ಮಲಯಾಳಂ ಚಿತ್ರ ನಟಿಯ ಲೈಂಗಿಕ ಕಿರುಕುಳ: ಡಿಜಿಟಲ್ ಸಾಕ್ಷ್ಯ ವಶ
Team Udayavani, Mar 9, 2017, 3:46 PM IST
ಕೊಚ್ಚಿ : ಕಳೆದ ಫೆ.17ರಂದು ನಡೆದಿದ್ದ ಕೇರಳದ ಬಹುಭಾಷಾ ಚಿತ್ರ ನಟಿಯ ಅಪಹರಣ ಹಾಗೂ ಲೈಂಕಿಕ ಕಿರುಕುಳ ಪ್ರಕರಣದ ಹಿಂದಿನ ಉದ್ದೇಶ ಆಕೆಯನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವುದೇ ಆಗಿತ್ತು ಎಂಬುದನ್ನು ಸಾಬೀತು ಪಡಿಸುವ ಪ್ರಮುಖ ಡಿಜಿಟಲ್ ಸಾಕ್ಷ್ಯ (ಲೈಂಗಿಕ ಕಿರುಕುಳದ ವಿಡಿಯೋ ಚಿತ್ರಿಕೆ) ಲಭಿಸಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.
ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ಈ ಪ್ರಕರಣದ ಹಿಂದೆ ಯಾವುದೇ ಸಂಚಿನ ಉದ್ದೇಶ ಇರುವುದು ಕಂಡು ಬಂದಿಲ್ಲ ಎಂದು ಪ್ರಕರಣದ ತನಿಖೆಯನ್ನು ನಡೆಸಿರುವ, ಹೆಸರು ತಿಳಿಸಬಯಸದ, ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಕರಣದ ಪ್ರಧಾನಿ ಆರೋಪಿಯಾಗಿರುವ ಮಾಸ್ಟರ್ ಮೈಂಡ್ ಪಲ್ಸರ್ ಸುನೀಲ್ ಎಂಬಾತನು ಈ ಅಪರಾಧ ಕೃತ್ಯವನ್ನು ನಟಿಯ ವಾಹನ ಚಾಲಕ ಮಾರ್ಟಿನ್ ಜತೆಗೂಡಿ ಒಂದು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದ; ಫೆ.17ರಂದು ಈ ಅಪರಾಧ ಕೃತ್ಯವನ್ನು ಆತ ಇನ್ನೂ ಕೆಲವರ ಶಾಮೀಲಾತಿಯೊಂದಿಗೆ ಎಸಗಿದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಟಿಯನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವುದೇ ಆರೋಪಿಗಳ ಉದ್ದೇಶವಾಗಿತ್ತು. ಫೆ.17ರ ರಾತ್ರಿ ನಟಿಯು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಆಕೆಯ ಕಾರನ್ನು ಹೊಕ್ಕು ಸುಮಾರು ಎರಡು ತಾಸು ಕಾಲ ಆಕೆಗೆ ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿ, ಅದನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದು, ಆ ಡಿಜಿಟಲ್ ಸಾಕ್ಷ್ಯವು ಪೊಲೀಸರಿಗೆ ಸಿಕ್ಕಿದೆ’ ಎಂದು ಅಧಿಕಾರಿ ತಿಳಿಸಿದರು.
ಪ್ರಕರಣದ ಮುಖ್ಯ ಆರೋಪಿಯಾಗಿರುವ ಪಲ್ಸರ್ ಸುನಿ ಮತ್ತು ಆತನ ಸಹಚರ ವಿ.ಪಿ. ವಿಗೀಶ್ ಪ್ರಕೃತ ಪೊಲೀಸ್ ಕಸ್ಟಡಿಯಲ್ಲಿದ್ದು ಅವರ ಪೊಲೀಸ್ ಕಸ್ಟಡಿ ನಾಳೆ ಶುಕ್ರವಾರ ಮುಗಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.