17 ಸಾವಿರ ರೈತರಿಗೆ ಇನ್ನೂ ಸಿಕ್ಕಿಲ್ಲ ಮುಂಗಾರು ಬೆಳೆವಿಮೆ


Team Udayavani, Mar 10, 2017, 3:18 PM IST

gul7.jpg

ಕಲಬುರಗಿ: ಕಳೆದ 2015-16ನೇ ಸಾಲಿನ ಮುಂಗಾರು ಬೆಳೆಹಾನಿಗೆಂದು ಜಿಲ್ಲೆಯ 1.05 ಲಕ್ಷ ರೈತರಿಗೆ 2016ರ ಮೇ  ತಿಂಗಳಲ್ಲಿ ಮಂಜೂರಾಗಿರುವ 197 ಕೋ.ರೂ ಬೆಳೆವಿಮೆ ಪರಿಹಾರ ಇನ್ನೂ ಜಿಲ್ಲೆಯ 17 ಸಾವಿರ ರೈತರಿಗೆ ಪಾವತಿಯಾಗಿಲ್ಲ. ಹೀಗಾಗಿ 17 ಸಾವಿರ ರೈತರು ಬ್ಯಾಂಕ್‌ ಹಾಗೂ ಕೃಷಿ ಇಲಾಖೆ ಅಲೆದು-ಅಲೆದು ಸುಸ್ತಾಗಿದ್ದಾರೆ. ಮುಂಗಾರು ಹಂಗಾಮಿನ ತೊಗರಿ ಬೆಳೆ ಹಾನಿಗೆ ಕಳೆದ ಮೇ ಮಾಸಾಂತ್ಯದಲ್ಲಿಯೇ ಜಿಲ್ಲೆಗೆ 197 ಕೋಟಿ ರೂ. ಮಂಜೂರಾಗಿತ್ತು. 

ರೈತರು ಎರಡು ಕಡೆ ವಿಮೆ ಮಾಡಿಸಿದ್ದಾರೆಂದು ಇಲ್ಲದ ಆಕ್ಷೇಪ ಎತ್ತಿ ವಿನಾಕಾರಣ ತನಿಖೆಯನ್ನು ಐದು ತಿಂಗಳು ನಡೆಸಿ ಒಂದು, ಎರಡುಹಾಗೂ ಮೂರು ಪಟ್ಟಿ ಸಿದ್ಧಪಡಿಸಿ ಡಿಸೆಂಬರ್‌ ಮೊದಲ ವಾರದಲ್ಲಿ ಮೊದಲ ಪಟ್ಟಿ ರೈತರಿಗೆ ಮಾತ್ರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿ, ತದನಂತರ ಎರಡನೇ ಎರಡನೇ ಪಟ್ಟಿ ರೈತರಿಗೆ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಮೂರನೇ ಪಟ್ಟಿಯ ರೈತರಿಗೆ ಅಂದರೆ ಇನ್ನೂ ಶೇ. 30ರಷ್ಟು ರೈತರಿಗೆ ಬೆಳೆವಿಮೆ ಹಣ ನೀಡದೇ ಸತಾಯಿಸಲಾಗುತ್ತಿದೆ. ಮೂರನೇ ಪಟ್ಟಿಯಲ್ಲಿ 17ರಿಂದ 18 ಸಾವಿರ ರೈತರಿದ್ದಾರೆ. ರಾಜ್ಯದ ಇತರ ಜಿಲ್ಲೆಗಳ ರೈತರಿಗೆ ಜೂನ್‌ನಲ್ಲಿಯೇಬೆಳೆವಿಮೆ ಪರಿಹಾರ ಪಾವತಿಯಾಗಿದ್ದರೆ ಕಲಬುರಗಿ ರೈತರಿಗೆ ಇಲ್ಲದ ಆಕ್ಷೇಪ ಮುಂದೆ ಮಾಡಿ ನಾಲ್ಕು ತಿಂಗಳುಗಟ್ಟಲೇ ತನಿಖೆ ನಡೆಸಿ ಡಿಸೆಂಬರ್‌ ತಿಂಗಳಲ್ಲಿ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಯಿತು.

ಆದರೆ ಎಲ್ಲ ರೈತರಿಗೆ ವಿತರಿಸದೇ ಮೂರು ಪಟ್ಟಿ ಮಾಡಿದರು. ಎರಡು ಪಟ್ಟಿಯಲ್ಲಿನ ರೈತರಿಗೆ ಪರಿಹಾರ ದೊರಕಿದೆ. ಮೂರನೇ ಪಟ್ಟಿ ರೈತರಿಗೆ ಇನ್ನೂ ಬೆಳೆವಿಮೆ ಪರಿಹಾರ ದೊರಕಿಲ್ಲ. ಕಳೆದ 2015-16ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆವಿಮೆ 2017ರ ಜನೇವರಿ ತಿಂಗಳಿನ ಮೊದಲ ವಾರದಲ್ಲಿ ಮಂಜೂರಾಗಿದ್ದು, ಕಲಬುರಗಿ ಜಿಲ್ಲೆಗೆ ಮಂಜೂರಾಗಿದ್ದ 34.6 ಕೋಟಿ ರೂ. ಈಗಾಗಲೇ ರೈತರ ಖಾತೆಗಳಿಗೆ ಸದ್ದಿಲ್ಲದೇ ಜಮಾ ಆಗಿದೆ. ಆದರೆ ಮುಂಗಾರು ಹಂಗಾಮಿನ ಇನ್ನೂ 17ರಿಂದ 18 ಸಾವಿರ ರೈತರಿಗೆ ಜಮಾ ಆಗುತ್ತಿಲ್ಲ. 

ಅತಿವೃಷ್ಟಿ ಹಾನಿ ಪರಿಹಾರ ಮರೀಚಿಕೆ: ಕಳೆದ ಸೆಪ್ಟೆಂಬರ್‌ ಮಾಸಾಂತ್ಯದಲ್ಲಿ ಕಲಬುರಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿರುವ ಬೆಳೆ ಹಾನಿಗೆ ಈಗ ಪರಿಹಾರ ದೊರೆಯವುದು ಮರೀಚಿಕೆ ಎಂಬುದು ಮೇಲ್ನೋಟಕ್ಕೆಕಂಡು ಬರುತ್ತಿದೆ. ಏಕೆಂದರೆ ರಾಜ್ಯದಲ್ಲಿನ ಪ್ರಸಕ್ತ ಸಾಲಿನ ಬರಗಾಲ ಹಾನಿಗೆಂದು ಕೇಂದ್ರ ಸರ್ಕಾರ ಇತ್ತೀಚೆಗೆ 1784 ಕೋಟಿ ರೂ. ರಾಜ್ಯಕ್ಕೆ ಮಂಜೂರು ಮಾಡಿ 450 ಕೋಟಿ ರೂ. ಬಿಡುಗಡೆ ಮಾಡಿದೆ.

ಈ ಹಣ 11 ಜಿಲ್ಲೆಗಳಲ್ಲಿನ ಬರಗಾಲ ಪೀಡಿತ ರೈತರಿಗೆ ವಿತರಿಸಲು   ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದರಲ್ಲಿ ಕಲಬುರಗಿ-ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಯಾದ ಬೆಳೆಗೆ ಪರಿಹಾರ ನೀಡಲಿಕ್ಕೆ ಬಾರದು. ಅತಿವೃಷ್ಟಿ ಹಾನಿಗೆ ಪರಿಹಾರವನ್ನು ಕೇಂದ್ರದಿಂದ ಬಿಡುಗಡೆಯಾಗಿ ಬಂದ ನಂತರವಷ್ಟೇ ವಿತರಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಕೇಂದ್ರದಿಂದ ಸದ್ಯಕ್ಕೆ ಕಲಬುರಗಿ-ಬೀದರ್‌ ರೈತರಿಗೆ ಬೆಳೆಹಾನಿಗೆ ಪರಿಹಾರ ಬಿಡುಗಡೆಯಾಗುವ ಯಾವುದೇ ಲಕ್ಷಣಗಳಿಲ್ಲ.

ಈ ಹಿನ್ನೆಲೆಯಲ್ಲಿಯೇ ಪರಿಹಾರ ದೊರೆಯುವುದು ಅನುಮಾನವೆಂದೇ ಹೇಳಲಾಗುತ್ತಿದೆ. ಕಳೆದ ಡಿಸೆಂಬರ್‌ 15ರಂದು ಕಲಬುರಗಿ-ಬೀದರ್‌ ಜಿಲ್ಲೆಯಲ್ಲಿನ ಅತಿವೃಷ್ಟಿ ಹಾನಿಗೆಂದು ಕೇಂದ್ರ ಗೃಹ ಖಾತೆಯಜಂಟಿ ಕಾರ್ಯದರ್ಶಿ ಬೀನಾ ಪ್ರಸಾದ್‌ ನೇತೃತ್ವದ ಹಾಗೂ ಕೃಷಿ ಇಲಾಖೆಯ ಎಸ್‌.ಎಂ. ಕೋಹಲಟ್ಕರ್‌, ಹಣಕಾಸು ಇಲಾಖೆಯ ಸಲಹೆಗಾರ ದೀನಾನಾಥ, ಕೇಂದ್ರ ಜಲ ಆಯೋಗದ ನಿರ್ದೇಶಕ (ಉಸ್ತುವಾರಿ) ಪಂಕಜ್‌ಕುಮಾರ ಶರ್ಮಾ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ನೀತಾ ತಹಲಿಯಾನಿ ಹಾಗೂ ಗೃಹ ಇಲಾಖೆ ಉಪ ಕಾರ್ಯದರ್ಶಿ ರೀನಾ ಗುಹಾ ಸದಸ್ಯರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿದೆ. 

ಈ ತಂಡ ವರದಿ ನೀಡಿದೆಯಾದರೂ ರಾಜ್ಯ ಸರ್ಕಾರದಿಂದಯಾವುದೇ ಒತ್ತಾಯ ಹೋಗಿಲ್ಲ. ಪ್ರಸಕ್ತ ವರ್ಷ ರಾಜ್ಯದಾದ್ಯಂತ ಬರಗಾಲ ಬಿದ್ದಿದೆಯಾದರೂ ಕಳೆದ ಸೆಪ್ಟೆಂಬರ್‌ ಮಾಸಾಂತ್ಯದಲ್ಲಿ ಕಲಬುರಗಿ-ಬೀದರ್‌ ಜಿಲ್ಲೆಯಲ್ಲಿ ಮಾತ್ರ ಅತಿವೃಷ್ಟಿ ಉಂಟಾಗಿ ಕಲಬುರಗಿ ಜಿಲ್ಲೆಯಲ್ಲಿ ಕೇಂದ್ರ ಪ್ರಕೃತಿ ವಿಕೋಪ ನಿಧಿ ನಿಯಮಾವಳಿ ಪ್ರಕಾರವೇ 62 ಕೋಟಿ ರೂ ಬೆಳೆಹಾನಿಯಾಗಿದೆ. ಅದೇ ರೀತಿ ಬೀದರ್‌ ಜಿಲ್ಲೆಯಲ್ಲಿ 195 ಕೋಟಿ ರೂ. ಬೆಳೆ ಹಾನಿಯಾಗಿದೆ.

ಇದಕ್ಕೆ ಪರಿಹಾರ ಯಾವಾಗ? ಎಂಬುದೇ ಪ್ರಶ್ನೆಯಾಗಿದ್ದು, ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಅತಿವೃಷ್ಟಿ ಹಾನಿಯಿಂದಾದ ಬೆಳೆಗೆ ಪರಿಹಾರ ದೊರಕುವುದು ಗಗನಕುಸುಮ ಎನ್ನುವಂತೆ ಕಾಣುತ್ತಿದೆ. 17ರಿಂದ 18 ಸಾವಿರ ರೈತರಿಗೆ ಇನ್ನೂ ಯಾವಾಗ ಬೆಳೆವಿಮೆಪಾವತಿಯಾಗುತ್ತದೆ ಎಂದು ಸಂಬಂಧಪಟ್ಟವರನ್ನು ಕೇಳಿದರೆ ಹಾರಿಕೆ ಉತ್ತರವೇ ಸಿಗುತ್ತಿದೆ. ಒಂದೇಡೆ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಮತ್ತೂಂದೆಡೆ ಅತಿವೃಷ್ಟಿ ಹಾನಿಗೆ ಪರಿಹಾರ ದೊರಕುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಟ್ಟಾರೆ ಇದನ್ನೆಲ್ಲ ಅವಲೋಕಿಸಿದರೆ ರೈತರ ಗೋಳಿಗೆ ಪರಿಹಾರ ಹಾಗೂ ಕೊನೆ  ಇಲ್ಲವೇ? ಎನ್ನುವಂತಾಗಿದೆ.

* ಹಣಮಂತರಾವ ಭೈರಾಮಡಗಿ 

ಟಾಪ್ ನ್ಯೂಸ್

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.