ಗಿಳಿವಿಂಡಿನಲ್ಲಿ ತ್ರಿದಿವ ನೃತ್ಯವೈಭವ
Team Udayavani, Mar 10, 2017, 1:41 PM IST
ಕಡಲ ತಡಿಯ ತೆರೆಗಳಿಗೆ ಮೈಯೊಡ್ಡಿ ತಂಗಾಳಿಗೆ ಹಾತೊರೆಯುತ್ತಾ ಬಿಸಿಗಾಳಿಯನ್ನೇ ಉಸಿರಾಡುತ್ತಿರುವ ಕಾಸರಗೋಡಿನ ಕನ್ನಡಿಗರಿಗೆ ತಣ್ಣನೆಯ ಅನುಭವವನ್ನು ಗಿಳಿವಿಂಡಿನ ಕಲರವ ಇತ್ತೀಚೆಗೆ ನೀಡಿತು.
2017ರ ಜನವರಿಯಲ್ಲಿ ಕೇರಳ – ಕರ್ನಾಟಕ ಸರಕಾರಗಳ ಸಹಯೋಗದೊಂದಿಗೆ ರಾಷ್ಟ್ರಕವಿ ಗೋವಿಂದ ಪೈಯವರ ಮನೆಯು ರಾಷ್ಟ್ರೀಯ ಕವಿಸ್ಮಾರಕವಾಗಿ ಪುನರ್ನಿರ್ಮಿಸಲ್ಪಟ್ಟು ಲೋಕಾರ್ಪಣೆಗೊಂಡಿತು. ಕವಿ, ಸಂಶೋಧಕ, ವಿದ್ವಾಂಸ ಹೀಗೆ ಹಲವು ಆಯಾಮಗಳಿಂದ ಗುರುತಿಸಲ್ಪಟ್ಟ ಕನ್ನಡದ ಪ್ರಬುದ್ಧ ಸಾಹಿತಿಯಾದ ಗೋವಿಂದ ಪೈಯವರ ಕುರಿತ ಅಧ್ಯಯನಗಳಿಗೆ ಈ ಮೂಲಕ ಹೊಸ ವೇಗ ಲಭಿಸಬಹುದೇನೋ. ಪೈಯವರ ಮನೆಯೇ ಅಧ್ಯಯನ ಕೇಂದ್ರವೂ ಆಗಿ ಗಿಳಿವಿಂಡು ಎಂದು ನಾಮಾಂಕಿತಗೊಂಡಿದೆ. ಇದರ ಮೇಲ್ವಿಚಾರಣೆಗಾಗಿ ಆಡಳಿತ ಟ್ರಸ್ಟ್ ನೇಮಕಗೊಂಡಿದ್ದು, ಅದರ ಆಶ್ರಯದಲ್ಲಿ ಪೈಯವರ ಸಾಹಿತ್ಯದ ಕುರಿತಾದ ಕಾರ್ಯಕ್ರಮವನ್ನು ತಿಂಗಳಲ್ಲೊಂದರಂತೆ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಗಿಳಿವಿಂಡುವಿನಲ್ಲಿ ನಿರ್ಮಿಸಲಾದ ಶಾಶ್ವತ ವೇದಿಕೆ “ಪಾರ್ತಿಸುಬ್ಬ’ದಲ್ಲಿ ಗಿಳಿವಿಂಡು ವಿನ ಕಲರವದ ಮೊದಲ ನಾದ ನೂಪುರಧ್ವನಿಯೊಂದಿಗೆ ಸಮ್ಮಿಳಿತಗೊಂಡಿತು. ಪೈಯವರ ಪ್ರಖ್ಯಾತವಾದ ಮೂರು ಕವಿತೆಗಳಿಗೆ ರಾಗ ಹಾಗೂ ನೃತ್ಯ ಸಂಯೋಜಿಸಿ ಪ್ರದರ್ಶಿಸಲಾಯಿತು.
ಕಾಸರಗೋಡಿನ ಹೆಮ್ಮೆಯ ನೃತ್ಯ ಕಲಾವಿದರಾದ ಬಾಲಕೃಷ್ಣ ಮಂಜೇಶ್ವರ ಅವರ ನೃತ್ಯ ನಿರ್ದೇಶನದಲ್ಲಿ ಅವರ ಶಿಷ್ಯರು “ಭಾರತಾಂಬೆಯ ಮಹಿಮೆ’, “ಕನ್ನಡಿಗರ ತಾಯಿ’, “ತೌಳವಮಾತೆ’ ಎಂಬ ಮೂರು ಕವಿತೆಗಳ ಭಾವ ಶರೀರಕ್ಕೆ ಲಯ-ತಾಳಗಳ ಜೀವ ತುಂಬಿದರು.
“ಭಾರತಾಂಬೆಯ ಮಹಿಮೆ’ ಪೈಯವರ ಉಜ್ವಲ ದೇಶಾಭಿ ಮಾನವನ್ನು ಪ್ರತಿಬಿಂಬಿಸುವ ಕವನ. “ಭಾರತವನುಳಿಯುತ್ತ ನನಗೆ ಜೀವನ ವೆತ್ತ, ಭಾರತವೇ ನನ್ನುಸಿರು, ನನ್ನೊಗೆದ ಬಸಿರು’ ಎನ್ನುವ ಕವಿ ತನ್ನ ಅಸ್ಮಿತೆ ಇರುವುದೇ ತಾಯ್ನಾಡಲ್ಲಿ ಎನ್ನುತ್ತಾರೆ. ಈ ಕವನಕ್ಕೆ ಹೆಜ್ಜೆ ಹಾಕಿದ ಕಿರಣ್ ಮಂಜೇಶ್ವರ, ಭಾಗ್ಯಶ್ರೀ ಎಂಬ ಕಲಾವಿದರು ಕವಿಯ ಭಾವಗಳನ್ನು ನೃತ್ಯ ಝಲಕುಗಳಲ್ಲಿ ಸೆರೆಹಿಡಿದರು.
” ಕನ್ನಡಿಗರ ತಾಯಿ’ ಎಂಬ ತಾಯ್ನುಡಿಯ, ತಾಯ್ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಪ್ರಚುರಪಡಿಸುವ ಜನಪ್ರಿಯ ಕವನವನ್ನು ಎಳೆಯ ನೃತ್ಯ ಕಲಾವಿದರು ತಮ್ಮ ಚುರುಕಾದ ಹಾವಭಾವಗಳೊಂದಿಗೆ ಸಹೃದಯರ ಮನಸೂರೆಗೊಳ್ಳುವಂತೆ ಅಭಿವ್ಯಕ್ತಗೊಳಿಸಿದರು.
ಪೈಯವರು ಭಾರತ ದೇಶವನ್ನು, ತಾಯ್ನುಡಿ ಕನ್ನಡವನ್ನು ಮತ್ತು ಹೆತ್ತಬ್ಬೆ ತುಳುನಾಡನ್ನು ಬಿಟ್ಟವರಲ್ಲ. ಇದರಲ್ಲಿ ಒಂದು ಹೆಚ್ಚು, ಒಂದು ಕಮ್ಮಿ ಎಂಬುದು ಅವರ ಭಾವಕ್ಕೆ ಒಪ್ಪಿತವಲ್ಲ. ಅವರ “ತೌಳವ ಮಾತೆ’ ಪದ್ಯದಲ್ಲಿ ತ್ರಿದಿವ ಎಂಬ ಮಾತು ಬರುತ್ತದೆ. ಸ್ವರ್ಗ ಎಂಬುದು ಅದರ ಅರ್ಥ. ಪೈಯವರ ಪಾಲಿಗೆ ಈ ಮೂರು ಸ್ವರ್ಗಗಳೇ ಆಗಿವೆ. ತುಳುನಾಡಿನ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವಗಳನ್ನು ಕಟ್ಟಿಕೊಡುವ ಈ ಕವಿತೆಯ ನೃತ್ಯಾವಿಷ್ಕಾರವು ಚೇತೋಹಾರಿಯಾಗಿದ್ದು, ತುಳುನಾಡಿನ ಗತವೈಭವದತ್ತ ಸಹೃದಯರ ಮನವನ್ನು ಕೊಂಡೊಯ್ಯುವಲ್ಲಿ ಸಫಲವಾಗಿತ್ತು.
ಒಟ್ಟಂದದಲ್ಲಿ ಉತ್ತಮ ಪ್ರಯೋಗ ಎನ್ನಬಹುದಾದರೂ ಭಾವಾಭಿನಯ, ಹೆಜ್ಜೆಯ ಗತಿ, ಭಾವಗಳಿಗೆ ಜತಿ ಹಿಡಿಯುವಂತಿದ್ದರೂ, ಮುದ್ರೆಗಳು ಸರಳಗೊಳ್ಳ ಬೇಕಾದ ಅಗತ್ಯ ಎದ್ದು ಕಾಣುತ್ತಿತ್ತು. ಪ್ರಥಮ ಪ್ರಯೋಗದ ಕೆಲಕೆಲವು ಹೊಂದಾಣಿಕೆಯ ಅಂತರಗಳು ಗೋಚರಿಸುತ್ತಿದ್ದವು, ಅದಿನ್ನೂ ಹದಗೊಂಡು ಭಾವದ ಪೂರ್ಣ ಪ್ರಮಾಣದ ಅಭಿವ್ಯಕ್ತಿ ಆಗಬೇಕಾದದ್ದಿದೆ. ಕವನವೊಂದನ್ನು ಶುದ್ಧ ಶಾಸ್ತ್ರೀಯ ನೃತ್ಯ ತಾಳಕ್ಕೆ ಹೊಂದಿಸುವುದು ಕಷ್ಟ ಸಾಧ್ಯ. ನಿರಂತರ ಶ್ರಮ, ಕವನದ ಆತ್ಮವನ್ನು ಅರಿತು ಭಾವಲಹರಿಯನ್ನು ಶಾಸ್ತ್ರದ ಚೌಕಟ್ಟಿಗೆ ಒಳಪಡಿಸಿ ಅಭಿವ್ಯಕ್ತಿಸುವ ಕೌಶಲ ಅಗತ್ಯ. ಅದಕ್ಕೆ ರೂಪಾಕಾಭಿವ್ಯಕ್ತಿ ಹೆಚ್ಚು ಸಮಂಜಸ ಹಾಗೂ ಪರಿಣಾಮಕಾರಿ ಆಗಬಹುದೇನೊ. ಪೈಯವರ ಭಾಷೆಯಂತೂ ಪ್ರಬುದ್ಧ, ಪ್ರಖರ. ಅದನ್ನು ನೃತ್ಯದ ಚೌಕಟ್ಟಿಗೆ ಹೊಂದಿಸಿ ಆ ಮೂಲಕ ಅವರ ಕವಿತೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಆಸ್ವಾದನೆಗೆ ಅನುವು ಮಾಡಿಕೊಡುವ ಈ ಪ್ರಯತ್ನ ಮಾತ್ರ ನಿಜಕ್ಕೂ ಶ್ಲಾಘನೀಯ.
ಕವಿತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.