ಇಲ್ಲೂ ಬರ ಅಮರ


Team Udayavani, Mar 11, 2017, 10:46 AM IST

10.jpg

ದಾಂಡೇಲಿಯ ಕಾಡೇ ಅಂತದ್ಧು. ಇದು ಉಳವಿ ಚನ್ನಬಸವಣ್ಣ ಓಡಾಡಿದ ಸ್ಥಳ. ಇಲ್ಲಿ ಬರಗಾಲ ಬರೋದು ಅಂದ್ರ ಏನು ? ಭೂಕಂಪ ಆಗೋದು ಅಂದ್ರ ಏನು. ಶರಣರು ನಡೆದಾಡಿದ ನೆಲಕ್ಕೆ ಕಷ್ಟ ಅನ್ನೋದು ಇಲ್ಲ ತಿಳಕೋ… ಆದ್ರ ಜಗತ್ತಿನ ಮ್ಯಾಲ ಕರ್ಮ ಹೆಚ್ಚಾಗೇತಿ..,ಬೇಲಿನ ಎದ್ದು ಹೊಲ ಮೇದಾಗ…ಕಾಡು, ಕಾಡ ಪ್ರಾಣಿ ಉಳಿಯೋದು ಹೆಂಗ ಹೀಗೆ ಬೆಳಗ್ಗೆಯಿಂದಲೇ ಕಿರುಚುತ್ತಿದ್ದ ಹಳಿಯಾಳದ ಫಾರೆಸ್ಟರ್‌ ಸಾಹೇಬ್‌ ಶಿವಲಿಂಗ. 

ಬರೀ ನಾಲ್ಕು ದಶಕಗಳ ಹಿಂದೆಯಷ್ಟೇ, ರಾಜ್ಯ,ರಾಷ್ಟ್ರ ಮಾತ್ರವಲ್ಲ, ಅಂತಾರಾಷ್ಟ್ರಿಯಮಟ್ಟದ ಪಕ್ಷಿ ತಜ್ಞರನ್ನು ಬರಮಾಡಿಕೊಂಡು ಬಂದು ಕಾಡಿನ ಸುತ್ತ ಸುತ್ತಿ, ಇಲ್ಲಿನ ಉತ್ತಮ ಸ್ಥಳಗಳು, ಕಿರು ಜಲಪಾತಗಳು, ಪ್ರಾಣಿಗಳು ನೀರು ಕುಡಿಯಲು ಬರುವ ಆಯಕಟ್ಟಿನ ಸ್ಥಳಗಳನ್ನ ಶೋಧಿಸಿ, ಪ್ರಾಣಿಪ್ರಿಯರ ಕ್ಯಾಮರಾಕ್ಕೆ ಕೆಲಸ ಕೊಡುತ್ತಿದ್ದ ಶಿವಲಿಂಗ ಸಾಹೇಬರಿಗೆ ಕೆಲಸದಿಂದ ನಿವೃತ್ತಿ ತೆಗೆದುಕೊಂಡಾಗಿನಿಂದ ಮುಗಿನ ಮೇಲೆ ಸಿಟ್ಟು ಹತ್ತಿ ಕುಳಿತುಬಿಟ್ಟಿದೆ. ಇದಕ್ಕೆ ಕಾರಣ,ಅರಣ್ಯದ ಮಧ್ಯದಲ್ಲಿರುವ ಪ್ರಾಣಿ,ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕಿರುವುದು. 

ಧಾರವಾಡ ಜಿಲ್ಲೆಯ ಪಶ್ಚಿಮ ಭಾಗವನ್ನು ಆವರಿಸಿರುವ ಕಲಘಟಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ,ಜೋಯಿಡಾ,, ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕನ್ನೊ ಒಳಗೊಂಡ ಈ ಭಾಗಕ್ಕೆ ಉಳವಿ ತಳ ಎನ್ನುತ್ತಾರೆ ಉತ್ತರ ಕರ್ನಾಟಕದ ಮಂದಿ. ದೈತ್ಯ ಕಾಡು,ಸದಾ ಹರಿಯುವ ಕಪ್ಪಾದ ಕಾಳಿನದಿ, ಸುಡು ಬಿಸಿಲಿನಲ್ಲಿ ಎಸಿಯಷ್ಟು ತಂಪಾಗಿರುವ ಮರಗಳ ನೆರಳು. ಹೊತ್ತು ಮುಳುಗುವ ಮುಂಚೆಯೇ ಇಬ್ಬನಿಯನ್ನೆ ಹಾಸಿಹೊದ್ದು ಮಲಗುವ ಇಲ್ಲಿನ ನಿಸರ್ಗವೇ ರಮ್ಯವಾಗಿದೆ. 

ಇಂತಿಪ್ಪ ಕಾಡಿನಲ್ಲಿ ಒಂದು ಕಾಲಕ್ಕೆ ಸಾವಿರಗಟ್ಟಲೇ ಹುಲಿಗಳಿದ್ದಿದ್ದು ಈಗ ಇತಿಹಾಸ. ಅಣಶಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಇಂದಿಗೂ ಹುಲಿಗಳಿವೆ, ಜಿಂಕೆಗಳಿವೆ, ಕರಿ ಚಿರತೆ, ಕಾಡುಕೋಣ, ನರಿ,ಕರಡಿ,ಚಿರತೆ, ಸಾರಗ,ಕಡವೆ..ಇನ್ನು ಹಾರ್ನ್ಬಿಲ್‌ ಸೇರಿದಂತೆ ಚೆಂದ ಚೆಂದದ ಪಕ್ಷಿ ಗಳಿಗೂ ಇದು ತವರು ಮನೆ. ಇಂತಹ ಸುಂದರ ಕಾಡಿಗೆ ಇಂದು ದಪ್ಪನೆ ಬಂದು ಅಪ್ಪಳಿಸಿರುವ ಬರಗಾಲ ಮತ್ತು ಏರು ಬಿಸಿಲು ಕಾಡಿನ ಜೀವ ಸಂಕುಲವನ್ನೇ ಸಂಕಷ್ಟಕ್ಕೆ ಈಡು ಮಾಡಿಟ್ಟಿದೆ. 

ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳಲ್ಲಿನ ಅರಣ್ಯ, ಜೊತೆಗೆ ಗೋವಾ ರಾಜ್ಯದ ಸ್ವಲ್ಪ ಪ್ರದೇಶವೂ ಸೇರಿಕೊಂಡಿರುವ ಕಾಡನ್ನು ಆಶ್ರಯಿಸಿಕೊಂಡು ಜೀವಿಸುತ್ತಿರುವ ಕಾಡಿನ ಜೀವಸಂಕುಲವೇ ಇದೀಗ ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿದ್ದು, ಆನೆಗಳು ಕಾಡು ಬಿಟ್ಟು ರೈತರ ಹೊಲಕ್ಕೆ ನುಗ್ಗಿದರೆ, ಜಿಂಕೆಗಳು ಜೀವದ ಹಂಗ ತೊರೆದು ರೈತರ ಹೊಲದಲ್ಲಿ ನೀರಾವರಿಗೆ ಬಿಟ್ಟ  ನೀರು ಕುಡಿಯಲು ಹಿಂಡುಗಟ್ಟಲೆ ಬರುತ್ತಿವೆ. 

ಗೋವಾ-ಕರ್ನಾಟಕ ರಾಜ್ಯದ ಗಡಿಯಲ್ಲಿ ಬರುವ ಭೀಮಗಡ ಮತ್ತು ಅಣಶಿ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಕರಿ ಚಿರತೆ, ಕಾಡುಕೋಣ, ಚಿಂಕೆ, ಕಡವೆ ಸೇರಿದಂತೆ ಎಲ್ಲಾ ವಿಭಿನ್ನ ಜಾತಿಯ ಪ್ರಾಣಿಗಳು ಕುಡಿಯುವ ನೀರು ಮತ್ತು ಆಹಾರವನ್ನು ಅರಸಿಕೊಂಡು ಪೂರ್ವದಿಕ್ಕಿನತ್ತ ಅಂದರೆ ಬಯಲು ಸೀಮೆಯತ್ತ ಬರುತ್ತಿವೆ. 

ಖಾನಾಪೂರ, ಬೆಳಗಾವಿ, ಹಳಿಯಾಳ,ಮುಂಡರಗಿ,ಧಾರವಾಡ,ಕಲಘಟಗಿ, ಮುಂಡಗೋಡ, ಹಾನಗಲ್‌, ಶಿಕಾರಿಪುರ ತಾಲೂಕಿನಲ್ಲಿನ ಕಾಡು ಪ್ರಾಣಿಗಳು ಬರಗಾಲದಿಂದ ಕಂಗೆಟ್ಟಿವೆ ಎನ್ನುವ ಗುಪ್ತ ವರದಿಯನ್ನ ಸ್ವತಃ ಅರಣ್ಯ ಇಲಾಖೆ ಕಿರಿಯ ಅಧಿಕಾರಿಗಳೇ ಸರ್ಕಾರದ ಮಟ್ಟದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ. 

ಧಾರವಾಡ ಜಿಲ್ಲೆಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗೋವಾ- ಕರ್ನಾಟಕ ಆನೆ ಕಾರಿಡಾರ್‌ ವ್ಯಾಪ್ತಿಯಲ್ಲಿ ಸುತ್ತುತ್ತಿವೆ. 2012 ರ ಅವಧಿಯಲ್ಲೂ ಇಲ್ಲಿ ಬರಗಾಲ ಕಾಣಿಸಿಕೊಂಡಾಗ ನೀರು ಮತ್ತು ಆಹಾರದ ಕೊರತೆಯಿಂದಾಗಿ ಇದೇ ರೀತಿ ಆನೆಗಳು ಧಾರವಾಡದ ಹೈಕೋರ್ಟ್‌ ಪೀಠದ ಜನ ನಿಬಿಡ ಪ್ರದೇಶದ ವರೆಗೂ ಪರೇಡ್‌ ಮಾಡಿದ್ದವು.ಇನ್ನು ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಕಡವೆ,ಜಿಂಕೆಗಳು, ರಾಣೆಬೆನ್ನೂರು ಸಮೀಪದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿನ ಕೃಷ್ಣಮೃಗ, ನವಿಲು ಸೇರಿ ಇಲ್ಲಿನ ಜೀವ ಸಂಕುಲವೇ ಕುಡಿಯುವ ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿವೆ.  

ದಾಂಡೇಲಿ,ಹಳಿಯಾಳ,ಧಾರವಾಡ,ಖಾನಾಪೂರ,ಹಾನಗಲ್‌ ತಾಲೂಕಿನಲ್ಲಿರುವ ಬಯಲು ಅರಣ್ಯ ಪ್ರದೇಶದಲ್ಲಿನ(ಅಂದರೆ ಎಲೆ ಉದುರಿಸುವ ಗಿಡಗಳ ಕಾಡು) ಶೇ.96 ರಷ್ಟು ಸಣ್ಣ ಕೆರೆಗಳು ಮತ್ತು ಪ್ರಾಣಿಗಳ ಕುಡಿಯುವ ನೀರಿಗಾಗಿ ಅರಣ್ಯ ಇಲಾಖೆ ತೋಡಿಸಿದ್ದ ಸಣ್ಣ ಹೊಂಡಗಳು ಮಳೆಯ ಕೊರತೆಯಿಂದ ಈ ವರ್ಷ ಬತ್ತಿ ಹೋಗಿವೆ. ಈ ಐದು ತಾಲೂಕಿನಲ್ಲಿ ಕಾಡು ಪ್ರಾಣಿಗಳ ದಾಹ ತಣಿಸುವ 670 ಕ್ಕೂ ಹೆಚ್ಚು ಕೆರೆಗಳಿವೆ. ಅವುಗಳ ಪೈಕಿ 580ರಷ್ಟು ಸಣ್ಣ ಕೆರೆಗಳು (ಹೊಂಡಗಳು ಸೇರಿ)ಸಂಪೂರ್ಣ ಬತ್ತಿ ಹೋಗಿವೆ. ಆದರೆ ಜೂನ್‌, 2017ರ ವರೆಗೂ ಪ್ರಾಣಿಗಳು ಈ ಅರಣ್ಯದಲ್ಲಿಯೇ ಜೀವನ ಸಾಗಿಸಬೇಕಾಗಿದ್ದು, ಈ ವರ್ಷದ ಬೇಸಿಗೆ, ಕಾಡು ಪ್ರಾಣಿಗಳ ಪಾಲಿಗೆ ಯಮನ ಪಾಶವಾಗುವ ಸಾಧ್ಯತೆಯೇ ಹೆಚ್ಚಿದೆ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯಲ್ಲಿನ ಪ್ರಾಣಿಪ್ರಿಯ ಹಿರಿಯ ಅಧಿಕಾರಿಗಳು. 

ಪ್ರಾಣಿಗಳಿಗೆ ನೀರಿನ ಕೊರತೆ ಇರುವ ಜಿಲ್ಲೆಗಳಲ್ಲಿನ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡುಗಳಲ್ಲಿ ಬತ್ತಿರುವ  ಕೆರೆಗಳ ಅಂಗಳದಲ್ಲಿ ಸಣ್ಣ ಗುಂಡಿ ತೋಡಿ, ತಾಡಪಲ್‌ಗ‌ಳನ್ನು ಹಾಕಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಜ್ಜಾಗಿದ್ದಾರೆ.  ಅಷ್ಟೇಯಲ್ಲ, ಅರಣ್ಯ ಮಧ್ಯದಲ್ಲಿ ಇರುವ ನರ್ಸರಿಗಳಿಗೆ ಜಿಂಕೆ,ಕಡವೆ ಮತ್ತು ಇತರ ಪ್ರಾಣಿಗಳು ಜೀವದ ಹಂಗು ತೊರೆದು ನೀರು ಕುಡಿಯಲು ಬರುತ್ತಿವೆ. ಹೀಗಾಗಿ ನರ್ಸರಿಗಳಿಂದ ಮತ್ತು ಅರಣ್ಯದ ಪಕ್ಕದಲ್ಲಿರುವ ರೈತರ ಹೊಲದಲ್ಲಿನ ಖಾಸಗಿ ಬೊರವೆಲ್‌ಗ‌ಳನ್ನ ಬಳಸಿಕೊಂಡು ಕಾಡಿನ ಅಂಚಿನಲ್ಲಿ ಅಲ್ಲಲ್ಲಿ ಗುಂಡಿತೋಡಿ ತಾಡಪತ್ರಿ(ನೀರು ಇಂಗಿಸದ ಅಬ್ರಕ )ಹಾಕಿ ಅಲ್ಲಿ ನೀರು ನಿಲ್ಲಿಸಿ ಪ್ರಾಣಿಗಳು ನಿರಾತಂಕವಾಗಿ ನೀರು ಕುಡಿಯಲು ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಹಣ ಸಮಯಕ್ಕೆ ಸರಿಯಾಗಿ ಸಿಕ್ಕುತ್ತಿಲ್ಲ ಎನ್ನುವ ಕೊರಗು ಅಧಿಕಾರಿಗಳಲ್ಲಿದೆ. 

ಹೀಗಾಗಿ ಶಿವಲಿಂಗ ಸಾಹೇಬ್‌ ಸಿಟ್ಟಾಗಿ, ತನ್ನ ಶಕ್ತಿ ಮೀರಿ ಕಾಡು ಉಳಿಸುವುದಕ್ಕೆ ಪ್ರಯತ್ನ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು, ದೊಡ್ಡ ಅಧಿಕಾರಿಗಳಿಗೆ ಮನವಿ ಕೊಡುತ್ತಿದ್ದಾರೆ. ಆದರೆ ಅವರ ಮನವಿಗಳನ್ನು ಹಿರಿಯ ಅಧಿಕಾರಿಗಳು ಪರಿಗಣಿಸುತ್ತಲೇ ಇಲ್ಲ ಎನ್ನುವ ಕಾರಣಕ್ಕೆ ಅವರಿಗೆ ಮತ್ತಷ್ಟು ಸಿಟ್ಟು ಬಂದಿದೆ.

 ಇಲ್ಲಿ ಸಮಸ್ಯೆ ಇಲ್ಲ
ದಾಂಡೇಲಿ,ಖಾನಾಪೂರದ ಒಳಭಾಗದಲ್ಲಿನ ದಟ್ಟ ಕಾಡಿನಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆದರೆ ಕಾಡಿನ ಹೊರ ಅಂಚಿನ ಕೆರೆಗಳು ಬತ್ತಿ ಹೋಗಿದ್ದು, ಕಾಡಿನ ಜೀವ ಸಂಕುಲಕ್ಕೆ ಸಂಕಷ್ಟ ತಂದಿಟ್ಟಿದೆ. ಅರಣ್ಯ ಇಲಾಖೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ. ಗ್ರಾಮಗಳು ಮತ್ತು ಹೊಲಗಳಂಚಿನ ಎಲೆ ಉದುರಿಸುವ ಗಿಡಗಳ ಕಾಡಿನಲ್ಲಿ ಈ ಹಿಂದೆ ಜೀವಂತವಾಗಿ ಹರಿಯುತ್ತಿದ್ದ ಸಣ್ಣ ಹಳ್ಳಕೊಳ್ಳಗಳು, ಕೊಳವೆಬಾವಿ ಮತ್ತು ಬರದಿಂದಾಗಿ ಬತ್ತಿ ಹೋಗಿದ್ದು, ಈ ಸಂಕಷ್ಟಕ್ಕೆ ಕಾರಣ ಎನ್ನುತ್ತಿದ್ದಾರೆ ಪರಿಸರ ತಜ್ಞರು. 

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

rasaleele

Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್‌ ಅಡಗಿಸಿಟ್ಟು ವಿಡಿಯೋ!

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.