ರಾಜಧಾನಿ ಎಕ್ಸ್ಪ್ರೆಸ್ನ 3,500 ಕೋಚ್ಗಳ ಕಪ್ಲರ್ ಬದಲಾವಣೆ
Team Udayavani, Mar 7, 2017, 4:10 PM IST
ಹೊಸದಿಲ್ಲಿ : ಸುರಕ್ಷೆಯನ್ನು ಸುಧಾರಿಸುವುದು ಹಾಗೂ ರೈಲು ಪ್ರಯಾಣವನ್ನು ಜರ್ಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ರಾಜಧಾನಿ ಎಕ್ಸ್ಪ್ರೆಸ್ನ 3,500 ಕೋಚ್ಗಳ ಕಪ್ಲರ್ಗಳನ್ನು ಬದಲಾಯಿಸಲಿದೆ.
ಈಗಿನ ಸಿಬಿಸಿ ಗಳನ್ನು ತೆಗೆದು ಹೊಸ ಕಪ್ಲರ್ಗಳನ್ನು ಜೋಡಿಸಲು ತಲಾ ಕೋಚ್ ಗೆ ಐದು ಲಕ್ಷ ರೂ. ಖರ್ಚು ತಗಲಲಿದೆ. ರಾಜಧಾನಿ ಟ್ರೈನ್ಗಳ ಬಳಿಕ ಶತಾಬ್ದಿ, ತುರಂತೋ ಮತ್ತು ಇತರ ಮೇಲ್/ಎಕ್ಸ್ಪ್ರೆಸ್ ರೈಲುಗಳ ಕೋಚ್ ಗಳಿಗೆ ಕೂಡ ಹೊಸ ಸಿಬಿಸಿಗಳನ್ನು ಜೋಡಿಸಲಾಗುವುದು ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಹೊಸ ಸಿಬಿಸಿಗಳು ರೈಲುಗಳ ಸುರಕ್ಷೆಗೆ ಪ್ರಯೋಜನಕಾರಿಯಾಗಲಿವೆ. ಅಪಘಾತಗಳು ಸಂಭವಿಸಿದಾಗ ಕೋಚ್ಗಳು ಅಡಿಮೇಲಾಗುವುದನ್ನು ತಪ್ಪಿಸಬಹುದಾಗಿದೆ. ಕೋಚ್ಗಳು ಅಡಿಮೇಲಾಗುವ ಅವಘಡಗಳಲ್ಲಿ ಭಾರೀ ಸಂಖ್ಯೆಯ ಜೀವಹಾನಿ ಆಗುವುದು ಕೂಡ ಸಾಮಾನ್ಯವಾಗಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.