ತೊಗರಿ ಖರೀದಿ ಕೇಂದ್ರದಲ್ಲಿ ಸುಲಿಗೆ?


Team Udayavani, Mar 10, 2017, 3:15 PM IST

gul6.jpg

ಕಲಬುರಗಿ: ಜಿಲ್ಲೆಯಲ್ಲಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರ ಸುಲಿಗೆ ಜೋರಾಗಿ ನಡೆದಿದೆ. ಇದರಲ್ಲಿ ಅಧಿಕಾರಿಗಳು, ಕಮಿಷನ್‌ ಏಜೆಂಟರು ಹಾಗೂ ಸ್ಥಳೀಯ ಅಡತ ಮಾಲಕರು ಶಾಮೀಲಾಗಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 54 ತೊಗರಿ ಖರೀದಿ ಕೇಂದ್ರಗಳಿವೆ. ಕೆಲವು ಕೇಂದ್ರಗಳನ್ನು ಹೊರತು ಪಡಿಸಿದರೆ, ಉಳಿದೆಡೆ ವಿವಿಧ ಹಂತ ಮತ್ತು ರೀತಿಯಲ್ಲಿ ಸುಲಿಗೆ ನಡೆದಿದೆ.

ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೆಸರಿಗಾಗಿ ಹೋರಾಡುವ ಮುಖಂಡರಿಗೆ ಇದರ ಗೊಡವೆ ಬೇಕಿಲ್ಲ. ಆಸಕ್ತ ಮತ್ತು ನಿಜವಾದ ರೈತ ಹೋರಾಟಗಾರರ ಕೂಗು ಸರಕಾರಕ್ಕೆ ಮುಟ್ಟುತ್ತಿಲ್ಲ. ಇದರಿಂದಾಗಿ ಒಳಗೊಳಗೆ ನಿರಂತರವಾಗಿ ರೈತರುಶೋಷಣೆ ಮತ್ತು ಸುಲಿಗೆಗೆ ತಲೆ ಕೊಡುತ್ತಿದ್ದಾರೆ. 

10ಚೀಲಕ್ಕೆ 2 ಕೆಜಿ: ಅಫಜಲಪುರ ಖರೀದಿ ಕೇಂದ್ರದಲ್ಲಿ ಪ್ರತಿ 10 ಚೀಲಕ್ಕೆ ಒಂದು ಕ್ಯಾರಿಬ್ಯಾಗಿನಲ್ಲಿ ಮೂರ್‍ನಾಲ್ಕು ಕೆಜಿ ಎತ್ತಿಡಲಾಗುತ್ತದೆ. ಕೇಳಿದರೆ ಇದು ಹೈದ್ರಾಬಾದ್‌ನ ನೆಫೆಡ್‌ ಅಧಿಕಾರಿಗಳು ಹೇಳಿದ್ದಾರೆ. ಇದೆಲ್ಲವೂ ಅವರಿಗೆ ಹೋಗುತ್ತದೆ ಎಂದು ಸಬೂಬು ಹೇಳುತ್ತಾರೆ. ಆದರೆ, ಅಸಲಿನಲ್ಲಿ ಪ್ರತಿ ದಿನ ಖರೀದಿ ಮುಗಿದ ಬಳಿಕ ಕ್ಯಾರಿಬ್ಯಾಗ್‌ನಲ್ಲಿ ಸಂಗ್ರಹವಾದ ಎಲ್ಲ ತೊಗರಿ ಚೀಲಗಳಿಗೆ ತುಂಬಿ ಅದೇ ನೆಫೆಡ್‌ಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಖರೀದಿ  ಕೇಂದ್ರದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಕೆಲವು ರೈತರು ದೂರಿದ್ದಾರೆ.

ಚೀಲಕ್ಕೆ 500 ರೂ. ಕಮಿಷನ್‌: ಜೇವರ್ಗಿ ಖರೀದಿ ಕೇಂದ್ರದಲ್ಲಂತೂ ನೇರವಾಗಿ ಖರೀದಿ ಕೇಂದ್ರದ ಬಾಗಿಲಿನಲ್ಲೇ ನಿಂತು ಪ್ರತಿ ಚೀಲಕ್ಕೆ 500 ರೂ. ಕಮಿಷನ್‌ ವಸೂಲಿ ಮಾಡಲಾಗುತ್ತಿದೆ. ಕೇಳಿದರೆ ರೈತ ನಾಯಕರು ಹೇಳಿದ್ದಾರೆ. ಇದು ಅವರಿಗೆ ಹೋಗುತ್ತದೆ. ಸುಮ್ಮನೆ ಕೊಟ್ಟು ಹೋಗ್ರಿ, ಇಲ್ಲವಾದ್ರೆ ನಿಮ್ಮ ತೊಗರಿ ಖರೀದಿ ಆಗಲ್ಲ ಎನ್ನುವ ಬೆದರಿಕೆ ಹಾಕಲಾಗುತ್ತಿದೆ. ಮೊದಲು ಪ್ರಕಾಶ ಎನ್ನುವ ವ್ಯಕ್ತಿ,

ಈಗಮೆಹಬೂಬ್‌ ಎನ್ನುವ ವ್ಯಕ್ತಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಖರೀದಿ ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ ನಮಗೇನೂ ಗೊತ್ತಿಲ್ಲ, ಖರೀದಿ ಕೇಂದ್ರದ ಹೊರಗಿನ ವ್ಯವಹಾರಕ್ಕೆ ನಾವು ಹೊಣೆಯಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಈ ಸುಲಿಗೆಮತ್ತು ನೇರ ಶೋಷಣೆಗೆ ಯಾರು ಹೊಣೆ?. 

ಖರೀದಿ ಗೋಲ್‌ಮಾಲ್‌: ಆಳಂದ ತಾಲೂಕಿನಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಆದರೆ, ಒಂದು ಟೋಕನ್‌ನಲ್ಲಿ 50 ಕ್ವಿಂಟಾಲ್‌ ಖರೀದಿ ಮಾಡಬೇಕೆನ್ನುವ ನಿಯಮವೇ ಅಡತ ಮತ್ತು  ದಲ್ಲಾಳಿಗಳ ಸುಲಿಗೆಗೆ ದಾರಿ ಮಾಡಿಕೊಟ್ಟಿದೆ. ಒಬ್ಬರೈತ ಮೊದಲೇ ಹೆಸರು ನೋಂದಣಿ ಮಾಡಿ ತನ್ನ 20 ಕ್ವಿಂಟಾಲ್‌ ಅಂತ ಹೇಳಿ ಟೋಕನ್‌ ಪಡೆದಿರುತ್ತಾನೆ. 

ಪಾಳಿಯಲ್ಲಿ ಆತನ ಟೋಕನ್‌ಬಂದಾಗ ಅಡತ ಮತ್ತು ದಲ್ಲಾಳಿಗಳು ತಮ್ಮ 30 ಕ್ವಿಂಟಾಲ್‌ ತೊಗರಿ ಸೇರಿಸಿ ಮಾರಾಟ ಮಾಡುತ್ತಾರೆ. ಅದಕ್ಕೆ ಹೆಚ್ಚುವರಿ ಪಹಣಿ ನೀಡ್ತಾರೆ. ಇದಕ್ಕೆಲ್ಲಾ ಖರೀದಿ ಕೇಂದ್ರದ ಅಧಿಕಾರಿಗಳ ಕೃಪೆ ಇರುತ್ತದೆ. ಇಲ್ಲಿ ಬದಲಿ ರೈತರಿಗೆ ಅನ್ಯಾಯವಾಗುತ್ತಿದೆ. 

ಹೀಗೆ ಜಿಲ್ಲೆಯ ಬಹುತೇಕ ಖರೀದಿ ಕೇಂದ್ರಗಳಲ್ಲಿಒದೊಂದು ರೀತಿ ಸುಲಿಗೆ ನಡೆಯುತ್ತಿದೆ. ಇದನ್ನೆಲ್ಲ ನೋಡಿಕೊಳ್ಳಬೇಕಾದ ಉಸ್ತುವಾರಿ ಅಧಿಕಾರಿ ಮಹದೇವಪ್ಪ ಅವರನ್ನು ಕೇಳಿದರೆ, ಇಲ್ಲಾ ಸರ್‌.. ಈಗಲೇ ಅಲ್ಲಿಗೆ ಹೋಗಿ ತಡಿತೀನಿ, ಕ್ರಮ ತಗೋತೀನಿ ಅಂತಾರೆ. ಕೇಂದ್ರಗಳಿಗೆ ವಿಚಾರಿಸಿದರೆ ಅವರು ಬರಲ್ಲಾ, ಅವರಿಗೆ ವ್ಯವಸ್ಥೆ ಆಗಿದೆ ಅಂತಾ ಹೇಳ್ತಾರೆ. 

ಹಾಗಿದ್ದರೆ ಇದು ಬೇಲಿ ಎದ್ದು ಹೊಲ ಮೇಯ್ದ ಕಥೆಯಂತಾಗಿದೆ. ಇದನ್ನು ತಡೆಯುವಲ್ಲಿ ಕಟ್ಟು ನಿಟ್ಟಿನ ಕಾನೂನುಹಾಗೂ ಅದರ ಪರಿಪಾಲನೆ ಅಗತ್ಯವಿದ್ದು, ರೈತರು ಕೂಡ ಕಮಿಷನ್‌ ನೀಡುವುದು, ಅಧಿಕಾರಿಗಳಿಗೆ ಊಟ, ನೀರು, ಸಿಗರೇಟು ತಂದು ಕೊಡುವುದನ್ನು ನಿಲ್ಲಿಸಬೇಕು ಎನ್ನುವುದು ಪ್ರಜ್ಞಾವಂತರ ರೈತರಮನವಿಯಾಗಿದೆ. 

* ಸೂರ್ಯಕಾಂತ ಎಂ. ಜಮಾದಾರ

ಟಾಪ್ ನ್ಯೂಸ್

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.