ಗ್ರಾಮೀಣ ಪ್ರದೇಶಕ್ಕೂ ಕಾರ್ಪೋರೆಟ್‌ ಕಂಪನಿಗಳ ಸೇವೆ


Team Udayavani, Mar 7, 2017, 1:21 PM IST

hub7.jpg

ಧಾರವಾಡ: ನಗರದ ಪ್ರದೇಶಕ್ಕೆ ಸೀಮಿತವಾಗಿದ್ದ ಕಾರ್ಪೋರೆಟ್‌ ಕಂಪನಿಗಳ ಸಾಮಾಜಿಕ ಸೇವೆ ಇದೀಗ ತಮ್ಮ ವಿಶೇಷ ಆಸಕ್ತಿಯ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಇಟ್ಟಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿಮಿಟೆಡ್‌ ತಾಲೂಕಿನ ಮರೇವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಡೆಸ್ಕ್ ವಿತರಿಸಿ ಅವರು ಮಾತನಾಡಿದರು. 

ಪ್ರಧಾನಿ ಮೋದಿ ಸೂಚನೆ ಮೇರೆಗೆ ದೇಶದಲ್ಲಿನ ವಿವಿಧ ಕಾರ್ಪೋರೆಟ್‌ ಕಂಪನಿಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟ ಶೇ.2ರಷ್ಟು ಹಣದಿಂದ ನಡೆಸುವ ಸಾಮಾಜಿಕ ಸೇವೆ ಈ ಮೊದಲು ನಗರ ಪ್ರದೇಶಕ್ಕೆ ಸಿಮೀತಗೊಂಡಿದ್ದು, ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಕಾರ್ಯ ನಡೆದಿದೆ. ಸದ್ಯ ಎಚ್‌ಪಿಸಿಎಲ್‌ ಕಂಪನಿ ತಮ್ಮ ಕ್ಷೇತ್ರಕ್ಕೆ 4.30 ಕೋಟಿ ಖರ್ಚು ಮಾಡಿದೆ.

ಕಲಘಟಗಿಯಲ್ಲಿ 28, ಶಿಗ್ಗಾವಿ-ಸವಣೂರಿನಲ್ಲಿ 25 ಸೇರಿದಂತೆ ಒಟ್ಟು 3.17 ಕೋಟಿ ವೆಚ್ಚದಲ್ಲಿ 57 ಗುಣಮಟ್ಟದಹೈಟೆಕ್‌ ಸೇರಿ ಒಟ್ಟು 150 ಶೌಚಾಯಲಗಳನ್ನು ನಿರ್ಮಿಸಲಾಗಿದೆ. ವಿವಿಧ ಶಾಲೆಗಳಿಗೆ 1,800 ಡೆಸ್ಕ್ ವಿತರಣೆಗೆ ಮುಂದಾಗಿದೆ. ಮೊದಲ ಹಂತವಾಗಿ 750 ಡೆಸ್ಕ್ ವಿತರಿಸಲಾಗುತ್ತಿದೆ. ಒಂದು ಡೆಸ್ಕ್ 4000 ಸಾವಿರ ಮೌಲ್ಯದ ಗುಣಮಟ್ಟ ಹೊಂದಿದೆ.

ಕುಂದಗೋಳದಲ್ಲಿ 25ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ಎಚ್‌ಪಿಸಿಎಲ್‌ ಸಂಸ್ಥೆ ತಮ್ಮ ಕ್ಷೇತ್ರದಲ್ಲಿ 4.30 ಕೋಟಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ದತ್ತು ಗ್ರಾಮ ಹಾರೋಬೆಳವಡಿಯನ್ನು ಸೋಲಾರ್‌ ವಿಲೇಜ್‌ ಮಾಡಲು ಮುಂದಾಗಿದ್ದು, ಕಾರ್ಪೋರೆಟ್‌ ಕಂಪನಿಸಹಕಾರದಲ್ಲಿ ಗ್ರಾಪಂನಿಂದ ನಾಲ್ಕು ಕೋಟಿ ಸೋಲಾರ್‌ ಪ್ಲಾಂಟ್‌ ಹಾಕಲಾಗುತ್ತಿದೆ. 

ಸೋಲಾರ್‌ ಪ್ಲಾಂಟ್‌ನಿಂದ ಹೆಸ್ಕಾಂಗೆ ವಿದ್ಯುತ್‌ ಮಾರಾಟ ಮಾಡುವುದರಿಂದ ಗ್ರಾಪಂಗೆ 1ರಿಂದ2 ಲಕ್ಷ ಆದಾಯ ಬರಲಿದ್ದು, ಈ ಹಣವನ್ನು ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಈ ಕಾರ್ಯ ಯಶಸ್ವಿಯಾದ ನಂತರ ಇದನ್ನು ಹಂತ-ಹಂತವಾಗಿ ತಮ್ಮಕ್ಷೇತ್ರದ ಪ್ರಮುಖ ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. 32 ಶಾಲೆಗೆ ಗೇಲ್‌ ಕಂಪನಿಯಿಂದ ಸ್ಮಾರ್ಟ್‌ಬೋರ್ಡ್‌ ವಿತರಿಸಿದೆ ಎಂದರು.

ಎಚ್‌ಪಿಸಿಎಲ್‌ ಕಂಪನಿ ವ್ಯವಸ್ಥಾಪಕ ನಂದನ ಘಜಪೇ ಮಾತನಾಡಿ, ಎಚ್‌ಪಿಸಿಎಲ್‌ ದೇಶದಲ್ಲಿ 1,500 ಬಂಕ್‌ ಹೊಂದಿದೆ. ಈ ಕಂಪನಿಯಿಂದ ಸಾಮಾಜಿಕ ಕಾರ್ಯಗಳಿಗೆ ಉತ್ತರ ಕರ್ನಾಟಕದ12 ಜಿಲ್ಲೆಗಳಲ್ಲಿ 2015-16 ರಲ್ಲಿ 18 ಶಾಲೆಗಳಿಗೆ 50 ಲಕ್ಷ, 2016-17ನೇ ಸಾಲಿನಲ್ಲಿ 65 ಲಕ್ಷದ ಉಪಕರಣ ಒದಗಿಸಿದೆ.

71 ಶಾಲೆಗೆ ಸೋಲಾರ್‌ ಅಳವಡಿಸಿದೆ ಎಂದರು.ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಸದಸ್ಯೆ ರತ್ನಾ ಪಾಟೀಲ, ಮಾಜಿ ಸದಸ್ಯ ತವನಪ್ಪ ಅಷ್ಟಗಿ, ತಾಪಂ ಸದಸ್ಯೆ ಮಮತಾ ಅಂಕಲಗಿ,ಬಿಜೆಪಿ ಮುಖಂಡರಾದ ಅಮೃತ್‌ ದೇಸಾಯಿ, ನಾಗರಾಜ ಗಾಣಿಗೇರ, ಸುನೀಲ ಗುಡಿ, ಬಸವರಾಜ ಸಲಕಿ, ಗ್ರಾಮೀಣ ಬಿಇಒ ಶ್ರೀಶೈಲ ಕರಿಕಟ್ಟಿ ಹಾಗೂ ಇತರರು ಇದ್ದರು. 

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.