ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಹೊಣೆ: ವೀರಪ್ಪ ಮೊಯಿಲಿ
Team Udayavani, Mar 9, 2017, 2:53 PM IST
ಹೆಬ್ರಿ: ಕೇಂದ್ರದಲ್ಲಿ ಪರಿಸರ ಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದ ಜನರ ಜೀವನಕ್ಕೆ ಮಾರಕವಾದ ಕಸ್ತೂರಿ ರಂಗನ್ ವರದಿಯನ್ನು ತಡೆ ಹಿಡಿದಿದ್ದು, ಅದಕ್ಕೆ ಸಂಬಧಪಟ್ಟ 5 ರಾಜ್ಯಗಳ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಆಕ್ಷೇಪ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದೆ. ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಬಿಡು ವುದಿಲ್ಲ ಎಂದು ಹೇಳಿ ಮುಗ್ಧ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಈಗಿನ ಕೇಂದ್ರ ಸರಕಾರ ಏಕಪಕ್ಷೀಯವಾಗಿ ಈ ವರದಿಯನ್ನು ಅನುಷ್ಠಾನಕ್ಕೆ ತರು ತ್ತಿರುವುದು ವಿಷಾದನೀಯ. ರಾಜ್ಯದ ಬಿಜೆಪಿ ನಾಯಕರು ನಾಟಕೀಯ ಹೇಳಿಕೆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆ ಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಂಸದ ಡಾ| ಎಂ. ವೀರಪ್ಪ ಮೊಯಿಲಿ ಹೇಳಿದರು.
ಅವರು ಮಾ. 6ರಂದು ಹೆಬ್ರಿ ನಾರಾಯಣ ಗುರು ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ತಾ| ರಚನೆ ಬಹುದಿನದ ಕನಸು: ರಾಜ್ಯದಲ್ಲಿ ನೂತನ ತಾ| ಆಗುವುದಾದರೇ ಮೊದಲು ಹೆಬ್ರಿ ಆಗಲೇಬೇಕು. ಹೆಬ್ರಿ ತಾಲೂಕು ರಚನೆ ನನ್ನ ಬಹುದಿನದ ಕನಸು, ನನ್ನ ಅಧಿಕಾರದ ಅವಧಿಯಲ್ಲೇ ತಾಲೂಕಿಗೆ ಬೇಕಾದ ಸಕಲ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಲಾಗಿದೆ, ಶೀಘ್ರ ವಾಗಿ ಹೆಬ್ರಿ ತಾಲೂಕು ರಚಿಸುವಂತೆ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಅವರು ಹೇಳಿದರು.
ಪ್ರಾಮಾಣಿಕ ಪಕ್ಷ ಕಾಂಗ್ರೆಸ್
ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ ಕಾಂಗ್ರೆಸ್ ಪಕ್ಷ ಸತ್ಯ, ನಿಷ್ಠೆಯ ಹಗರಣ ರಹಿತ ಪಕ್ಷ. ನಾನು ಯಾವುದೇ ಹಣ ಅಮಿಷಗಳಿಗೆ ಬಲಿಯಾಗದೆ ಯಾರಿಂದಲೂ ಲಂಚ, ಕಮಿಷನನ್ನು ಪಡೆಯದೆ ಪಕ್ಷಕ್ಕಾಗಿ ಹಾಗೂ ಜನರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ಜನರು ಯಾವುದೋ ಪೊಳ್ಳು ಭರವಸೆ ಅಮಿಷಗಳಿಂದ ಮೋಸ ಹೋಗಿದ್ದಾರೆ. ಈಗ ಜನರಿಗೆ ಅರಿವಾಗಿದೆ. ಕಸ್ತೂರಿ ರಂಗನ್ ವರದಿ, ನೋಟ್ ರದ್ದತಿ, ಬೆಲೆ ಏರಿಕೆಯಿಂದ ಬೇಸತ್ತು ಮುಂದಿನ ಚುನಾವಣೆ ಇದಕ್ಕೆ ಸರಿಯಾದ ಉತ್ತರ ನೀಡಲಿದೆ ಎಂದರು.
ತಾಲೂಕು ಘೋಷಣೆಗೆ ಮನವಿ
ಹೆಬ್ರಿಯನ್ನು ತಾಲೂಕನ್ನಾಗಿ ಘೋಷಣೆ ಮಾಡುವಂತೆ ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರು ಮೊಲಿ ಅವರಿಗೆ ಮನವಿ ಮಾಡಿದರು. ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಲಕ್ಷ್ಮಣ್, ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಹರ್ಷ ಮೊಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಜಿ.ಪಂ. ಮಾಜಿ ಉಪಾಧ್ಯಕ್ಷ ಡಾ| ಸಂತೋಷ ಕುಮಾರ ಶೆಟ್ಟಿ, ಪಕ್ಷದ ಪ್ರಮುಖರಾದ ಬಿಪಿನ್ ಚಂದ್ರಪಾಲ್ ನಕ್ರೆ, ಶೀನಾ ಪೂಜಾರಿ, ರಾಘವ ದೇವಾಡಿಗ, ಜಯಕರ ಪೂಜಾರಿ, ಶಶಿಕಲಾ ಪೂಜಾರಿ, ಪ್ರವೀಣ್ ಬಲ್ಲಾಳ್, ಸಂದೀಪ್, ಸಂತೋಷ ಕುಮಾರ ಶೆಟ್ಟಿ, ಭೋಜ ಪೂಜಾರಿ, ಪ್ರಭಾಕರ ಬಂಗೇರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.