ಗಂಗಾ ನದಿಯಲ್ಲಿ ಸ್ನೇಹಿತನ ಚಿತಾಭಸ್ಮ ವಿಸರ್ಜಿಸಿದ ವೋ!
Team Udayavani, Mar 11, 2017, 9:35 AM IST
ಹೊಸದಿಲ್ಲಿ: ಆತನದು ಸಿಡ್ನಿ ಮೂಲ, ದಿಕ್ಕಿಲ್ಲದ ಅನಾಥ. ಶೂ ಪಾಲಿಶ್ ಮಾಡುತ್ತಿದ್ದ ಆತ ದುರದೃಷ್ಟವಶಾತ್ ಇತ್ತೀಚೆಗೆ ಅನಾರೋಗ್ಯ ದಿಂದ ತೀರಿಕೊಂಡ. ಆದರೆ ಅವನ ಕೊನೇ ಆಸೆ ಪವಿತ್ರ ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಆಗಬೇಕು ಎಂಬುದು. ಈ ಆಸೆಯನ್ನು ನೆರವೇರಿಸಿದ್ದು, ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ದಿಗ್ಗಜ ಸ್ಟೀವ್ ವೋ!
ಹೌದು, ಕಳೆದ ಮಂಗಳವಾರ ಆಸ್ಟ್ರೇಲಿಯ ತಂಡದ ಮಾಜಿ ನಾಯಕ, ಏಕದಿನ ವಿಶ್ವಕಪ್ ವಿಜೇತ, ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾದ ಸ್ಟೀವ್ ವೋ ವಾರಾಣಸಿಗೆ ಭೇಟಿ ನೀಡಿ ಸ್ನೇಹಿತ ಬ್ರಿಯಾನ್ ರುಡ್ ಚಿತಾಭಸ್ಮ ವಿಸರ್ಜನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಸ್ಟೀವ್ ವೋ, “ಸ್ನೇಹಿತನ ಕೊನೆ ಆಸೆಯಂತೆ ಪವಿತ್ರ ಗಂಗಾನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿದ್ದೇನೆ. ಆತ ಬಹಳ ಕಠಿನ ದುಡಿಮೆ ನಡೆಸಿದ್ದಾನೆ. ಅವನಿಗೆ ಕುಟುಂಬವಿರಲಿಲ್ಲ. ಆತನ ಕೊನೆಯ ಆಸೆಯನ್ನು ಪೂರೈಸಿರುವುದಕ್ಕೆ ಖುಷಿಯಾಗುತ್ತಿದೆ. ವಾರಾಣಸಿಗೆ ಈ ಹಿಂದೆ ಭೇಟಿ ನೀಡಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಸಾಧ್ಯವಾಗಿದೆ. ಒಂದು ರೀತಿಯ ಆಧ್ಯಾತ್ಮಿಕ ಭಾವನೆ ಮೂಡುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.