ಶಾಸಕ ಅಜಯಸಿಂಗ್ ನಗರ ಸಂಚಾರ
Team Udayavani, Mar 11, 2017, 3:09 PM IST
ಜೇವರ್ಗಿ: ಪಟ್ಟಣದ ಓಂ ನಗರ, ಜೇವರ್ಗಿ.ಕೆ, ವಾರ್ಡ್ ನಂ.10 ಸೇರಿದಂತೆ ಕೆಲವು ವಾರ್ಡ್ಗಳಲ್ಲಿ ಶಾಸಕ ಡಾ| ಅಜಯಸಿಂಗ್ ಪುರಸಭೆ ಅಧಿಕಾರಿಗಳೊಂದಿಗೆ ನಗರ ಸಂಚಾರ ಕೈಗೊಂಡರು. ಪಟ್ಟಣದ ಕೆಲವು ವಾರ್ಡ್ಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದರು.
ನಂತರ ಪುರಸಭೆಯ ವಿವಿಧ ಯೋಜನೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್, ನಗರೊತ್ಥಾನ ಯೋಜನೆ ಹಂತ-3ರಲ್ಲಿ 5 ಕೋಟಿ ರೂ., ಎಸ್ಸಿಪಿ/ಟಿಎಸ್ಪಿ ಯೋಜನೆಯಲ್ಲಿ 5 ಕೋಟಿ ರೂ., 14ನೇ ಹಣಕಾಸು ಯೋಜನೆಯಲ್ಲಿ 1.24 ಕೋಟಿ, ಎಸ್ಎಫ್ಸಿ ಯೋಜನೆಯಡಿ 1.52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ದೀಪಗಳ ವ್ಯವಸ್ಥೆ, ಚರಂಡಿ, ಪಾದಚಾರಿ ಮಾರ್ಗ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಧಿಕಾರಿಗಳು ಎಚ್ಚರವಹಿಸಬೇಕು. ಪರಿಶಿಷ್ಟ ಕಾಲೋನಿಗಳಲ್ಲಿ ಎಸ್ಸಿಪಿ/ಟಿಎಸ್ಪಿಯ ಶೇ.40 ರಷ್ಟು ಅನುದಾನವನ್ನು ಬಳಕೆ ಮಾಡಬೇಕು. ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಮತ್ತು ನಿಗದಿತ ಕಾಲಮಿತಿಯಲ್ಲಿ ಮಾಡಬೇಕು ಎಂದು ಹೇಳಿದರು.
ಕಳೆದ ನಾಲ್ಕು ವರ್ಷದಲ್ಲಿ ಪುರಸಭೆಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಅಭಿವೃದ್ಧಿ ಮಾಡುವುದರ ಜೊತೆಗೆ ಸೌಂದಯಿìಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಪುಟ್ಪಾತ್ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಟೌನ್ ಹಾಲ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಶೀಘ್ರದಲ್ಲೇ ಶಾಪಿಂಗ್ ಮಹಲ್, ತರಕಾರಿ ಮಾರುಕಟ್ಟೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಪುರಸಭೆ ಮುಖ್ಯಾಧಿಧಿಕಾರಿ ಬಸವರಾಜ ಶಿವಪೂಜೆ, ನಗರೋತ್ಥಾನ, ಎಸ್ಸಿಪಿ-ಎಸ್ಟಿಪಿ, 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿಕುಡಿಯುವ ನೀರಿಗಾಗಿ 4 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 1.26 ಕೋಟಿ ರೂ. ಸೇರಿದಂತೆ ಕಾಮಗಾರಿಗಳಿಗೆ ಹಂಚಿಕೆಯಾದ ಅನುದಾನದ ಮಾಹಿತಿ ನೀಡಿದರು.
ಪುರಸಭೆಯ ಕಿರಿಯ ಇಂಜಿನೀಯರ್ ನಾನಾಸಾಹೇಬ ಕೋಳಕೂರ, ಮುಖಂಡರಾದ ರಾಜಶೇಖರ ಸೀರಿ, ಶರಣು ಗುತ್ತೇದಾರ, ನೀಲಕಂಠ ಅವಂಟಿ, ರಹೆಮಾನ ಪಟೇಲ, ರವಿ ಕೋಳಕೂರ, ಸಲಿಂ ಕಣ್ಣಿ, ಪುರಸಭೆ ಸದಸ್ಯರಾದ ಮಹಿಬೂಬ ಚನ್ನೂರ, ಬಸವರಾಜ ಪೂಜಾರಿ, ಮರೆಪ್ಪ ಸರಡಗಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.