ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ
Team Udayavani, Mar 7, 2017, 3:57 PM IST
ಚಿಂಚೋಳಿ: ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಹೊರತು ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಹೆಚ್ಚು ಕ್ರೀಡೆಗಳಲ್ಲಿ ಆಸಕ್ತಿ ತೋರಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಗುರುತಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶಜಾಧವ ಹೇಳಿದರು.
ಪಟ್ಟಣದ ಲಿಂ| ಶ್ರೀ ಚನ್ನಬಸವ ಶಿವಯೋಗಿಗಳ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ಚಂದಾಪುರ ಚನ್ನಬಸವೇಶ್ವರ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಆಟಗಾರರು ದೇಶಿ ಆಟದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.
ವಾಲಿಬಾಲ್, ಕಬಡ್ಡಿ, ಕುಸ್ತಿ ಮತ್ತುಖೋಖೋ ಆಟಗಳಲ್ಲಿ ಆಸಕ್ತಿ ಹೊಂದಬೇಕು. ಈಗ ಕೇವಲ ಕ್ರಿಕೆಟ್ ಆಟದತ್ತ ಹೆಚ್ಚು ಒಲುವು ತೋರಿಸುತ್ತಿರುವುದರಿಂದ ನಮ್ಮ ದೇಶದ ಕ್ರೀಡೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಹೇಳಿದರು.
ಸಂತೋಷ ಸೀಳಿನ್, ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ, ಕಾಡಾ ಸದಸ್ಯ ಕೆ.ಎಂ. ಬಾರಿ, ಪುರಸಭೆ ಸದಸ್ಯರಾದ ರಾಮಶೆಟ್ಟಿ ಪವಾರ, ರಾಜಕುಮಾರ ಪವಾರ, ಶಾಮರಾವ ಕೊರವಿ, ಶಿವನಾಗಯ್ಯ ಸ್ವಾಮಿ, ಶಬ್ಬೀರಮಿಯ್ನಾ, ಚನ್ನಬಸಪ್ಪ ನಾವದಗಿ, ಮಲ್ಲಿಕಾರ್ಜುನ ಪಾಲಾಮೂರ, ಚನ್ನವೀರ ಕಲ್ಲೂರ, ಬಸವರಾಜ ಐನೋಳಿ, ಸುಭಾಶ ಸೀಳಿನ್ ಇದ್ದರು.
ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೈದ್ರಾಬಾದ ಅಶೋಕ ವಾಲಿಬಾಲ್ ತಂಡ (ಪ್ರಥಮ 21 ಸಾವಿರ ರೂ.), ರಾಜು ವಾಲಿಬಾಲ್ ತಂಡ ಹೈದ್ರಾಬಾದ(ದ್ವಿತೀಯ 15 ಸಾವಿರ ರೂ.), ಕಲಬುರಗಿ ಮಹಾಂತೇಶ ವಾಲಿಬಾಲ್ ತಂಡಗಳಿಗೆ (ತೃತೀಯ 10ಸಾವಿರ ರೂ.)ಬಹುಮಾನ ಮತ್ತು ಟ್ರೋμ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.