ಮಂಗಳೂರು ಮಹಾನಗರ ಪಾಲಿಕೆ ಕವಿತಾ ಸನಿಲ್ ನೂತನ ಮೇಯರ್?
Team Udayavani, Mar 9, 2017, 1:06 PM IST
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಹುದ್ದೆಗೆ ಆಂತರಿಕವಾಗಿ ನಡೆದ ಗುಪ್ತಮತದಾನದಲ್ಲಿ ಕವಿತಾ ಸನಿಲ್ ಅವರು ಒಂದು ಮತದ ಅಂತರದಿಂದ ಮೇಲುಗೈ ಸಾಧಿಸಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಂತಿಮ ಘೋಷಣೆ ಗುರುವಾರ ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ.
ಪಾಲಿಕೆಯ ಈ ಅವಧಿಯ ನಾಲ್ಕನೇ ಮೇಯರ್ ಪದವಿಗೆ ಆಯ್ಕೆ ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿತ್ತು. ಕವಿತಾ ಸನಿಲ್ ಮತ್ತು ಪ್ರತಿಭಾ ಕುಳಾಯಿ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತು. ಅಪ್ಪಿ ಅವರೂ ಸ್ಪರ್ಧೆಯಲ್ಲಿದ್ದರು. ಒಮ್ಮತದ ಅಭಿಪ್ರಾಯ ಅಸಾಧ್ಯವಾದಾಗ ಕೊನೆಯ ದಾಗಿ ಆಂತರಿಕವಾಗಿ ಗುಪ್ತ ಮತದಾನದ ಮೂಲಕ ಆರಿಸಲು ನಿರ್ಧರಿಸಲಾಯಿತು. ಬುಧವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಡೆದ ಗುಪ್ತ ಮತದಾನದಲ್ಲಿ ಪಚ್ಚನಾಡಿ ವಾರ್ಡ್‌ನ ಕವಿತಾ ಸನಿಲ್ ಒಂದು ಮತದ ಅಂತರದಲ್ಲಿ ವಿಜಯಿ ಎಂದು ತಿಳಿಸಲಾಗಿದ್ದು, ಅದರಂತೆ ಅವರು ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಭೆ ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸಂಜೆಯಿಂದ ರಾತ್ರಿವರೆಗೂ ನಡೆಯಿತು.
ಗುರುವಾರ ಅಧಿಕೃತ ಘೋಷಣೆ
ಒಟ್ಟು 60 ಸದಸ್ಯಬಲದ ಪಾಲಿಕೆಯಲ್ಲಿ ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಎಸ್‌ಡಿಪಿಐ-1, ಸಿಪಿಎಂ-1 ಹಾಗೂ ಓರ್ವ ಪಕ್ಷೇತರ ಸದಸ್ಯಧಿರಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಚುನಾಧಿವಣೆ ಮಾ. 9ರಂದು ಬೆಳಗ್ಗೆ 11.30ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ.
ಭಾರೀ ಪೈಪೋಟಿ
ಕಳೆದ ಎರಡು ವರ್ಷದಂತೆ ಈ ಬಾರಿಯೂ ಮೇಯರ್ ಪದವಿಗಾಗಿ ಕಾಂಗ್ರೆಸ್ ಕಾರ್ಪೊರೇಟರ್‌ಗಳ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿರುವುದರಿಂದ ಕಾಂಗ್ರೆಸ್‌ನ 35 ಸದಸ್ಯರ ಪೈಕಿ 14 ಮಂದಿ ಮಹಿಳೆಯರು ಅರ್ಹರಾಗಿದ್ದರು. ಕೊನೆಗೆ ಕವಿತಾ ಸನಿಲ್, ಪ್ರತಿಭಾ ಕುಳಾಯಿ ಹಾಗೂ ಅಪ್ಪಿ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಅದರಲ್ಲೂ ಕವಿತಾ ಹಾಗೂ ಪ್ರತಿಭಾ ಮಧ್ಯೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.
ಪ್ರತೀ ಬಾರಿ “ಮೇಯರ್ ಸ್ಥಾನ ನಮ್ಮವರಿಗೆ ಕೊಡಿ’ ಎಂದು ಕಾರ್ಪೊರೇಟರ್‌ಗಳು ತಮ್ಮ ಪಕ್ಷದ ನಾಯಕರಲ್ಲಿ ಮನವಿ ಮಾಡುವ ಸ್ಥಿತಿ ಇದ್ದರೆ ಈ ಬಾರಿ ಮಾತ್ರ ಹಾಗಿಲ್ಲ. “ಒಬ್ಬರನ್ನು ಬಿಟ್ಟು ಯಾರಿಗೂ ಆಗಬಹುದು’ ಎಂದು ಬಹುತೇಕ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಈ ಬಾರಿ ಪಕ್ಷದ ಹಿರಿಯ ನಾಯಕರಲ್ಲಿ ಬುಧವಾರ ಬಿನ್ನವಿಸಿದ ಬಗ್ಗೆ ಮಾಹಿತಿ ಇದೆ. ಸಚಿವ ರೈ ನೇತೃತ್ವದಲ್ಲಿ ಸಭೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈ ಅಧ್ಯಕ್ಷತೆಧಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‌ಗಳ ಅಭಿಧಿಪ್ರಾಯ ಆಲಿಕೆ ಸಭೆ ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ನರೇಂದ್ರಸ್ವಾಮಿ
ಹಾಗೂ ಕಾಂಗ್ರೆಸ್ ಮುಖಂಡ ಜಯಸಿಂಹ ಅವರು ಕೆಪಿಸಿಸಿ ವಕ್ತಾರರಾಗಿ ಆಗಮಿಸಿದ್ದರು. ಜೆ.ಆರ್. ಲೋಬೋ, ಮೊದಿನ್ ಬಾವಾ, ಐವನ್ ಡಿ’ಸೋಜಾ ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.