ಉದ್ಯಮ-ಶಿಕ್ಷಣ ನಡುವಿನ ಅಂತರ ಕಡಿಮೆಯಾಗಲಿ
Team Udayavani, Mar 10, 2017, 2:51 PM IST
ಕಲಬುರಗಿ: ಉದ್ಯಮಗಳಲ್ಲಿನ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆಯಲ್ಲದೆ ಬದಲಾಗುತ್ತಿದೆ. ಇದಕ್ಕೆ ಸಮಾಂತರವಾಗಿ ಶೈಕ್ಷಣಿಕ ಪಠ್ಯಕ್ರಮ ಬದಲಾಗುತ್ತಿಲ್ಲ ಅದನ್ನು ಬದಲಾವಣೆ ಮಾಡುವಲ್ಲಿ ಸರಕಾರ ಹಾಗೂ ಶೈಕ್ಷಣಿಕ ವಿದ್ವಾಂಸರು ಶ್ರಮಿಸಬೇಕು ಎಂದು ಬೆಂಗಳೂರುಮೂಲದ ಜೀರೋ ಡಿಫೆಕ್ ಕಂಪನಿ ಸಿ.ಇ.ಒ. ಡಾ| ಎಸ್.ಎಂ. ಜಗದೀಶ ಹೇಳಿದರು.
ಇಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗವು ಹಮ್ಮಿಕೊಂಡಿದ್ದ ಬ್ರಿಡಿಂಗ್ ದಿ ಗ್ಯಾಪ ಬಿಟವಿನ್ ಇಂಡಸ್ಟ್ರಿ ಆ್ಯಂಡ್ ಅಕಾಡೆಮಿಕ್ಸ್ ಶೈಕ್ಷಣಿಕ ಮತ್ತು ಮಾಧ್ಯಮಗಳ ನಡುವಿನ ಅಂತರ ಜೋಡಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಗಳಲ್ಲಿ ನುರಿತ ಮತ್ತು ಅನುಭವಿ ವಿದ್ಯಾರ್ಥಿಗಳು ಬೇಕಾಗುತ್ತದೆ.
ಅವರನ್ನು ತಯಾರು ಮಾಡುವುದು ಕಷ್ಟವಾಗುತ್ತಿದೆ. ಇವತ್ತಿನ ಉದ್ಯಮದ ನಿರೀಕ್ಷೆಗಳೆ ಬೇರೆ, ಪಠ್ಯಗಳಲ್ಲಿರುವುದುಬೇರೆ. ಆದ್ದರಿಂದ ಉದ್ಯಮ ಮತ್ತು ಶೈಕ್ಷಣಿಕ ಸಂಘಗಳ ನಡುವಿನ ಅಂತರ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಪಠ್ಯ ಹಾಗೂ ತರಬೇತಿ ನೀಡುವುದು ಬದಲಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಹೈ.ಕ.ಶಿ. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಮಾತನಾಡಿ, ಇಂತಹಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿದೆ.
ಉದ್ಯಮಗಳೊಂದಿಗಿನ ಸಂವಾದ, ಚರ್ಚೆಯಿಂದ ಉದ್ಯಮಕ್ಕೆ ಬೇಕಾಗುವ ಜ್ಞಾನವನ್ನು ಅರ್ಜಿಸಬಹುದು. ಇಂತಹಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು. ಹೈ.ಕ.ಸಂಸ್ಥೆಯ ಕಾರ್ಯದರ್ಶಿ ಆರ್.ಎಸ್. ಹೊಸಗೌಡ, ಆಡಳಿತ ಮಂಡಳಿ ಸದಸ್ಯ ಉದಯ ಕುಮಾರ ಚಿಂಚೋಳಿ, ಡಾ| ಇಂದುಮತಿ ದೇಶಮಾನೆ, ಸಂಯೋಜಕರಾದ ಡಾ| ಸಿ.ಎಚ್.ಬಿರಾದಾರ, ಪ್ರೊ| ಭರತ ಕೊಡ್ಲಿ ಹಾಜರಿದ್ದರು.
ನಾಗರಾಜ ಕುಲಕರ್ಣಿ, ಪ್ಲಾಂಟ್ ಹೆಡ್ ಜುಪಿಟರ್ ಟೂಲ್ಸ್ ಕಂಪನಿ, ಡಾ| ಎಸ್.ಎಂ. ಜಗದೀಶ ಆಗಮಿಸಿದ್ದರು. ಕು| ಅಂಬಿಕಾ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥೆ ಡಾ| ಇಂದುಮತಿ ದೇಶಮಾನೆ ಸ್ವಾಗತಿಸಿದರು. ಪ್ರೊ| ವಿ.ಬಿ. ಹಿಪ್ಪರಗಿ ನಿರೂಪಿಸಿದರು.
ಡಾ| ಚಿ.ಎಚ್. ಬಿರಾದಾರ ಪ್ರಾಸ್ತವಿಕ ಭಾಷಣ ಮಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ| ಭರತ ಕೊಡ್ಲಿ ವಂದಿಸಿದರು. ಉಪ ಪ್ರಾಚಾರ್ಯ ಡಾ| ಮಹಾದೇವಪ್ಪ ಗಾದಗೆ, ಡಾ| ಓ.ಡಿ. ಹೆಬ್ಟಾಳ, ಅಕಾಡೆಮಿ ಡೀನ್ ಡಾ| ರಾಜೇಂದ್ರ ಹರಸೂರ, ಡಾ| ಶಶಿಧರ ಕಲಶೆಟ್ಟಿ, ಡಾ| ಬಾಬುರಾವ ಶೇರಿಕಾರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.