ಕುವೈತ್ನಲ್ಲಿ ಉದ್ದದ ಸೇತುವೆ ನಿರ್ಮಾಣ
Team Udayavani, Mar 9, 2017, 3:45 AM IST
ಕುವೈತ್: ಜಗತ್ತಿನ ಅತೀ ಉದ್ದದ ಸೇತುವೆಗಳ ಸಾಲಿಗೆ ಸೇರಲಿರುವ ಸೇತುವೆಯೊಂದು ಕುವೈತ್ನಲ್ಲಿ ನಿರ್ಮಾಣವಾಗುತ್ತಿದೆ. ತೈಲ ಉದ್ಯಮಿಗಳ ನಾಡಿನಲ್ಲಿ ತಲೆ ಎತ್ತಲಿರುವ ಈ ಸೇತುವೆಗೆ ಬರೋಬ್ಬರಿ 200.01 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ವಿಶ್ವದ ಪ್ರಸಿದ್ಧ ನಗರಗಳಲ್ಲಿ ಒಂದಾದ ಸಿಲ್ಕ್ಸಿಟಿ ಸಂಪರ್ಕ ಸಾಧಿಸುವ ಪುರಾತನ ಮಾರ್ಗಗಳಲ್ಲಿ ಒಂದಾದ ಸಿಲ್ಕ್ ಮಾರ್ಗಕ್ಕೆ ಬದಲಿಯಾಗಿ ಈ ಸೇತುವೆಯ ನಿರ್ಮಿಸಲಾಗುತ್ತಿದೆ. ಸುಬಿಯಾ ವಲಯದಲ್ಲಿರುವ ಸಮುದ್ರ ಹಿನ್ನೀರಿನಲ್ಲಿ ಈ ಸೇತುವೆ ಹಾದುಹೋಗಲಿದೆ. ಈಗಾಗಲೇ ಕಾಮಗಾರಿ ಮುಕ್ಕಾಲು ಭಾಗ ಮುಗಿದಿದ್ದು, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. 36ಕಿಲೋ ಮೀಟರ್ ದೂರದ ಸೇತುವೆ ಇದಾಗಿದೆ. ಸದ್ಯದ ಸಿಲ್ಕ್ ಮಾರ್ಗದಲ್ಲಿ ಸಾಗಲು ಕನಿಷ್ಠ 90 ನಿಮಿಷಗಳ ಪ್ರಯಾಣ ಬೆಳೆಸಲೇಬೇಕು. ಆದರೆ, ನೂತನ ಸೇತುವೆಯಲ್ಲಿ ಸಾಗಿದರೆ ಕನಿಷ್ಠ 20ರಿಂದ 25 ನಿಮಿಷಗಳ ಪ್ರಯಾಣ ಕಡಿಮೆಯಾಗಲಿದೆ.
2006ರಲ್ಲಿ ಶೇಕ್ ಜಬರ್ ಅಲ್-ಸಭಾ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ ನಿರ್ಮಾಣಕ್ಕೆಂದೇ ಸುಬಿಯಾದಲ್ಲಿ 5000 ಮೆಗಾವಾಟ್ ಸಾಮರ್ಥ್ಯ ವಿದ್ಯುತ್ ಸ್ಥಾವರ ನಿರ್ಮಿಸಲಾಗಿದೆ. ಕುವೈತ್ನ ಪಂಚವಾರ್ಷಿಕ ಯೋಜನೆಗಳ ಪೈಕಿ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. 2018ರ ಡಿಸೆಂಬರ್ ವೇಳೆಗೆಲ್ಲಾ ಈ ಸೇತುವೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.