ಮಲಯಾಳಂಗೆ ರಾಕ್ಲೈನ್
Team Udayavani, Mar 11, 2017, 11:00 AM IST
ಕನ್ನಡ, ತಮಿಳು, ತೆಲುಗು, ಹಿಂದಿ ಈ ನಾಲ್ಕು ಭಾಷೆಗಳಲ್ಲಿ, ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ಗಳ ಅಭಿನಯದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ರಾಕ್ಲೈನ್ ವೆಂಕಟೇಶ್ ಈಗ ಮಲಯಾಳಂನಲ್ಲೂ ಸದ್ದಿಲ್ಲದೆ ಸಿನಿಮಾ ಮಾಡುತ್ತಾರೆ. ಈ ಮೂಲಕ ಐದು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿರುವ ಕನ್ನಡದ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಚಿತ್ರದ ಹೆಸರು “ವಿಲನ್’. ಈ ಚಿತ್ರದಲ್ಲಿ ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ನಟಿಸುತ್ತಿರುವುದು ವಿಶೇಷ. “ವಿಲನ್’ ಚಿತ್ರವು ಈಗಾಗಲೇ ಶುರುವಾಗಿದೆ. ತಿರುವನಂತಪುರದಲ್ಲಿ ಮೊನ್ನೆ ಮಾರ್ಚ್ ಮೂರರಂದು ಚಿತ್ರ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಅವರು ರಿಟೈರ್ಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಅವರ ಜೊತೆಗೆ ತಮಿಳು ನಟ ವಿಶಾಲ್ ಸಹ ನಟಿಸುತ್ತಿದ್ದಾರಂತೆ. ಜೊತೆಗೆ ಮಂಜು ವಾರಿಯರ್, ಹಂಸಿಕಾ ಮೋಟ್ವಾನಿ, ರಾಶಿ ಖನ್ನಾ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದು ಉನ್ನಿಕೃಷ್ಣನ್. ಚಿತ್ರಕ್ಕೆ ಫೋರ್ ಮ್ಯೂಸಿಕ್ಸ್ ಅವರು ಸಂಗೀತ ಸಂಯೋಜಿಸುತ್ತಿದ್ದು, ಮನೋಜ್ ಪರಮಹಂಸ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.