ಉಪಯೋಗವಾಗಲಿ ಉಡುಗೊರೆ


Team Udayavani, Mar 9, 2017, 12:30 PM IST

Gifts-8-3.jpg

ಗಿಫ್ಟ್ ತೆಗೆದುಕೊಳ್ಳುವುದರಲ್ಲಿ ಇರುವ ಖುಷಿ ಕೊಡುವಾಗ ಇರುವುದಿಲ್ಲ. ಯಾಕೆಂದರೆ ಯಾರಿಗೆ ಯಾವ ರೀತಿಯ ಗಿಫ್ಟ್ ಕೊಡಬೇಕು ಅನ್ನೋ ಟೆನ್ಶನ್‌ ಕೆಲವೊಮ್ಮೆ ವಾರ, ತಿಂಗಳು ಮಾತ್ರವಲ್ಲ ಕೆಲವರನ್ನು ವರ್ಷಪೂರ್ತಿ ಸತಾಯಿಸುವುದೂ ಇದೆ. ಹೀಗಾಗಿ ಅದಕ್ಕಾಗಿ ಇಲ್ಲಿದೆ ಕೆಲವು ಐಡಿಯಾ.

ಹೊಸ ವರ್ಷದಿಂದ ಆರಂಭವಾಗಿ, ಹಬ್ಬ ಹರಿದಿನಗಳು, ವಿಶೇಷ ಸಂದರ್ಭಗಳು, ಹುಟ್ಟುಹಬ್ಬ, ಮದುವೆ, ಆನಿವರ್ಸರಿ… ಹೀಗೆ ಕೆಲವರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಗಿಫ್ಟ್‌  ನೀಡಿದರೆ ಒಳಿತು ಎಂದು ತಿಳಿಯದೆ ಒದ್ದಾಡುತ್ತೇವೆ. ಕೊನೆಗೆ ಕೈಗೆ ಸಿಕ್ಕಿದ, ನಮಗಿಷ್ಟವಾದ ಯಾವುದಾದರೊಂದು ವಸ್ತುವನ್ನು ಕೊಟ್ಟು ಸುಮ್ಮನಾಗುತ್ತೇವೆ. ಅದು ಗಿಫ್ಟ್ ಪಡೆದುಕೊಂಡವರಿಗೆ ಇಷ್ಟವಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ನಾವು ನೀಡುವ ಗಿಫ್ಟ್‌ಗಳು ನಮ್ಮ ಮನೋಭಾವವನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ ನೀಡುವ ಉಡುಗೊರೆಗಳು ಪಡೆದುಕೊಂಡವರಿಗೆ ಉಪಯೋಗವಾಗುವಂತಿದ್ದರೆ ಅದು ಸಾರ್ಥಕವಾಗುತ್ತದೆ. ನಮ್ಮಲ್ಲಿರುವವಷ್ಟು ಹಬ್ಬ, ಆಚರಣೆಗಳು ಬೇರೆ ದೇಶದಲ್ಲಿಲ್ಲ. ಹೀಗಾಗಿ ಆಚರಣೆಗೆ ತಕ್ಕಂತೆ ಗಿಫ್ಟ್‌ಗಳನ್ನು ನೀಡಿದಲ್ಲಿ ಮಾತ್ರ ಅವುಗಳಿಗೊಂದು ಅರ್ಥ ದೊರೆಯುತ್ತದೆ.

ಬ್ರ್ಯಾಂಡೆಡ್‌ ಡ್ರೆಸ್‌ – ಕಾರ್ಡ್‌, ಪೈಂಟಿಂಗ್ಸ್‌
ಇಂತಹ ಗಿಫ್ಟ್‌ಗಳನ್ನು ಗೆಳೆಯರ ಹುಟ್ಟಿದ ದಿನದಂದು ನೀಡಿದಲ್ಲಿ ಉತ್ತಮ. ಪ್ರಸ್ತುತ ಬ್ರ್ಯಾಂಡೆಂಡ್‌ ವಸ್ತುಗಳನ್ನು ಕೊಂಡುಕೊಳ್ಳುವಂತಹ ಕ್ರೇಝ್ ಹಲವರಲ್ಲಿದೆ. ಆತ್ಮೀಯ ಗೆಳೆಯರಿಗೆ ಬ್ರ್ಯಾಂಡೆಡ್‌ ಡ್ರೆಸ್‌, ವಾಚ್‌ಗಳನ್ನು ನೀಡಿದಲ್ಲಿ ಅವರ ಬಳಕೆಗೂ ಸಹಾಯಕವಾಗುವುದಲ್ಲದೇ, ಧರಿಸಿದಾಗಲೆಲ್ಲ  ನಿಮ್ಮ ನೆನಪು ಬರುವುದಂತೂ ಗ್ಯಾರಂಟಿ. ಫ್ರೆಂಡ್‌ಶಿಪ್‌ ಎಂದ ಮೇಲೆ ಅದನ್ನು ಯಾವುದೇ ವಸ್ತುವಿನಿಂದ ಅಳೆಯಲು ಸಾಧ್ಯವಿಲ್ಲ. ಪ್ರೀತಿಯಿಂದ ನೀಡಿದ ಎಲ್ಲವೂ ಮೌಲ್ಯಯುತವೇ ಆಗಿರುತ್ತದೆ. ಬ್ರ್ಯಾಂಡೆಡ್‌ ವಸ್ತುಗಳು ದುಬಾರಿಯಾಗಿರುವುದರಿಂದ ಎಲ್ಲರಿಗೂ ಅದನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಂಪಲ್‌ ಆಗಿ ಕೆಲವು ನೆನಪುಗಳ ಸಾಲು ಬರೆದು ಆಕರ್ಷಕ ನೀವೇ ನಿಮ್ಮ ಕೈಯಿಂದ ತಯಾರಿಸಿದ ಗಿಫ್ಟ್‌ ಕಾರ್ಡ್‌ಗಳನ್ನೂ ನೀಡಬಹುದು.

ಗೆಳೆಯರು ಕಲಾ ಪ್ರೇಮಿಗಳಾಗಿದ್ದರೆ ಸೀನರಿ, ಪೋಟ್ರೈಟ್‌ ಅಥವಾ ಇತರ ಕಲಾ ಪ್ರಕಾರಗಳ ಪೈಂಟಿಂಗ್ಸ್‌ಗಳನ್ನು ನೀಡಿದಲ್ಲಿ ಹಲವು ವರ್ಷಗಳ ಕಾಲ ಅವರ ಮನೆಯ ಗೋಡೆಯ ಮೇಲೆ ನಿಮ್ಮ ನೆನಪು ಉಳಿದಿರುತ್ತದೆ. ಪ್ರಸ್ತುತ ದಿನಗಳಲ್ಲಿ ಬ್ರ್ಯಾಂಡೆಡ್‌ ಫರ್‌ಫ್ಯೂಮ್‌ಗಳನ್ನು ನೀಡುವ ಟ್ರೆಂಡ್‌ ಕೂಡ ಇದೆ. ಗೆಳೆಯರಿಗಿಂತ ಗೆಳತಿಯರ ಹುಟ್ಟಿದ ದಿನದಂದು ಅವರಿಗೆ ಇಷ್ಟವಾದ ಚಾಕಲೇಟ್‌ ನೀಡಿದರೂ ಅದೂ ಕೂಡ ಉತ್ತಮ ಗಿಫ್ಟ್‌ . ಕೆಲವರು ಎಲ್ಲ ಸಮಯಗಳಲ್ಲಿ ಪಾತ್ರೆಗಳನ್ನು ಗಿಫ್ಟ್‌ ರೂಪದಲ್ಲಿ ನೀಡಲು ಹೋಗುತ್ತಾರೆ. ಆದರೆ, ವ್ಯಕ್ತಿಗಳ ಸ್ಥಿತಿಗತಿಗನುಗುಣವಾಗಿ ಗೃಹ ಪ್ರವೇಶದಂಥ ಸಮಯದಲ್ಲಿ ಮಾತ್ರ  ನೂತನ ಶೈಲಿಯ ಪಾತ್ರೆ, ವಾಟರ್‌ ಪ್ಯೂರಿಫೈಯರ್‌ ಮುಂತಾದ ವಸ್ತುಗಳನ್ನು ನೀಡಿದರೆ ಉತ್ತಮ. 
ಫ್ರೇಮ್ಸ್‌, ಶೋ ಪೀಸ್‌, ಫ್ಲವರ್ ಇನ್ನು ಮದುವೆ ಸಮಾರಂಭದಲ್ಲಿ ಬರಿಗೈಯಲ್ಲಿ ಹೋಗುವ ಬದಲು ವಿವಿಧ ಬಣ್ಣದ ಹೂವಿನ ಬುಕ್ಕೆಯನ್ನು ನೀಡಬಹುದು. ಆ್ಯನಿವರ್ಸರಿಗೂ ಇದನ್ನೇ ನೀಡಬಹುದು. ಒಂದೇ ದಿನದಲ್ಲಿ ಹೂವುಗಳು ಬಾಡಿ ಹೋದರೂ ಆ ಕ್ಷಣದಲ್ಲಿ ಮಾತ್ರ ಆಕರ್ಷಕವಾಗಿರುತ್ತವೆ. ಇನ್ನು ಹೂವುಗಳನ್ನು ಕೊಡುವುದು ವೇಸ್ಟ್‌ ಎಂದುಕೊಂಡರೆ ಅವರ ಫೋಟೋಗಳನ್ನು ಸಂಗ್ರಹಿಸಿ, ಅದನ್ನು ಫೂಟೋಶಾಪ್‌ನಲ್ಲಿ  ಸ್ವಲ್ಪ ಕಲರ್‌ಫುಲ್‌ ಆಗಿ ಎಡಿಟ್‌ ಮಾಡಿ ಫ್ರೇಮ್‌ಗಳಲ್ಲಿ ಅಳವಡಿಸಬಹುದು.

ಹಾರ್ಟ್‌ ಶೇಪ್‌, ಚೌಕ, ಗಡಿಯಾರ ಹೊಂದಿರುವ ಫ್ರೇಮ್‌, ಗಿಟಾರ್‌ ಶೈಲಿ, ಕಲರ್‌ ಮಿಕ್ಸರ್‌ ಪ್ಯಾಡ್‌ ಮುಂತಾದ ಶೈಲಿಗಳನ್ನು ಫ್ರೇಮ್‌ಗಳು ಲಭ್ಯವಿದ್ದು, ಅವುಗಳಿಗೆ ಫೋಟೊ ಅಳವಡಿಸಿ ಗಿಫ್ಟ್‌ ಮಾಡಬಹುದು. ಇದೇ ರೀತಿಯ ಗ್ಲಾಸ್‌ ಸ್ಟೋನ್‌ ಶೈಲಿ ಫ್ರೇಮ್‌ಗಳೂ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಇದೂ ಬೇಡವೆಂದರೆ ವಿವಿಧ ಶೈಲಿಯ ಗ್ಲಾಸ್‌ನಿಂದ ತಯಾರಿಸಿದ ಗಿಫ್ಟ್‌  ವಸ್ತುಗಳೂ ದೊರೆಯುತ್ತವೆ. ನೋಡಲು ತೆಳುವಾಗಿದ್ದು, ಸುಂದರವಾಗಿರುತ್ತವೆ. ಅಷ್ಟೇ ಜಾಗ್ರತೆ ವಹಿಸಬೇಕು ಕೂಡ. ಕೊಡುವ ಗಿಫ್ಟ್‌ನಲ್ಲಿ ಇವುಗಳು ಸ್ವಲ್ಪ ಭಿನ್ನವಾಗಿ ಕಾಣುತ್ತಿದ್ದು, ಶೋ ಕೇಸ್‌ನಲ್ಲಿಡಲು ಮಾತ್ರ ಸೀಮಿತ. ಅಲ್ಲದೇ ಕಾಫಿ ಕಪ್‌, ಟ್ರೇ, ಪ್ಲೇಟ್‌ನಲ್ಲೂ  ಅವರ ಹೆಸರು ಬರೆದು, ಫೋಟೋ ಅಚ್ಚು ಹಾಕಿಸಿ ಗಿಫ್ಟ್‌ ರೂಪದಲ್ಲಿ ನೀಡಬಹುದು. 

ಆಭರಣಗಳು
ನೀವು ಆರ್ಥಿಕವಾಗಿ ಸ್ವಲ್ಪ ಸಬಲರಾಗಿದ್ದರೆ ಆಭರಣಗಳನ್ನು ಗಿಫ್ಟ್‌ ರೂಪದಲ್ಲಿ ನೀಡಬಹುದು. ಉಂಗುರ, ಬ್ರೇಸ್‌ಲೆಟ್‌, ಖಡ, ಚೈನ್‌ಗಳಲ್ಲಿ ವಿವಿಧ ಡಿಸೈನ್‌ಗಳು ಲಭ್ಯವಿದ್ದು, ತಮ್ಮ ಬಜೆಟ್‌ಗನುಗುಣವಾಗಿ ಚಿನ್ನ ಆಥವಾ ಬೆಳ್ಳಿಯ ಆಭರಣವನ್ನು ನೀಡಬಹುದು. ಒಂದು ವೇಳೆ ಆಭರಣದ ಹೊರತಾಗಿ ಗೆಳತಿಗೆ ಏನಾದರೂ ಫ್ಯಾನ್ಸಿ ರೀತಿಯಲ್ಲಿ ಗಿಫ್ಟ್‌ ನೀಡಬೇಕೆಂದಿದ್ದರೆ ಶೈನಿಂಗ್‌ ಬ್ಲಾಕ್‌ ಸ್ಟೋನ್‌ ನೆಕ್ಲೇಸ್‌ಗಳೂ ದೊರೆಯುತ್ತವೆ. ಫ್ಯಾನ್ಸಿ ಡ್ರೆಸ್‌ ಧರಿಸಿದಾಗ ಅಥವಾ ಪಾರ್ಟಿ ಸಮಯದಲ್ಲಿ  ಈ ನೆಕ್ಲೇಸ್‌ಗಳನ್ನು ಧರಿಸಿಕೊಳ್ಳಬಹುದಾಗಿದೆ. ಗಿಫ್ಟ್ ನೀಡಲು ನಾವು ಪಡುವ ಕಷ್ಟ ಅಷ್ಟಿಷ್ಟಲ್ಲ. ಕೆಲವೊಮ್ಮೆ  ತಮ್ಮ ವೇತನದ ಮುಕ್ಕಾಲುವಾಸಿ ಹಣವನ್ನು ಗಿಫ್ಟ್‌ಗಾಗಿಯೇ ವ್ಯಯಿಸುತ್ತೇವೆ. ಆದರೆ, ನಿಜವಾದ ಪ್ರೀತಿಗೆ ದುಬಾರಿ ಗಿಫ್ಟ್ ಬೇಕಾಗಿಲ್ಲ. ಪ್ರೀತಿಯಿಂದ ಒಂದು ಗುಲಾಬಿ, ಚಾಕ್ಲೆಟ್‌, ಕೀಚೈನ್‌, ಪೆನ್‌ ಕೊಟ್ಟರೂ ಸಾಕಾಗುತ್ತೆ.

– ಭರತ್‌ರಾಜ್‌ ಕಲ್ಲಡ್ಕ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.