ಮಣಿಪಾಲ ಎಸ್ಸಿಐಒ ಫೌಂಡೇಶನ್: ವೈದ್ಯಕೀಯ ಶಿಬಿರ
Team Udayavani, Mar 11, 2017, 12:41 PM IST
ಉಡುಪಿ: ಮಣಿಪಾಲ ಎಂಐಟಿಯ ಸಾಂಸ್ಕೃತಿಕ ಉತ್ಸವ ರೆವೆಲ್ಸ್17 ಸಹಯೋಗದಲ್ಲಿ ಎಸ್ಸಿಐಒ ಫೌಂಡೇಶನ್ ಮಣಿಪಾಲದ ವತಿಯಿಂದ 6ನೇ ವೈದ್ಯಕೀಯ ಶಿಬಿರವು ನ್ಯೂ ಲೆಕ್ಚರ್ ಹಾಲ್ನಲ್ಲಿ ಆಯೋಜನೆಗೊಂಡಿತು. ಮಣಿಪಾಲ ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು, ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ, ಎಂಐಟಿ ಸ್ಟೂಡೆಂಟ್ ವೆಲ್ಫ್ರ್ ಅಸೋಸಿಯೇಟ್ ಡೈರೆಕ್ಟರ್ ನಾರಾಯಣ ಶೆಣೈ, ಬಾಲಕೃಷ್ಣ ಮಧ್ದೋಡಿ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಮ್ಯೂನಿಟಿ ಮೆಡಿಸಿನ್ ವಿಭಾಗ, ಆಪ್ಟೊಮೆಟ್ರಿ ವಿಭಾಗ, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಆಕ್ಯುಪೇಶನಲ್ ಥೆರಪಿ ವಿಭಾಗ, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಡಯಾಬಿಟಿಕ್ ಫೂಟ್ ಕ್ಲಿನಿಕ್ ಸಹಕಾರದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ಇಸಿಜಿ, ಹೈಪರ್ಟೆನ್ಶನ್ ಸ್ಕ್ರೀನಿಂಗ್, ಮೂಳೆಸಾಂದ್ರತೆ, ರಕ್ತದಲ್ಲಿ ಸಕ್ಕರೆ ಅಂಶ, ಕಣ್ಣಿನ ಪರೀಕ್ಷೆ ಮೊದಲಾದ ಪರೀಕ್ಷೆಗಳನ್ನು ನಡೆಸಲಾಯಿತು. 130ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.