ಎಂಟಿವಿ ಕಥಾ ಪಾತ್ರಗಳಿಗೆ ಜೀವ ಕೊಟ್ಟ ರೂಪಕ ಮಹಾಸಾಗರಂ


Team Udayavani, Mar 10, 2017, 1:36 PM IST

10-KALA-2.jpg

ಸಭಾಭವನದಲ್ಲಿ ಮಲಯಾಳಿ ಸಭಿಕರು ಕಿಕ್ಕಿರಿದು ನೆರೆದಿದ್ದರು. ವೇದಿಕೆಯಲ್ಲಿ ನಡೆಯುವ ನಾಟಕದ ಆಸೆಯಿಂದಲೋ ಅಥವಾ ತಮ್ಮ ಪ್ರೀತಿಯ ಲೇಖಕನ ಬಗ್ಗೆ ಬೆಳೆಸಿಕೊಂಡ ಗೌರವವನ್ನು ವ್ಯಕ್ತಪಡಿಸಬೇಕೆಂಬ ಒಳಗಿನ ಒತ್ತಡದ‌ ದ್ಯೋತಕವಾಗಿಯೋ- ವೇದಿಕೆಯ ಮೇಲೆ ಕಾಣಿಸಿಕೊಂಡ ಒಂದೊಂದು ಪಾತ್ರ- ಘಟನೆಗಳಲ್ಲೂ ಅವರು ತಲ್ಲೀನರಾಗುತ್ತಿದ್ದದ್ದು ಕಂಡರೆ ಎರಡನೆಯದೇ ಹೆಚ್ಚು ಸರಿಯೆನ್ನಿಸು ತ್ತದೆ. ಹೌದು, ಕಲ್ಲಿಕೋಟೆಯ ಟಾಗೋರ್‌ ಭವನದಲ್ಲಿ ನಡೆದ ಎಂ. ಟಿ. ವಾಸುದೇವನ್‌ ನಾಯರ್‌ ಅವರ ಸಮಗ್ರ ಸಾಹಿತ್ಯ ಕೃತಿಗಳ ಕ್ರೋಢೀಕರಣವು ಒಂದು ಸುಂದರ ರೂಪಕವಾಗಿ ವೇದಿಕೆಯ ಮೇಲೆ ಅವತರಿಸಿ ದಾಗ ನೆರೆದಿದ್ದ ಎಲ್ಲ ಸಭಿಕರು ಅಕ್ಷರಶಃ ರೋಮಾಂಚನಗೊಂಡು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದಂತೂ ಮರೆಯಲಾಗದ ಒಂದು ಅನುಭವ. ಎಂ.ಟಿ. ವಾಸುದೇವನ್‌ ನಾಯರ್‌ ಮಲಯಾಳ ಸಾಹಿತ್ಯಪ್ರಿಯರ ಕಣ್ಣಲ್ಲಿ ಹೀಗೊಂದು ಆರಾಧ್ಯ ಮೂರ್ತಿಯಾಗಿ ರೂಪುಗೊಂಡದ್ದಾದರೂ ಹೇಗೆ ಅನ್ನುವುದೇ ಒಂದು ಬಿಡಿಸಲಾರದ ರಹಸ್ಯ.

ರೂಪಕವು ಎಂಟಿವಿ ಅವರ ಮುದ್ರಿತ ಧ್ವನಿಯ ಮಾತುಗಳಿಂದಲೇ ಆರಂಭವಾಗುತ್ತದೆ. ಮುಂದೆ ಅವರ ಮೊದಲ ಕೃತಿ “ನಾಲುಕೆಟ್ಟ್’ (ಬಿ.ಕೆ. ತಿಮ್ಮಪ್ಪ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ) ಇದರ ಮುಖ್ಯಪಾತ್ರ ಅಪ್ಪುಣ್ಣಿಯು ತನ್ನ ಬಾಲ್ಯಗೆಳತಿ ಅಮ್ಮಿಣಿಯ ಜತೆಗೆ ಆಡುತ್ತ ಮಾತನಾಡುವ ದೃಶ್ಯ. ಚೌಕಟ್ಟಿನ ಮನೆಯ ನೋಟ. ತನ್ನ ತಂದೆಯನ್ನು ಕೊಂದ ಸೈದಾಲಿಕುಟ್ಟಿಯ ಮೇಲೆ ಸೇಡು ತೀರಿಸದೇ ಬಿಡುವುದಿಲ್ಲ ಎಂಬ ಅಪ್ಪುಣ್ಣಿಯ ರೋಷ-ದ್ವೇಷಗಳ ಜತೆಗೆ ಮುಂದುವರಿಯುತ್ತದೆ. ಮುಂದೆ ಬರುತ್ತಾನೆ “ಇರುಳಿನ ಆತ್ಮ’ದ (ಕನ್ನಡಕ್ಕೆ: ಕೆ.ಕೆ. ನಾಯರ್‌) ಮಾನಸಿಕ ಅಸ್ವಸ್ಥನಂತೆ ವರ್ತಿಸುವ ವೇಲಾಯುಧನ್‌. ಅವನನ್ನು ಹುಚ್ಚನೆಂದು ಕರೆದು ಅವನಿಗೆ ಹಿಗ್ಗಾಮುಗ್ಗಾ ಥಳಿಸುವ, ಅವನನ್ನು ಸಂಕೋಲೆಯಿಂದ ಬಂಧಿಸಿಡುವ ಅವನ ಮಾವನ ಅಮಾನವೀಯತೆ, ಅತ್ತೆಯ ಸುಂದರಿಯಾದ ಮಗಳು ತನ್ನನ್ನು ಪ್ರೀತಿಸುತ್ತಾಳೆಂದು ಭ್ರಮಿಸಿ ಅವಳಿಗಾಗಿ ಆಸೆ ಪಡುವ ವೇಲಾಯುಧನ್‌- ಮೊದಲಾದ‌ ಮನಕದಡುವ ದೃಶ್ಯಗಳು. ಮುಂದೆ “ಕಾಲಂ’ ಕಾದಂಬರಿಯಲ್ಲಿ (ಅನು: ಬಿ.ಕೆ. ತಿಮ್ಮಪ್ಪ) ಕಾಲವು ತನ್ನ ಮೇಲೆ ಹೇರಿದ ಆಘಾತಗಳಿಂದ ಬದಿಗೆ ಸರಿದು ತಪ್ಪಿಸಿಕೊಂಡು ಎತ್ತರ ಕ್ಕೇರುವ ಪ್ರಯತ್ನದಲ್ಲಿ ತನ್ನನ್ನು ತಾನೇ ಕಳೆದುಕೊಂಡ ಸೇತು ಬದುಕಿನಲ್ಲಿ ಬಯಸಿದ್ದೊಂದನ್ನೂ ಪಡೆಯಲು ಸಾಧ್ಯವಾಗದೆ ಆ ನಿರಾಶೆಯು ಸಿಟ್ಟಾಗಿ, ದ್ವೇಷವಾಗಿ ಸದಾ ಹೊಗೆಯಾಡುತ್ತ ಇದ್ದ ಸ್ಥಿತಿಯಲ್ಲಿ ಆತ ಒಂದೊಮ್ಮೆ ಪ್ರೀತಿಸಿದ್ದ ಅವನ ಬಾಲ್ಯದ ಗೆಳತಿ ಸುಮಿತ್ರಾ ಅವನಿಗೆ ಹೇಳುವ ಮಾತುಗಳು; “ಸೇತೂ, ನೀನು ಯಾವಾಗಲೂ ಪ್ರೀತಿಸಿದ್ದು ಒಬ್ಬರನ್ನು ಮಾತ್ರ. ಅದು ಬೇರಾರೂ ಅಲ್ಲ, ಸ್ವತಃ ನೀನೇ.’ ಇದು ಸೇತುವಿನ ನೋವು-ನಿರಾಶೆಗಳ ಚಿತ್ರ. ಮುಂದೆ “ರಂಡಾಮೂಳಂ’ (ಕನ್ನಡ ರೂಪ: ಭೀಮಸೇನ, ಅನು.: ಸಿ.ರಾಘವನ್‌) ಕಾದಂಬರಿಯಲ್ಲಿ ಮಹಾಭಾರತದ ಭೀಮನ ಮಾನಸಿಕ ತೊಳಲಾಟದ ದೃಶ್ಯಗಳು. ಮುಂದೆ “ಮಂಜು’ ಕಾದಂಬರಿಯ (ಅನು: ಪಾರ್ವತಿ ಜಿ. ಐತಾಳ್‌) ನಾಯಕಿ ವಿಮಲಾ ಮಿಶ್ರ ಮತ್ತು ಅನಾಥ ಹುಡುಗ ಬುದ್ದೂ- ಇಬ್ಬರೂ ಕಾಯುವ ನಿರೀಕ್ಷೆಯ ಆತಂಕಭರಿತ ಕ್ಷಣಗಳ ಚಿತ್ರ. ಮುಂದೆ “ವಾರಾಣಸಿ’ ಕಾದಂಬರಿಯ (ಅನು: ಕೆ.ಕೆ. ನಾಯರ್‌) ರುದ್ರಭೂಮಿಯ ಹಿನ್ನೆಲೆಯಲ್ಲಿ ಸಂಶೋಧನೆಗೆಂದು ಬಂದ ಸುಧಾಕರ-ಸುಮಿತಾ ನಾಗಪಾಲರ ನಡುವೆ ಹುಟ್ಟಿಕೊಳ್ಳುವ ಆಕರ್ಷಣೆ ಮತ್ತು ಆ ಮೂಲಕ ಗಂಡು-ಹೆಣ್ಣುಗಳ ನಡುವಣ ಸಂಬಂಧ-ಸಂಘರ್ಷಗಳ ಸೂಕ್ಷ್ಮ ಚಿತ್ರಣ-ಹೀಗೆ ದೃಶ್ಯಸರಣಿ ಸಾಲಾಗಿ ಪ್ರಸ್ತುತಗೊಂಡಿತು.

ಸಣ್ಣ ಕಥೆಗಳ ಸರಣಿಯಲ್ಲಿ “ಸಾಕು ಪ್ರಾಣಿಗಳು’ ಕಥೆಯಲ್ಲಿ ಸರ್ಕಸ್‌ ಆಟಗಾರರ ಹೀನಾವಸ್ಥೆ, “ಶ್ರೀಖಡ್ಗ’ ಮತ್ತು “ಗಗ್ಗರ’ ಕಥೆಯಲ್ಲಿ ಬರುವ ಪಾತ್ರಿ ಬಡತನದ ಬೇಗೆ ತಾಳಲಾರದೆ ತನ್ನ‌ ಜೀವನಾಧಾರವಾಗಿದ್ದ ಖಡ್ಗ-ಗಗ್ಗರಗಳನ್ನು ಮಾರಲುದ್ಯುಕ್ತನಾಗುವ ಭೀಭತ್ಸ ದೃಶ್ಯ- ಮೊದಲಾದವುಗಳ ಜತೆಗೆ ವಾಸುದೇವನ್‌ ನಾಯರ್‌ ಜತೆಗೆ ಮಾಧ್ಯಮದ ಹುಡುಗಿ ಮಾಡುವ ಸಂದರ್ಶನಗಳಿದ್ದವು. ಈ ಎಲ್ಲ ದೃಶ್ಯಗಳ ನಡು ನಡುವೆ ವಾಸುದೇವನ್‌ ನಾಯರ್‌ ಅವರ ಧ್ವನಿಯಲ್ಲಿ ಅವರು ನೀಡುವ ಸಂದೇಶಗಳಿದ್ದವು. ಕೊನೆಯಲ್ಲಿ ಎಲ್ಲ ಪಾತ್ರ ಗಳೂ ವೇದಿಕೆಯ ಮೇಲೆ ಬಂದು ನಿಂತು ವಾಸುದೇವನ್‌ ನಾಯರ್‌ ಸುತ್ತ ನಿಂತು ಕುಣಿಯುವ ದೃಶ್ಯ ಲವಲವಿಕೆ ಯಿಂದ ಕೂಡಿತ್ತು.  ಸಾಂಕೇತಿಕವಾದ ಶೈಲೀಕೃತ ರಂಗ ಸಜ್ಜಿಕೆ ಪ್ರದರ್ಶನದ ಶೋಭೆಯನ್ನು ಇಮ್ಮಡಿಗೊಳಿಸಿತ್ತು.

ಒಟ್ಟಿನಲ್ಲಿ ಇಡೀ ರೂಪಕದಲ್ಲಿ ಮಲಯಾಳಿಗಳು ತಮ್ಮ ಪ್ರಿಯ ಲೇಖಕನಿಗೆ ತೋರಿಸಿದ ಗೌರವವು ಹೃದಯಸ್ಪರ್ಶಿಯಾಗಿತ್ತು. ಇದರ ಯಶಸ್ವಿ ಪ್ರಸ್ತುತಿಯ ಹಿಂದಿನ ಜಾಣ್ಮೆ ಮತ್ತು ನೈಪುಣ್ಯಗಳು ನಿರ್ದೇಶಕರಾದ ಪ್ರಶಾಂತ್‌ ನಾರಾಯಣನ್‌ ಅವರದ್ದಾಗಿದ್ದವು.

ಡಾ| ಪಾರ್ವತಿ ಜಿ. ಐತಾಳ್‌ 

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.