ಸ್ಥಗಿತಗೊಂಡ ತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
Team Udayavani, Mar 8, 2017, 3:18 PM IST
ಆಳಂದ: ಚೀಲದ ಕೊರತೆಯಿಂದಾಗಿ ತೊಗರಿ ಖರೀದಿ ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಿದ್ದನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಮಂಗಳವಾರ ಹಠಾತ್ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಪಟ್ಟಣದ ಎಪಿಎಂಸಿ ನಿವೇಶನದಲ್ಲಿನ ತೊಗರಿ ಖರೀದಿ ಕೇಂದ್ರ ಸ್ಥಳಕ್ಕೆ ಭೇಟಿ ನೀಡಿದಾಗ ತೊಗರಿ ಚೀಲಗಳು ಇರಲಿಲ್ಲ.
ತೂಕವು ಸೇರಿ ಇನ್ನಿತರ ಸಾಮಗ್ರಿಗಳು ಮತ್ತು ಕಾರ್ಮಿಕರು ಹೀಗೆ ಯಾವುದೂ ಇಲ್ಲದೆ ಬಯಲು ಜಾಗ ಕಂಡುಬಂತು. ಕೇಂದ್ರದ ಯಾವೊಬ್ಬ ಸಿಬ್ಬಂದಿಯೂ ಹಾಜರಿಲ್ಲದ್ದಕ್ಕೆ ಜಿಲ್ಲಾಧಿಕಾರಿಗಳು ಸಿಡಿಮಿಡಿಗೊಂಡರಲ್ಲದೆ, ಖರೀದಿ ಕೇಂದ್ರಗಳ ಮೇಲೆ ನಿಗಾವಹಿಸಬೇಕು ಎಂದು ತಹಶೀಲ್ದಾರಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತೊಗರಿ ಮಾರಾಟಕ್ಕೆ ನೋಂದಾಯಿಸಿದ ರೈತರು ಆಗಮಿಸಿ ಕೇಂದ್ರಗಳ ವಿರುದ್ಧ ಹರಿಹಾಯ್ದು, ಸರಣಿಯಂತೆ ತೊಗರಿ ಖರೀದಿ ಮಾಡುತ್ತಿಲ್ಲ ಎಂದು ದೂರಿದರು. ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಚೀಲಗಳ ಕೊರತೆಯಾಗಿ ಖರೀದಿ ಕೇಂದ್ರಗಳು ತಾತ್ಕಾಲಿಕವಾಗಿ ಸ್ಥಗತಗೊಂಡಿವೆ. ಎರಡು ದಿನದಲ್ಲಿ ಬಂಗಾಳದಿಂದ ಚೀಲಗಳನ್ನು ಆಮದು ಮಾಡಿಕೊಂಡು ತೊಗರಿ ಖರೀದಿ ಪ್ರಾಂಭಿಸಲಾಗುವುದು.
ತೊಗರಿ ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಖರೀದಿ ಕಾರ್ಯದ ಕೊನೆ ದಿನ ನಿಗದಿಪಡಿಸಿಲ್ಲ, ಎಲ್ಲ ರೈತರ ತೊಗರಿ ಖರೀದಿಸಲಾಗುವುದು ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ ಮಾತನಾಡಿ, ಖರೀದಿ ಕೇಂದ್ರದವರು ಸ್ಥಳದಲ್ಲಿ ಹಾಜರಿಲ್ಲದಕ್ಕೆ ಎಪಿಎಂಸಿ ಕಚೇರಿಗೆ ರೈತರು ಭೇಟಿ ನೀಡುತ್ತಿದ್ದಾರೆ.
ಇದರಿಂದ ಕಚೇರಿ ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿದೆ. ತಮ್ಮ ಭೇಟಿಯಿಂದ ಖರೀದಿ ಕೇಂದ್ರ ಸುಗಮವಾಗಿ ನಡೆಯಲಿದೆ ಎನ್ನುವ ವಿಶ್ವಾಸ ಮೂಡಿದೆ. ಎಲ್ಲ ರೈತರ ತೊಗರಿ ಖರೀದಿ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ರೈತ ಮಲ್ಲಪ್ಪ ಹತ್ತರಕಿ ಹಾಜರಿದ್ದರು.
ರೈತರಿಗೆ ಮಾರ್ಗದರ್ಶನ ನೀಡಲು ಸಲಹೆ: ತೊಗರಿ ಅಧಿಕ ಉತ್ಪಾದನೆ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ವಿಶ್ವ ವಿದ್ಯಾಲಯ ವಿಜ್ಞಾನಿಗಳಿಗೆ ಹೇಳಲಾಗಿದೆ. ಈ ಭಾಗದಲ್ಲಿ ಎಕರೆಗೆ 3ರಿಂದ 4 ಕ್ವಿಂಟಾಲ್ ಮಾತ್ರ ತೊಗರಿ ಉತ್ಪಾದನೆ ಆಗುತ್ತದೆ. ಇದರಿಂದ ಸರ್ಕಾರ ಬೆಂಬಲ ಬೆಲೆ ಕೊಟ್ಟರೂ ಸರಿಹೊಂದುವುದಿಲ್ಲ.
ಅಧಿಕ ಉತ್ಪಾದನೆ ಕೈಗೊಳ್ಳುವುದಕ್ಕಾಗಿ ಅತಿ ಹಿಂದುಳಿದ ಕಿನ್ಯಾದೇಶದಮಾದರಿಯಂತೆ ಎಕರೆಗೆ 5-6 ಕ್ವಿಂಟಲ್ ತೊಗರಿ ಉತ್ಪಾದನೆ ಮಾಡಿದಂತೆ ಇಲ್ಲಿನ ರೈತರಿಗೂ ಮಾರ್ಗದಶನ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಯೋಜನೆ ರೂಪಿಸಲು ಸಲಹೆ ನೀಡಿದ್ದೇನೆ. ಅಧಿಕ ಉತ್ಪಾದನೆ ಆದರೆ, ಒಂದೊಮ್ಮೆ ಮಾರುಕಟ್ಟೆಯಲ್ಲಿ ಅಥವಾ ಸರಕಾರದ ಇತಿಮಿತಿಯ ಬೆಲೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಆಳಂಗಾ ಮತ್ತು ತಡೋಳಾ ರೈತರ ತೊಗರಿ ಖರೀದಿಗೆ ಹಿಂದೇಟಾಗಿದೆ ಅದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಪರಿಶೀಲಿಸಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು. ನಂತರ ಜಿಲ್ಲಾಧಿಕಾರಿಗಳು ನಿಂಬರಗಾ ತೊಗರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.