ಬ್ಯಾಡ್ಮಿಂಟನ್‌: ಚಾಂಪಿಯನ್‌ ಲಿನ್‌ ಡಾನ್‌ ಪತನ

Team Udayavani, Mar 13, 2017, 11:42 AM IST

Lin-Dan.jpg

ಬರ್ಮಿಂಗಂ: ಆರು ಬಾರಿಯ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ವಿಜೇತ, ಕಳೆದ ವರ್ಷದ ಚಾಂಪಿಯನ್‌ ಚೀನದ ಲಿನ್‌ ಡಾನ್‌ ಸೆಮಿಫೈನಲ್‌ ಸೋಲಿನೊಂದಿಗೆ ತಮ್ಮ ಹೋರಾಟ ಮುಗಿಸಿದ್ದಾರೆ. ಅವರಿಗೆ ಚೀನದ ಶ್ರೇಯಾಂಕ ರಹಿತ ಆಟಗಾರ ಶಿ ಯುಕಿ ಕಂಟಕವಾಗಿ ಪರಿಣಮಿಸಿದರು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಶಿ ಯುಕಿ 24-22, 21-10 ಅಂತರದಿಂದ ಲಿನ್‌ ಡಾನ್‌ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಸೀನಿಯರ್‌ ಆಟಗಾರರಿಬ್ಬರ ನಡುವಿನ ಫೈನಲ್‌ ಅವಕಾಶ ತಪ್ಪಿಹೋಯಿತು. 34ರ ಹರೆಯದ ವಿಶ್ವದ ನಂ.1 ಆಟಗಾರ, ಮಲೇಶ್ಯದ ಲೀ ಚಾಂಗ್‌ ವೀ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇವರನ್ನು 33ರ ಹರೆಯದ ಲಿನ್‌ ಡಾನ್‌ ಎದುರಿಸುವರೆಂಬ ನಿರೀಕ್ಷೆ ಬಲವಾಗಿತ್ತು. ಆದರೆ 21ರ ಹರೆಯದ ಶಿ ಯುಕಿ ಈ ಸಾಧ್ಯತೆಯನ್ನು ತಪ್ಪಿಸಿದರು.

ಶಿ ಯುಕಿ ಈವರೆಗೆ ಜೂನಿಯರ್‌ ಹಂತದಲ್ಲಿ ಗಮನಾರ್ಹ ಸಾಧನೆಗೈದರೂ ಸೀನಿಯರ್‌ ವಿಭಾಗದಲ್ಲಿ ಮೆರೆದದ್ದು ಇದೇ ಮೊದಲು. 2014ರ ಯುತ್‌ ಒಲಿಂಪಿಕ್‌ ಗೇಮ್ಸ್‌, ಅದೇ ವರ್ಷ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ ಹಾಗೂ 3 ಸಲ ಏಶ್ಯ ಜೂನಿಯರ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಶಿ ಯುಕಿ ಅವರದು. ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಯುಕಿ ಹೊಸ ಇತಿಹಾಸ ಬರೆಯಬಹುದೇ ಎಂಬುದೊಂದು ಕುತೂಹಲ.

2011ರಿಂದ ಮೊದಲ್ಗೊಂಡು ಸತತ 4 ಬಾರಿ ಚಾಂಪಿಯನ್‌ ಆಗಿ ಮೂಡಿಬಂದ ಲೀ ಚಾಂಗ್‌ ವೀ ಅವರಿಗೂ ಸೆಮಿಫೈನಲ್‌ ಗೆಲುವು ಕಠಿನವಾಗಿತ್ತು. ಥೈವಾನ್‌ನ ಚಿಯು ಟೀನ್‌ ಚೆನ್‌ ವಿರುದ್ಧ ಮೊದಲ ಗೇಮ್‌ ಕಳೆದುಕೊಂಡ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದರು. ಅಂತರ 10-21, 21-14, 21-9. ಇದು ವೀ ಕಾಣುತ್ತಿರುವ 7ನೇ ಫೈನಲ್‌.

“ನನ್ನ ದೇಹಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ಈ ವಯಸ್ಸಿನಲ್ಲಿ ಎಂಥ ಪ್ರದರ್ಶನ ನೀಡಬೇಕೋ ಅದನ್ನು ಪ್ರದರ್ಶಿಸಿದ ತೃಪ್ತಿ ಇದೆ…’ ಎಂದು ಲಿನ್‌ ಡಾನ್‌ ಹೇಳಿದ್ದಾರೆ. ಸೆಮಿಫೈನಲ್‌ನಲ್ಲೂ ಡಾನ್‌ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ 3 ಗೇಮ್‌ಗಳ ಕಾದಾಟ ನಡೆಸಿ ಗೆಲುವು ಸಂಪಾದಿಸಿದ್ದರು.

ತೈವಾನಿಯರ ಫೈನಲ್‌: ವನಿತಾ ಸಿಂಗಲ್ಸ್‌ ಫೈನಲ್‌ ತೈವಾನಿನ ಇಬ್ಬರು ಅಗ್ರ ಆಟಗಾರ್ತಿಯರಾದ ತೈ ಜು ಯಿಂಗ್‌ ಮತ್ತು ರಚನೋಕ್‌ ಇಂತಾನನ್‌ ನಡುವೆ ನಡೆಯಲಿದೆ.ಸೆಮಿಫೈನಲ್‌ನಲ್ಲಿ ರಚನೋಕ್‌ ಇಂತಾನನ್‌ ಜಪಾನಿನ ಅಕಾನೆ ಯಮಗುಚಿ ಅವರನ್ನು 22-20, 21-16ರಿಂದ; ತೈ ಜು ಯಿಂಗ್‌ ಕೊರಿಯಾದ ಸುಂಗ್‌ ಜಿ-ಹ್ಯುನ್‌ ಅವರನ್ನು 11-21, 21-14, 21-14 ಅಂತರದಿಂದ ಪರಾಭವಗೊಳಿಸಿದರು.

ಟಾಪ್ ನ್ಯೂಸ್

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewewe

ODI; ವಿಜಯ್‌ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.