ನಿರ್ಮಾಪಕರಾಗ ಬಯಸುವವರಷ್ಟೇ ಡಬ್ಬಿಂಗ್ ಬೆಂಬಲಿಸುತ್ತಾರೆ. ಚಿತ್ರರಂಗ ಬೆಳೆಯಲು ಕನ್ನಡ ಉಳಿಸಲು ಡಬ್ಬಿಂಗ್ ವಿರೋಧಿಸಬೇಕಿದೆ.
-ಹೇಮಾ ಚೌಧರಿ, ಹಿರಿಯ ಕಲಾವಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.