“ಆಂತರ್ಯ ವಿಕಾಸದಿಂದ ವ್ಯಕ್ತಿತ್ವ ಬಲಿಷ್ಠ’
Team Udayavani, Mar 10, 2017, 2:00 PM IST
ಉಡುಪಿ: ಭಯೋತ್ಪಾದನೆ, ಅತ್ಯಾಚಾರ, ಅನಾಚಾರಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿರಲು ಮನುಷ್ಯನ ಹೃದಯ ದೌರ್ಬಲ್ಯ ಕಾರಣವಾಗಿದ್ದು ಆಂತರ್ಯ ವಿಕಾಸದ ಹೊರತಾಗಿ ಹೃದಯ ಪ್ರಾಬಲ್ಯ ಸಾಧ್ಯವಾಗದು. ಪರಿಶುದ್ಧ ಹೃದಯದಿಂದ ಪ್ರಾಮಾಣಿಕತೆ ಮೊದಲಾದ ಸದ್ಗುಣಗಳ ಅಳವಡಿಸಿಕೊಂಡು ಮನೋಬಲವನ್ನು ಸಾಧಿಸಿಕೊಂಡಾಗ ಮನುಷ್ಯನ ವ್ಯಕ್ತಿತ್ವ ಬಲಿಷ್ಠವಾಗುವುದು ಎಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ್ ಭಟ್ ಹೇಳಿದರು.
ಅವರು ಶೃಂಗೇರಿಯ ರಾಜೀವ್ ಗಾಂಧಿ ಪರಿಸರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ (ಮಾನಿತ ವಿಶ್ವವಿದ್ಯಾಲಯ)ದ ಶಿಕ್ಷಾಶಾಸ್ತ್ರಿ (ಬಿ.ಎಡ್) ವಿಭಾಗದ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಪ್ರಾಚಾರ್ಯ ಪೊ›| ಎ.ಪಿ.ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ| ಹರಿಪ್ರಸಾದ್ ಕೆ., ಡಾ| ವೆಂಕಟರಮಣ ಭಟ್, ಡಾ| ಅರವಿಂದ ಕುಮಾರ್, ಡಾ| ನಾರಾಯಣ ವೈದ್ಯ ಉಪಸ್ಥಿತರಿದ್ದರು.
ಶಿಕ್ಷಾಶಾಸ್ತ್ರಿ ವಿಭಾಗ ಮುಖ್ಯಸ್ಥ ಡಾ| ಚಂದ್ರಕಾಂತ ಭಟ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಡಾ| ರಾಮಚಂದ್ರುಲು ಬಾಲಾಜಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.