ಕರ್ಣ ಕೈಯಲ್ಲಿ ಬಾಲ್ಕನಿ ಟಿಕೆಟ್
Team Udayavani, Mar 13, 2017, 11:22 AM IST
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಕರ್ಣ ಎಂಬ ಹೊಸ ಪ್ರತಿಭೆಯೂ ಒಂದು. ಯಾರು ಈ ಕರ್ಣ ಎಂಬ ಪ್ರಶ್ನೆಗೆ ಉತ್ತರ “ಸೆಕೆಂಡು ಬಕೆಟು ಬಾಲ್ಕನಿ’ ಚಿತ್ರ ಎನ್ನಬೇಕು. ಈ ಚಿತ್ರದ ಮೂಲಕ ಕರ್ಣ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಅಂದಹಾಗೆ, ಯಾರು ಈ ಕರ್ಣ ಎಂಬ ಇನ್ನೊಂದು ಪ್ರಶ್ನೆಯೂ ಬರಬಹುದು. ಕರ್ಣ, ರಂಗಭೂಮಿ ಹಿನ್ನೆಲೆ ಇರುವ ಕುಟುಂಬದ ಹುಡುಗ.
ಇವರ ತಾಯಿ ಆಶಾರಾಣಿ ಮೂಲತಃ ರಂಗಭೂಮಿ ನಟಿ, ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಂದೆ ನಾಗೇಶ್ ಇವರಿಗೂ ಹಲವು ವರ್ಷಗಳ ರಂಗಭೂಮಿಯ ನಂಟು. ಇನ್ನು ಸಹೋದರ ರಾಕೇಶ್ ಕೂಡ ಬಾಲನಟನಾಗಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾನೆ. ಕರ್ಣ ಕೂಡ “ಸಿದ್ಲಿಂಗು’ ಹಾಗೂ “ಚಾರ್ಮಿನಾರ್’ ಚಿತ್ರದಲ್ಲಿ ನಟಿಸಿದವರು. ಈಗ “ಸೆಕೆಂಡು ಬಕೆಟು ಬಾಲ್ಕನಿ’ ಚಿತ್ರಕ್ಕೆ ಹೀರೋ ಆಗಿದ್ದಾರೆ.
ಕರ್ಣ ಅವರ ಮೂಲ ಹೆಸರು ಚಂದನ್ ರಾಜ್. ಸಿನಿಮಾಗಾಗಿಯೇ ನಿರ್ದೇಶಕ ಅರಸು ಅಂತಾರೆ, ಕರ್ಣ ಎಂದು ಮರು ನಾಮಕರಣ ಮಾಡಿದ್ದಾರೆ. ಕರ್ಣಗೆ ಆಚಾನಕ್ ಆಗಿ ಹೀರೋ ಅವಕಾಶ ಸಿಕ್ಕಿದೆ. ಹಲವು ನಾಟಕ ಪ್ರಯೋಗ ಮಾಡುತ್ತಿದ್ದ ಕರ್ಣ ಅವರ ಕೆಲ ನಾಟಕಗಳನ್ನು ನೋಡಿದ್ದ ನಿರ್ದೇಶಕ ಅರಸು ಅಂತಾರೆ, ಆಗಲೇ ಅವರ ಪ್ರತಿಭೆಯನ್ನು ಗುರುತಿಸಿದ್ದರು. “ಸೆಕೆಂಡು ಬಕೆಟು ಬಾಲ್ಕನಿ’ ಚಿತ್ರಕ್ಕೆ ನಾಯಕರ ಹುಡುಕಾಟ ನಡೆಸುವಾಗ, ಅರಸು ಅಂದುಕೊಂಡ ಪಾತ್ರಕ್ಕೆ ಕರ್ಣ ಸೂಕ್ತವೆನಿಸಿ, ಅವರಿಗೊಂದು ಆಡಿಷನ್ ಮಾಡಿಸಿದ್ದಾರೆ.
ಈ ಮೂಲಕ ಕರ್ಣನ ಆಯ್ಕೆಯಾಗಿದೆ. ಕರ್ಣಗೆ ನಟನೆ ಕಷ್ಟವಾಗಿಲ್ಲ. ಯಾಕೆಂದರೆ, ರಂಗಭೂಮಿಯಲ್ಲೇ ಹಲವು ನಾಟಕ ಮಾಡಿಕೊಂಡಿದ್ದವರು. ಈಗ ಒಂದಷ್ಟು ಸಿನಿಮಾಗಾಗಿ ಡ್ಯಾನ್ಸ್, ಫೈಟ್ ಕಲಿತುಕೊಂಡಿದ್ದಾರೆ. ನಟನೆಗೇ ಅಂತ ಎಲ್ಲೂ ಹೋಗಿಲ್ಲ. ಮೊದಲ ಸಿನಿಮಾ ಆಗಿರುವುದರಿಂದ ಒಳ್ಳೆಯ ಅವಕಾಶ ಸಿಕ್ಕ ಕಾರಣ, ಪ್ರಾಮಾಣಿಕವಾಗಿಯೇ ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ ಕರ್ಣ.
“ಒಳ್ಳೆಯ ಪಾತ್ರ, ಕಥೆ ಚಿತ್ರದಲ್ಲಿದೆ. ನಾನು ಹೀರೋ ಆಗೋಕೆ ಅದು ಸೂಕ್ತ ಸಿನಿಮಾ’ ಎನ್ನುವ ಕರ್ಣ, ನನಗೆ ಅರಸು ಅಂತಾರೆ ಅವರೇ ಸ್ಟ್ರೆಂಥ್. ಹಂಡ್ರೆಡ್ ಪರ್ಸೆಂಟ್ ನನ್ನ ಶ್ರಮ ಹಾಕ್ತೀನಿ. ನಿಷ್ಠೆಯಿಂದ ಕೆಲಸ ಮಾಡಿ ತೋರಿಸ್ತೀನಿ’ ಎನ್ನುವ ಕರ್ಣನಿಗೆ ಮೊದಲು ತಾನೊಬ್ಬ ಕ್ರಿಕೆಟ್ ಪ್ಲೇಯರ್ ಆಗಬೇಕು ಎಂಬ ಬಹುದೊಡ್ಡ ಕನಸಿತ್ತು. ಆದರೆ, ಅದು ಸಾಧ್ಯವಾಗದ ಕಾರಣ, ಪುನಃ, ರಂಗಭೂಮಿಯತ್ತ ಯೂಟರ್ನ್ ಮಾಡಿ, ಕುಟುಂಬದವರ ಸಲಹೆ, ಸೂಚನೆಯಂತೆ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.
ನಿರ್ದೇಶಕರು ಅದೇ ವೇಳೆಗೆ ಈ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಈಗ ಸಿನಿಮಾ ಹೊರತಾಗಿ ಬೇರೇನೂ ಯೋಚನೆ ಇಲ್ಲ. ಎನ್ನುವ ಕರ್ಣ, ಇದಕ್ಕೂ ಮುನ್ನ ಯಾವ ಚಿತ್ರಕ್ಕೂ ಪ್ರಯತ್ನಿಸಿರಲಿಲ್ಲವಂತೆ. “ಸೆಕೆಂಡು ಬಕೆಟು ಬಾಲ್ಕನಿ’ ಅಚಾನಕ್ ಆಗಿ ಸಿಕ್ಕಿದೆ. ಅವರ ವಯಸ್ಸಿಗೆ ತಕ್ಕ ಕಥೆ,ಪಾತ್ರ ಸಿಕ್ಕಿದ್ದಕ್ಕೆ ಎಂಬ ಖುಷಿ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.