ಗ್ರಾಮಗಳಿಗೆ ಸೇತುವೆಗಳು ದಾರಿ ದೀಪ
Team Udayavani, Mar 8, 2017, 12:48 PM IST
ಮೈಸೂರು: ನದಿ ಮತ್ತು ತೊರೆಗಳಿಂದ ನಗರ ಹಾಗೂ ಪಟ್ಟಣಗಳ ನಡುವಿನ ಸಂಪರ್ಕ ಕಳೆದುಕೊಂಡಿರುವ ಬಹುತೇಕ ಗ್ರಾಮಗಳಿಗೆ ಸೇತುವೆಗಳು ದಾರಿ ದೀಪವಾಗುತ್ತವೆ ಎಂದು ಬ್ರಿಡ್ಜ್ ಮ್ಯಾನ್ ಎಂದೇ ಖ್ಯಾತರಾಗಿರುವ ಸುಳ್ಯದ ಆರ್ಯಶಿಲ್ಪ ಕಾರ್ಖಾನೆ ಮಾಲೀಕರಾದ ಪದ್ಮಶ್ರೀ ಬಿ.ಗಿರೀಶ್ ಭಾರದ್ವಾಜ್ ಹೇಳಿದರು.
ನಗರದ ವಿದ್ಯಾವಿಕಾಸ್ ಎಂಜಿ ನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಉಪನ್ಯಾಸ ನೀಡಿದ ಅವರು, ಯಾವುದೇ ಒಂದು ಗ್ರಾಮ ಅಭಿವೃದ್ಧಿ ಹೊಂದ ಬೇಕಾದರೆ ಆ ಗ್ರಾಮಕ್ಕೆ ಅಕ್ಕಪಕ್ಕದ ನಗರಗಳೊಂದಿಗೆ ಸಂಪರ್ಕ ಕಲ್ಪಿಸ ಬೇಕಾದ ಅಗತ್ಯವಿದೆ.
ಹೀಗಾಗಿ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಉತ್ತಮ ಗೊಳ್ಳಲಿದೆ. ಅಲ್ಲದೆ ಗ್ರಾಮದ ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸಲು ಗ್ರಾಮ ಹಾಗೂ ನಗರ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದರೂ ಇಂದಿಗೂ ಅನೇಕ ಗ್ರಾಮಗಳು ನಗರ ಮತ್ತು ಪಟ್ಟಣಗಳ ಸಂಪರ್ಕವಿಲ್ಲದೆ ದೂರ ಉಳಿದಿವೆ.
ಇನ್ನು ನದಿ ಮತ್ತು ತೊರೆಗಳಿಂದಾಗಿ ನಗರ ಪ್ರದೇಶದ ಸಂಪರ್ಕವಿಲ್ಲದ ಗ್ರಾಮಗಳಿಗೆ ಹಳ್ಳಿಗಳಿಗೆ ತೂಗು ಸೇತುವೆ ಉತ್ತಮ ಮಾರ್ಗವಾಗಿದ್ದು, ಈ ಗ್ರಾಮಗಳಿಗೆ ಸೇತುವೆಗಳು ದಾರಿದೀಪವಾಗಲಿದೆ. ಆ ಮೂಲಕ ನದಿ ಮತ್ತು ತೊರೆಗಳಿಂದ ನಗರದಿಂದ ಸಂಪರ್ಕ ಕಳೆದುಕೊಂಡ ಗ್ರಾಮೀಣ ಪ್ರದೇಶದ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಮರ್ಪಕವಾಗಿ ಕಲ್ಪಿಸುವಲ್ಲಿ ಸೇತುವೆಗಳು ಪ್ರಧಾನ ಪಾತ್ರ ವಹಿಸಲಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ 91, ಕೇರಳದಲ್ಲಿ 30, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ತಲಾ 3 ಸೇರಿದಂತೆ ಒಟ್ಟು 127 ಪಾದಚಾರಿ ತೂಗು ಸೇತುವೆಗಳನ್ನು ನಿರ್ಮಾಣ ಮಾಡಿದ್ದು, ಪಾದಚಾರಿ ತೂಗು ಸೇತುವೆಗಳನ್ನು ಮಿತವ್ಯಯ ಮತ್ತು ಕಡಿಮೆ ಅವಧಿಯಲ್ಲಿ ಈ ನಿರ್ಮಿಸಬಹುದು ಎಂದು, ತಾವು ನಿರ್ಮಿಸಿರುವ ಪಾದಚಾರಿ ತೂಗು ಸೇತುವೆಗಳು ಹಾಗೂ ಅದಕ್ಕಾಗಿ ಬಳಿಸಿರುವ ಸಾಮಗ್ರಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರನ್ನು ವಿದ್ಯಾವಿಕಾಸ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ವಾಸು, ಸಂಸ್ಥೆ ಕಾರ್ಯದರ್ಶಿ ವಿ.ಕವೀಶ್‌ಗೌಡ, ಕಾಲೇಜಿನ ಪ್ರಾಂಶುಪಾಲ ಡಾ. ಎಂ. ರವಿಶಂಕರ್, ನಿರ್ದೇಶಕ ಡಾ. ಬಿ. ಚಂದ್ರಶೇಖರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.