ಶ್ರೀ ಐವರ್ ಭಗವತೀ ಸನ್ನಿಧಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ
Team Udayavani, Mar 8, 2017, 3:06 PM IST
ಕುಂಬಳೆ: ಮಂಗಲ್ಪಾಡಿ ಅಡ್ಕ ಶ್ರೀ ಐವರ್ ಭಗವತೀ ಸನ್ನಿಧಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ನೂತನ ಭಂಡಾರ
ಗೃಹಪ್ರವೇಶ ಕಾರ್ಯಕ್ರಮವು ಮಾ. 9ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಸೋಮ ವಾರ ಸಂಜೆ ಜರಗಿದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಕೊಂಡೆವೂರಿನ ಶ್ರೀ ಯೋಗಾನಂದ
ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು.
ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜನ್ ಪೆರಿಯ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ
ಸಾಮಾಜಿಕ ಧಾರ್ಮಿಕ ನಾಯಕರಾದ ದಯಾ ನಂದ ಪಾವೂರು, ಸುಕುಮಾರ್ ಉಪ್ಪಳ, ಎಂ. ಸುಕುಮಾರ ಕುಂಬಳೆ, ಪದ್ಮಾನಾಭನ್ ಬಿ., ಸಿ. ಜನಾರ್ದನ, ಕೃಷ್ಣನ್, ರಾಮ ಪಿ. ಭಾಗವಹಿಸಿದರು. ಸಮಾರಂಭದಲ್ಲಿ ನೂತನ ಕ್ಷೇತ್ರ ನಿರ್ಮಾಣದ ಶಿಲ್ಪಿ ಎನ್. ಅಶೋಕ್ ಕಾರ್ಕಳ ಮತ್ತು ಬಡಗಿ ಶಂಕರನ್ ಆಚಾರ್ಯರವರನ್ನು ಸಮ್ಮಾನಿಸಲಾಯಿತು.ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ಗೋಪಾಲ ಬಂದ್ಯೋಡು ಸ್ವಾಗತಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.
ಮಂಗಳವಾರ ಬೆಳಗ್ಗೆ 108 ಕಾಯಿ ಮಹಾಗಣಪತಿ ಹೋಮ ಪ್ರಾರಂಭ,ಬಿಂಬ ಶುದ್ಧಿ,ಪ್ರಾಯಶ್ಚಿತ್ತ ಹೋಮ, ಗೃಹ ಶಾಂತಿ ಹೋಮ. ನಾಗ ಸನ್ನಿಧಿಯಲ್ಲಿ ಕಲಶಾಭಿಷೇಕ, ಪರಿವಾರ ದೈವಗಳಾದ ರಕ್ತೇಶ್ವರೀ, ರಕ್ಷಸ್, ವನದುರ್ಗಾ, ತೂವಕಾಳಿಗಳಿಗೆ,
ಕಲಾಶಾಭಿಷೇಕ, ನಾಗತಂಬಿಲ, ಶ್ರೀ ಮಹಾಗಣಪತಿ ಹೋಮ ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ವಿವಿಧ ಭಜನ ತಂಡ ಗಳಿಂದ ಭಜನೆ, ಸಂಜೆ ಆಶ್ಲೇಷ ಬಲಿ, ಅಘೋರ ಹೋಮ, ದುರ್ಗಾ ಪೂಜೆ, ರಾತ್ರಿ ವಿಠಲ್ ನಾಯಕ್ ಮತ್ತು ಬಳಗ ಕಲ್ಲಡ್ಕ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ ಜರಗಿತು.
ಮಾ. 8ರಂದು ಬೆಳಗ್ಗೆ ಗಂಟೆ 8ರಿಂದ ಗಣಪತಿ ಹೋಮ, 8.30ಕ್ಕೆ ಚಂಡಿಕಾಯಾಗ ಪ್ರಾರಂಭ, ಶಾಂತಿ ಹೋಮ, ಸಂಹಾರ ತತ್ವ
ಹೋಮ, ಸಂಹಾರ ತತ್ವಕಲಶ, ಕಲಶಾಭಿಷೇಕ, ಕಲಶ ಮಂಡಲ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಅಪಹಾಹ್ನ 3ರಿಂದ ಭಜನೆ, 4.30ರಿಂದ ಭಕ್ತಿಗಾನ ಸುಧಾ ಸಂಜೆ 6ರಿಂದ ಭಂಡಾರ ಗೃಹದಲ್ಲಿ ವಾಸ್ತುಪೂಜೆ, ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾವಾಸ, ಬಿಂಬಾಧಿವಾಸ, ಶ್ವಿತತತ್ವ ಹೋಮ, ಶಕ್ತಿದಂಡ ಕಮಂಡಲ ಪೂಜೆ, ಅಧಿವಾಸ ಹೋಮ, ರಾತ್ರಿ 7ರಿಂದ ಬಾಲ ಪ್ರತಿಭೆಗಳಿಂದ ನೃತ್ಯಗಳು.ರಾತ್ರಿ ಗಂಟೆ 8.30 ರಿಂದ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದಿಂದ ನೃತ್ಯ ವೈವಿಧ್ಯ ಜರಗಲಿದೆ. ಮಾ. 9ರಂದು ಬೆಳಗ್ಗೆ 7.24ಕ್ಕೆ ನೂತನ ಭಂಡಾರ ಗೃಹಪ್ರವೇಶ, ದೀಪ ಪ್ರತಿಷ್ಠೆ,ಗುರು ಪ್ರತಿಷ್ಠೆಯ ಬಳಿಕ ಪುನರ್ ನಿರ್ಮಿತ ಶಿಲಾಮಯ ಶ್ರೀ ಭಗವತಿ ಕ್ಷೇತ್ರ ಮತ್ತು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಗುಳಿಗ ದೈವದ ಪ್ರತಿಷ್ಠಾ ಕಲಶಾಭಿಷೇಕ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬೆಂಬಲ
Parliment: ವಯನಾಡ್ ಲೋಕಸಭಾ ಸದಸ್ಯೆಯಾಗಿ ಇಂದು ಪ್ರಿಯಾಂಕಾ ಶಪಥ ಸಾಧ್ಯತೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.