ಯೋಗ ಕಲಿತು ಆರೋಗ್ಯವಾಗಿರಿ
Team Udayavani, Mar 12, 2017, 1:09 PM IST
ಧಾರವಾಡ: ಯೋಗವು ದೇಹ ಹಾಗೂ ಮನಸ್ಸನ್ನು ಪರಿಶುದ್ಧವಾಗಿಡುವ ಸಾಧನವಾಗಿದ್ದು, ಎಲ್ಲರೂ ಯೋಗ ಮಾಡಿ ಆರೋಗ್ಯ ಸುಧಾರಿಸಿ ಕೊಳ್ಳಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪತಂಜಲಿ ಯೋಗ ಸಮಿತಿ ವತಿಯಿಂದ ಇಲ್ಲಿನ ತಪೋವನದಲ್ಲಿ ಹಮ್ಮಿಕೊಂಡಿದ್ದ ಯೋಗಮಯ ಕರ್ನಾಟಕ ಅಭಿಯಾನದ ಸತ್ಸಂಗ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಆರೋಗ್ಯ ಮಾನವನ ನಿಜವಾದ ಸಂಪತ್ತು. ಅದನ್ನು ಯಾರು ಹಾಳು ಮಾಡಿಕೊಳ್ಳಬಾರದು.
ಆರೋಗ್ಯವಂತರಿಂದ ಮಾತ್ರ ಸದೃಢ ಸಮಾಜ ಹಾಗೂ ದೇಶ ನಿರ್ಮಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು.ಯೋಗ ಇಂದು ಅಪಾರ ಜನಪ್ರಿಯತೆ ಪಡೆದು ಭಾರತದ ಗಡಿ ದಾಟಿ, ವಿಶ್ವ ಮನ್ನಣೆ ಪಡೆದಿರುವುದಕ್ಕೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು ಎಂದರು.
ಯೋಗ ಭಾರತದ ಪ್ರಾಚೀನ ಕಲೆಗಳಲ್ಲಿ ಒಂದು. ಈ ಕಲೆಯನ್ನು ಭಾರತಿಯರಲ್ಲಿ ಜೀವಂತವಾಗಿಡುವ ಪ್ರಯತ್ನ ಮಾಡಿದವರಲ್ಲಿ ರಾಮದೇವ ಅವರ ಪಾತ್ರ ತುಂಬಾ ದೊಡ್ಡದು. ಪತಂಜಲಿ ಉತ್ಪನ್ನಗಳು ನೈರ್ಸಗಿಕ ವಸ್ತುಗಳಿಂದ ಸಿದ್ದಗೊಂಡಿವೆ ಎಂದರು.
ಪತಂಜಲಿ ಯೋಗ ಸಮಿತಿ ರಾಜ್ಯ ಸಂಚಾಲಕ ಭವರಲಾಲ್ ಆರ್ಯ ಮಾತನಾಡಿ, ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಯೋಗದ ಕುರಿತು ತಿಳಿವಳಿಕೆ ಮೂಡಿಸಲುಯೋಗಮಯ ಕರ್ನಾಟಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಪ್ರತಿ ಹೋಬಳಿ ಮಟ್ಟದಲ್ಲೂ ಯೋಗ ಕೇಂದ್ರ ತೆರೆದು ಸಾರ್ವಜನಿಕರಿಗೆ ಅರಿವುನೀಡಲಾಗುವುದು ಎಂದರು.
ಯೋಗದಲ್ಲಿ ಕೇವಲ ನಾಲ್ಕೈದು ಆಸನಗಳನ್ನು ಕಲಿತು ಕೆಲವರು ಯೋಗ ಗುರು ಎಂದು ಹೇಳಿ ಜನರನ್ನು ಯಾಮಾರಿಸಲು ಹೊರಟಿದ್ದಾರೆ.ಯೋಗ ಗುರು ಎನ್ನುವ ಬಿರುದು ಪಡೆಯುವುದು ಸುಲಭವಲ್ಲ. ಭಾರತದಲ್ಲಿ ಯೋಗ ದಿನೇ ದಿನೇ ಜನಪ್ರಿಯತೆ ಪಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸುಮಾರು7,500 ಜನ ಶಿಕ್ಷಕರು ಯೋಗ ತರಬೇತಿ ನೀಡಲಿದ್ದಾರೆ ಎಂದರು.
ಹಿರಿಯ ನ್ಯಾ| ಬಿ.ಡಿ.ಹಿರೇಮಠ ಉಪಸ್ಥಿತರಿದ್ದರು. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಪತಂಜಲಿ ಉತ್ಪನ್ನಗಳ ಕುರಿತಾದ ಪುಸ್ತಕವನ್ನು ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ರಾಮಕೃಷ್ಣ ಮಿಷನ್‌ನ ಶ್ರೀಗಳು, ಮಲ್ಲಯ್ಯಪ್ಪ ಸ್ವಾಮೀಜಿ, ಹಿರಿಯನ್ಯಾಯವಾದಿ ಬಿ.ಡಿ.ಹಿರೇಮಠ ಅನೇಕರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.