ಸ್ಮಾರಕ ಅಳಿದರೆ ಮುಂದಿನ ಪೀಳಿಗೆಗೆ ಇತಿಹಾಸ ಪುನಾರಚನೆ ಸಾಧ್ಯವಿಲ್ಲ
Team Udayavani, Mar 7, 2017, 3:21 PM IST
ತಿ.ನರಸೀಪುರ: ಐತಿಹಾಸಿಕ ಪರಂಪರೆ ಸಾರುವ ನಾಡಿನ ಪ್ರಾಚೀನ ಸ್ಮಾರಕಗಳು ಅಳಿಸಿ ಹೋದರೆ ಮುಂದಿನ ಪೀಳಿಗೆಯ ಜನರು ಇತಿಹಾಸವನ್ನು ಅಧ್ಯಯನ ಮಾಡಿ ಪುನಾರಚನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ.ಗವಿಸಿದ್ದಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಪಿಆರ್‌ಎಂ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ರಾಜ್ಯ ಸರ್ಕಾರದ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಯೋಗದೊಂದಿಗೆ ದಕ್ಷಿಣ ಭಾರತೀಯ ಸಂಸ್ಕೃತಿಗೆ ಪ್ರಾಚೀನ ಕರ್ನಾಟಕದ ರಾಜಮನೆತನಗಳ ಕೊಡುಗೆ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುರಾತತ್ವ ಇಲಾಖೆ 1885ರಿಂದ ಪ್ರಾಚೀನ ಸ್ಮಾರಕ ಸಂರಕ್ಷಣೆಯಲ್ಲಿ ಪುರಾತತ್ವ ಇಲಾಖೆ ಪ್ರಮುಖ ಪಾತ್ರ ವಹಿಸಿದೆ.
ರಾಜ್ಯದಲ್ಲಿ ನಾವು 832 ಸ್ಮಾರಕಗಳನ್ನು ಸಂರಕ್ಷಣೆ ಮಾಡಿದ್ದೇವೆ. ಈ ಸ್ಮಾರಕಗಳು ಇತಿಹಾಸ ಅಧ್ಯಯನಕ್ಕೆ ಪೂರಕ ಮಾಹಿತಿ ನೀಡುತ್ತಿವೆ. ಬದಲಾವಣೆ ಗಾಳಿ ಬೀಸುತ್ತಿದ್ದು, ಈಗ ಪ್ರಾಚೀನ ಸ್ಮಾರಕಗಳು ಅವನತಿಯತ್ತ ಸಾಗುತ್ತಿವೆ. ಇದು ಮುಂದುವರಿದಲ್ಲಿ ಮುಂದಿನ ಸಮುದಾಯ ಇತಿಹಾಸವನ್ನು ಯಾವ ಆಧಾರದ ಮೇಲೆ ಓದಿ ರಚಿಸಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಇಲಾಖೆಯಿಂದ ಅನುದಾನ ಕೊಡಲು ಸಿದ್ದರಿದ್ದರೂ ಕೂಡ ವಿಚಾರ ಸಂಕಿರಣಗಳನ್ನು ನಡೆಸಲು ಕಾಲೇಜುಗಳು, ಪ್ರಾಧ್ಯಾಪಕರು ಮುಂದೆ ಬರುತ್ತಿಲ್ಲ. ಈ ಪ್ರವೃತ್ತಿ ಮುಂದುವರಿದಲ್ಲಿ ಇತಿಹಾಸ ಓದುವ ವಿದ್ಯಾರ್ಥಿ ಗಳಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ಸಿಗ ದಂತಾಗುತ್ತದೆ. ಇಂತಹ ಮಾಹಿತಿ ನೀಡುವ ವೇದಿಕೆ ಶಿಕ್ಷಕರ ಪ್ರಗತಿಯ ಜತೆಗೆ ವಿದ್ಯಾರಿ§ಗಳಲ್ಲಿ ಆಸಕ್ತಿ ಮೂಡಿಸಲು ಅಗತ್ಯವಾಗಿರುವ ಹಿನ್ನೆಲೆ ಯಲ್ಲಿ ಪ್ರಾಧ್ಯಾಪಕ ವರ್ಗ ಇಂತಹ ಕಾರ್ಯಕ್ರಮ ಗಳಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್.ಬಿ. ಭಟ್ ಮಾತನಾಡಿ, ಶೈಕ್ಷಣಿಕವಾಗಿ ಈಗ ನಾವು ವಿಜಾnನ ಮತ್ತು ತಂತ್ರಜಾnನಕ್ಕೆ ಮಹತ್ವ ನೀಡು ತ್ತಿದ್ದೇವೆ. ಮಾನವೀಯ ಅಧ್ಯಯನ ಹಾಗೂ ಸಮಾಜ ಶಾಸ್ತ್ರದ ಮೇಲಿನ ಅಧ್ಯಯನ ಕಡಿಮೆಯಾಗುತ್ತಿದೆ. ಇತಿಹಾಸದ ಅಧ್ಯಯನ ಶೈಕ್ಷಣಿಕವಾಗಿ ನಮಗೆ ಅಗತ್ಯವಿದೆ.
ನಮ್ಮ ಕಾಲೇಜಿನಲ್ಲಿ ದಕ್ಷಿಣ ಭಾರತದ ಸಂಸ್ಕೃತಿಗೆ ಕರ್ನಾಟಕ ರಾಜಮನೆತನಗಳ ಕೊಡುಗೆ ಯಲ್ಲಿ ಸಮುದಾಯ ವಲಸೆ ಮತ್ತು ಚಲನಶೀಲತೆ, ಧಾರ್ಮಿಕ ಸಾಮರಸ್ಯ ಮತ್ತು ಸಹಬಾಳ್ವೆ, ಕಲಾಪ್ರಕಾರಗಳು ಮತ್ತು ಗಡಿಯಾಚೆಗಿನ ಕೊಡು ಕೊಳ್ಳುವಿಕೆ, ವ್ಯಾಪಾರ – ವಾಣಿಜ್ಯಗಳ ಹಿನ್ನೆಲೆಯಲ್ಲಿ ಧಾರ್ಮಿಕ ಚಲನ ಶೀಲತೆ ವಾಸ್ತುಶಿಲ್ಪ$ಮತ್ತು ಸಾಮಾಜಿಕ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ಪ್ರಸ್ತುತವಿದೆ ಎಂದರು.
ಬಿಎಚ್‌ಎಸ್ ಜಂಟಿ ಕಾರ್ಯದರ್ಶಿಗಳಾದ ಡೀನ್ ಪೊ›. ಆರ್.ವಿ.ಪ್ರಭಾಕರ್, ಡಾ.ಕೆ.ಎಸ್. ಸಮೀರಸಿಂಹ, ಸಾಗರ ಕಾಲೇಜಿನ ಡಾ. ಪ್ರಭಾಕರರಾವ್, ಕೇರಳದ ಡಾ.ಅಜಿತ್‌ಕುಮಾರ್, ಚಿತ್ರಕಲಾ ಪರಿಷತ್‌ನ ಡಾ. ಆರ್.ಎಚ್.ಕುಲಕರ್ಣಿ, ಡಾ. ಅನುರಾಧ, ಡಾ.ರಾಘವೇಲು, ಡಾ. ಸಿ.ಬಿ.ಪಾಟೀಲ್ ಪ್ರಬಂಧ ಮಂಡಿಸಿದರು. ಮೈಸೂರು ವಿವಿಯ ನಿವೃತ್ತ ಇತಿಹಾಸ ತಜ್ಞ ಡಾ. ಎಂ.ಎಸ್.ಕೃಷ್ಣಮೂರ್ತಿ ಮಾತನಾಡಿದರು.
ಪ್ರಾಂಶುಪಾಲ ಪೊ›. ಎ.ಪದ್ಮನಾಭ್, ಉಪಪ್ರಾಂಶುಪಾಲ ಡಾ. ಚಂದ್ರಮೋಹನ್, ಇತಿಹಾಸ ಪ್ರಾಧ್ಯಾಪಕ ಡಾ. ಲ.ನಾ.ಸ್ವಾಮಿ. ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಬಿಎಚ್‌ಎಸ್ ಐಟಿಸಿ ಪ್ರಾಂಶುಪಾಲ ಸಿ.ಪ್ರಸನ್ನಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಎಸ್.ಸಿದ್ದೇಶ್, ವಿವಿಧ ಕಾಲೇಜಿನ ಇತಿಹಾಸ ಉಪನ್ಯಾಸಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.