ದೇಶಿ ಕ್ರಿಕೆಟ್‌ನಲ್ಲಿ ಒಂದೇ ದಿನ ಅಪ್ಪ-ಮಗನ ಅರ್ಧ ಶತಕ
Team Udayavani, Mar 13, 2017, 12:00 PM IST
ಕಿಂಗ್‌ಸ್ಟನ್ (ಜಮೈಕಾ): ಇಲ್ಲಿನ “ಸಬೀನಾ ಪಾರ್ಕ್ ಕ್ರೀಡಾಂಗಣ’ದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸಿದ 4 ದಿನದ ವೃತ್ತಿಪರ ದೇಶಿ ಕ್ರಿಕೆಟ್ ಲೀಗ್‌ನಲ್ಲಿ ಒಂದೇ ದಿನ ಅಪ್ಪ-ಮಗ ಇಬ್ಬರೂ ಅರ್ಧ ಶತಕ ದಾಖಲಿಸಿದ ಅಪರೂಪದ ಘಟನೆ ನಡೆದಿದೆ. ಅದೇ ಒಂದೇ ತಂಡದ ಪರವಾಗಿ ಎನ್ನುವುದು ಇನ್ನೂ ವಿಶೇಷ!
ಹೌದು, ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ತಂಡದ ಆಧಾರಸ್ತಂಭವಾಗಿದ್ದ, ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ವಿಂಡೀಸ್ ಮಾಜಿ ಕ್ರಿಕೆಟಿಗ ಶಿವನಾರಾಯಣ್ ಚಂದರ್‌ಪಾಲ್ ಇಂದು ತನ್ನ ಪುತ್ರನ ಜತೆಗೆ ಆಡುತ್ತ ಬ್ಯಾಟಿಂಗ್ ಸಂಭ್ರಮವನ್ನು ಆಚರಿಸಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದ ಪುತ್ರ ತೇಜ್‌ನಾರಾಯಣ್ ಚಂದರ್‌ಪಾಲ್ 58 ರನ್ ಗಳಿಸಿ ತಂದೆಗೆ ತಕ್ಕ ಮಗ ಎನಿಸಿಕೊಂಡರು. ಅನಂತರ ಬ್ಯಾಟಿಂಗ್‌ಗೆ ಇಳಿದ ಅಪ್ಪ ಕೂಡ ಅರ್ಧ ಶತಕ ಬಾರಿಸಿದರು (57). ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ನೋಡುಗರ ಕಣ್ಮನ ಸೆಳೆಯಿತು.
ಅಪ್ಪ-ಮಗನ ಅಪರೂಪದ ಆಟ
ಇದು 4 ದಿನಗಳ ದೇಶಿ ಪಂದ್ಯ. ಇಲ್ಲಿ ಜಮೈಕಾ-ಗಯಾನಾ ತಂಡಗಳು ಪರಸ್ಪರ ಮುಖಾಮುಖೀಯಾಗಿದ್ದವು. ಶಿವ ನಾರಾಯಣ್ ಮತ್ತು ತೇಜ್‌ನಾರಾಯಣ್ ಗಯಾನ ತಂಡ ಪ್ರತಿನಿಧಿಸಿದ್ದರು. ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ಜಮೈಕಾ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿ ಆಲೌಟಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಗಯಾನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ತೇಜ್‌ನಾರಾಯಣ್ ಅರ್ಧ ಶತಕ ಗಳಿಸಿ ನೆರವಾದರು. 4ನೇ ವಿಕೆಟಿಗೆ ಬಂದ ಶಿವನಾರಾಯಣ್ ಚಂದರ್‌ಪಾಲ್ ಅರ್ಧ ಶತಕ ಗಳಿಸಿ ಮಗನಿಗಿಂತ ಒಂದು ರನ್ ಕಡಿಮೆ ಮಾಡಿ ಔಟಾದರು.
ಅಪ್ಪನಿಗೆ 42, ಮಗನಿಗೆ 20 ವರ್ಷ!
ಶಿವನಾರಾಯಣ್ ಚಂದರ್‌ಪಾಲ್‌ಗೆ ಈಗ 42 ವರ್ಷ. ಮಗ ತೇಜ್‌ನಾರಾಯಣ್‌ಗೆ 20 ವರ್ಷ. ಇವರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 22 ವರ್ಷ! ತೇಜ್‌ನಾರಾಯಣ್ ಇದುವರೆಗೆ 15 ಪ್ರಥ‚ಮ ದರ್ಜೆ, 4 ಲಿಸ್ಟ್ “ಎ’ ಪಂದ್ಯಗಳನ್ನು ಆಡಿದ್ದಾರೆ. 2 ಅರ್ಧ ಶತಕ ಒಳಗೊಂಡ 698 ರನ್ ಗಳಿಸಿದ್ದಾರೆ.
ಒಟ್ಟಾರೆ 21 ವರ್ಷ ಸುದೀರ್ಘವಾಗಿ ವಿಂಡೀಸ್ ತಂಡ ವನ್ನು ಶಿವನಾರಾಯಣ್ ಚಂದರ್‌ಪಾಲ್ ಪ್ರತಿನಿಧಿಸಿದ್ದರು. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸ್ವಾರಸ್ಯವೆಂದರೆ, ಮಗನ ವಯಸ್ಸು ಶಿವನಾರಾಯಣ್ ಚಂದರ್‌ಪಾಲ್ ಅವರ ಒಟ್ಟಾರೆ ವೃತ್ತಿ ಜೀವನದಷ್ಟು ಆಗಿರುವುದು!
ಶಿವನಾರಾಯಣ್ ವಿಂಡೀಸ್ ಪರ 164 ಟೆಸ್ಟ್ ಆಡಿ ದ್ದಾರೆ. 30 ಶತಕ, 66 ಅರ್ಧ ಶತಕದೊಂದಿಗೆ ಒಟ್ಟು 11,867 ರನ್ ಗಳಿಸಿದ್ದಾರೆ. 268 ಏಕದಿನ ಪಂದ್ಯ ವನ್ನಾಡಿರುವ ಶಿವನಾರಾಯಣ್ 11 ಶತಕ, 59 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 22 ಟಿ-20 ಪಂದ್ಯಗಳಲ್ಲೂ ಬ್ಯಾಟ್ ಬೀಸಿರುವ ಅವರು ಒಟ್ಟಾರೆ 343 ರನ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.