ಸಾಲಮನ್ನಾಕ್ಕೆ ಆಗ್ರಹಿಸಿ ಮೆರವಣಿಗೆ

Team Udayavani, Mar 10, 2017, 12:41 PM IST

dvg3.jpg

ದಾವಣಗೆರೆ: ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು,  ಸಮರ್ಪಕ ಕುಡಿಯುವ ನೀರು ಒದಗಿಸಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ಮೆರವಣಿಗೆ ನಡೆಸಿದೆ. ಕೆ.ಬಿ. ಬಡಾವಣೆಯ ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಪಿ.ಬಿ. ರಸ್ತೆ ಮೂಲಕ ತಹಶೀಲ್ದಾರ್‌ ಕಚೇರಿ ತಲುಪಿ, ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು. 

ಮನವಿ ಸಲ್ಲಿಕೆಗೂ ಮುನ್ನ  ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಕೇಂದ್ರ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಲು 1,800 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ರಾಜ್ಯ  ಕಾಂಗ್ರೆಸ್‌ ಸರ್ಕಾರ ಇದುವರೆಗೆ ರೈತರಿಗೆ ಪರಿಹಾರ ಧನ ನೀಡಲು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು. 

ರಾಜ್ಯದಲ್ಲಿ ತಲೆದೋರಿರುವ  ಭೀಕರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಸಂಪೂರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಕ್ಕೆ  ಬಂದು ನಾಲ್ಕು ವರ್ಷಗಳಾಗುತ್ತಾ ಬಂದರೂ ರೈತರ ಸಣ್ಣ ಪುಟ್ಟ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪಕ್ಷದ ಮಾಜಿ ಅಧ್ಯಕ್ಷ ಅಣಬೇರು  ಜೀವನಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿ ಆಗಿದ್ದರೂ  ಅವರ ನೆರವಿಗೆ ಬರುತ್ತಿಲ್ಲ. ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆ ಸಿಕ್ಕಿಲ್ಲ. ಮಳೆ ಪ್ರಮಾಣ ಅತೀ ಕಡಮೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಜನ, ಜಾನುವಾರುಗಳಿಗೆ  ನೀರಿಲ್ಲದಂತಾಗಿದೆ. ಆದರೂ ರಾಜ್ಯ ಸರ್ಕಾರ ಮೌನವಾಗಿದೆ. ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಯಿಂದ ಕೈಗೊಂಡಿರುವ ಬೆಳೆನಷ್ಟ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದರು. ಮುಂದಿನ ದಿನಮಾನಗಳಲ್ಲಿ ಇಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಬೇಕು.

ಮಳೆಗಾಲದಲ್ಲಿ ನೀರು ಸಂರಕ್ಷಣೆಗೆ, ಅಂತರ್ಜಲ ವೃದ್ಧಿಗೆ ಒತ್ತುಕೊಡಬೇಕು. ರೈತರಿಗೆ 24 ತಾಸು ಸಮರ್ಪಕ, ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಶೀಘ್ರವಾಗಿ ಬರ ಪರಿಹಾರದ ಹಣ ನೀಡಬೇಕು ಎಂದು ಅವರು ಆಗ್ರಹಿಸಿದರು. ಪಕ್ಷದ ಮುಖಂಡರಾದ ಎಚ್‌.ಎನ್‌. ಶಿವಕುಮಾರ್‌, ಬಿ. ರಮೇಶನಾಯ್ಕ, 

ತಾಪಂ ಸದಸ್ಯ ಆಲೂರು ನಿಂಗರಾಜ, ರೈತ ಮೋರ್ಚಾದ ಚನ್ನಬಸಪ್ಪ, ಬೇತೂರು ಬಸವರಾಜ, ಶಿವನಗೌಡ ಟಿ. ಪಾಟೀಲ್‌, ಸೋಗಿ ಶಾಂತಕುಮಾರ್‌,  ಅಕ್ಕಿ ಪ್ರಭು, ಪಿ.ಸಿ. ಶ್ರೀನಿವಾಸ, ಕೆ. ಹೇಮಂತಕುಮಾರ, ಎ.ಎಂ. ಶಿವಪ್ರಕಾಶ್‌, ಎಲ್‌.ಡಿ. ಗೋಣೆಪ್ಪ, ಎಚ್‌.ಎನ್‌. ಜಗದೀಶ್‌, ಎನ್‌. ಮನು, ಟಿಂಕರ್‌ ಮಂಜಣ್ಣ, ಕೆ.ಎನ್‌.  ಓಂಕಾರಪ್ಪ, ಆನಂದಪ್ಪ ಮೆರವಣಿಗೆ ನೇತೃತ್ವ ವಹಿಸಿದ್ದರು.   

ಟಾಪ್ ನ್ಯೂಸ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Israel: ಹಮಾಸ್, ಹೆಜ್ಬುಲ್ಲಾ ದಾಳಿ ಬಳಿಕ ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ

Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.