ಅಂತಿಮ ದಿನದಾಟ ವಾಶೌಟ್: ಟೆಸ್ಟ್ ಡ್ರಾ
Team Udayavani, Mar 13, 2017, 11:32 AM IST
ಡ್ಯುನೆಡಿನ್: ಭಾರೀ ಮಳೆಯಿಂದ ಅಂತಿಮ ದಿನದಾಟ ಒಂದೂ ಎಸೆತ ಕಾಣದೆ ರದ್ದು ಗೊಳ್ಳುವುದರೊಂದಿಗೆ ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ ನಡುವಿನ ಡ್ಯುನೆಡಿನ್ ಟೆಸ್ಟ್ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ.
ಕೈಯಲ್ಲಿನ್ನೂ 4 ವಿಕೆಟ್ ಉಳಿಸಿಕೊಂಡು 191 ರನ್ ಮುನ್ನಡೆಯೊಂದಿಗೆ ದಕ್ಷಿಣ ಆಫ್ರಿಕಾ 4ನೇ ದಿನದಾಟ ಮುಗಿಸಿತ್ತು. ಹೀಗಾಗಿ ರವಿವಾರದ ಆಟ ಅತ್ಯಂತ ಕುತೂಹಲ ಹುಟ್ಟಿಸಿತ್ತು. ಆದರೆ ಬೆಳಗ್ಗಿನಿಂದಲೇ ಸುರಿಯ ತೊಡಗಿದ ಮಳೆ ಈ ಕುತೂಹಲವನ್ನೆಲ್ಲ ನೀರುಪಾಲು ಮಾಡಿತು.ಸರಣಿಯ ದ್ವಿತೀಯ ಟೆಸ್ಟ್ ಮಾ. 16ರಿಂದ ಹ್ಯಾಮಿ ಲ್ಟನ್‌ನಲ್ಲಿ ಆರಂಭವಾಗಲಿದೆ.
ಟಯ್ಲರ್ ಬದಲು ಬ್ರೂಮ್
ನ್ಯೂಜಿಲ್ಯಾಂಡಿನ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟಯ್ಲರ್ ಕಾಲು ನೋವಿನಿಂದಾಗಿ ದ್ವಿತೀಯ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಸ್ಥಾನಕ್ಕೆ ಬಲಗೈ ಬ್ಯಾಟ್ಸ್‌ಮನ್ ನೀಲ್ ಬ್ರೂಮ್ ಅವರನ್ನು ಕರೆಸಿಕೊಳ್ಳಲಾಗಿದೆ.
33ರ ಹರೆಯದ ಬ್ರೂಮ್ ಈವರೆಗೆ ಟೆಸ್ಟ್ ಆಡಿಲ್ಲ. ಆದರೆ 30 ಏಕದಿನ ಹಾಗೂ 11 ಟಿ-20 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲೂ ಅವರು ಭಾರೀ ಸಮಯದ ಬಳಿಕ “ದ್ವಿತೀಯ ಇನ್ನಿಂಗ್ಸ್’ ಆಡಲಿಳಿದಿರುವುದು ಉಲ್ಲೇಖನೀಯ. 2010ರ ಬಳಿಕ ಅವರು ಏಕದಿನಕ್ಕೆ ಮರಳಿದ್ದು ಕಳೆದ ವರ್ಷ. ಈ ಅವಧಿಯಲ್ಲೇ ಬ್ರೂಮ್ ತಮ್ಮ ಮೊದಲ ಹಾಗೂ ಏಕೈಕ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದರು.
ಹ್ಯಾಮಿಲ್ಟನ್‌ನಲ್ಲಿ ನೀಲ್ ಬ್ರೂಮ್ ಟೆಸ್ಟ್ ಪಾದಾರ್ಪಣೆ ಮಾಡಲಿದ್ದಾರೆಂದು ನಾಯಕ ಕೇನ್ ವಿಲಿಯಮ್ಸನ್ ಮತ್ತು ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ಶನಿವಾರ ಕಾಲು ನೋವಿನಿಂದಾಗಿ ಮೈದಾನ ತೊರೆದಿದ್ದ ವೇಗಿ ಟ್ರೆಂಟ್ ಬೌಲ್ಟ್ ತಂಡದಲ್ಲಿ ಮುಂದುವರಿದಿದ್ದಾರೆ. ಅವರೀಗ ಚೇತರಿಕೆ ಕಾಣುತ್ತಿದ್ದಾರೆ ಎಂದು ಹೆಸ್ಸನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
ODI; ವಿಜಯ್ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು
Asian Weightlifting: ಜೋಶ್ನಾ ನೂತನ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.