ನಿಯಮದಂತೆ ಮನೆ ಕಟ್ಟಿ ಎಂದಿದ್ದಕ್ಕೆ ತಾಯಿ, ಮಗನ ಮೇಲೆ ಹಲ್ಲೆ


Team Udayavani, Mar 13, 2017, 12:07 PM IST

crimes.jpg

ಬೆಂಗಳೂರು/ಕೆ.ಆರ್‌ಪುರಂ: ಕೆ.ಆರ್‌.ಪುರಂನ ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಘವೇಂದ್ರ ಬಡಾವಣೆಯಲ್ಲಿ ಮನೆ ನಿರ್ಮಾಣ ವಿಚಾರದಲ್ಲಿ ನೆರೆ ಮನೆಯವರ ಮೇಲೆ ವ್ಯಕ್ತಿಯೊಬ್ಬರು ರೌಡಿಗಳ ಮೂಲಕ ಹಲ್ಲೆ ಮಾಡಿಸಿದ್ದಾರೆ. 

ಪಾಲಿಕೆ ನಿಯಮಗಳ ಪ್ರಕಾರ ಯಾವುದೇ ಆಸ್ತಿದಾರ ಮನೆ ನಿರ್ಮಿಸಬೇಕಾದರೆ ಸೆಟ್‌ಬ್ಯಾಕ್‌ ಜಾಗ ಎಂದು ಸುತ್ತಲೂ ಮೂರು ಅಡಿ ಬಿಟ್ಟು ಮನೆ ಕಟ್ಟಬೇಕು. ಪಾಲಿಕೆ ನಿಯಮಗಳ ಪ್ರಕಾರ ಮನೆ ನಿರ್ಮಿಸುಂತೆ ನೆರೆ ಮನೆಯವರು ಹೇಳಿದ ಕಾರಣಕ್ಕೆ ಆಕ್ರೋಶಗೊಂಡ ಪಕ್ಕದ ಆಸ್ತಿ ಮಾಲೀಕ ತಾಯಿ ಮಗನ ಮೇಲೆ ಹಲ್ಲೆ ಮಾಡಿಸಿದ್ದಾರೆ.

ಹಲ್ಲೆಯಿಂದ ರಾಘವೇಂದ್ರ ಬಡಾವಣೆಯ ರಾಜು ಮತ್ತು ಆತನ ತಾಯಿ ಲಕ್ಷ್ಮೀಬಾಯಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ದೇವಸ್ವಿ, ಜಾನ್‌ ಹಾಗೂ ಬಾಬು ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐಐಟಿಯ ನಿವೃತ್ತ ಉದ್ಯೋಗಿಯಾಗಿರುವ ದೇವಸ್ವಿ, ರಾಘವೇಂದ್ರ ಬಡವಾಣೆಯಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸೆಟ್‌ಬ್ಯಾಕ್‌ ಜಾಗ ಬಿಟ್ಟಿಲ್ಲ ಎಂದು ಆಕ್ಷೇಪ ತೆಗೆದ ಪಕ್ಕದ ಮನೆಯ ರಾಜು ಎಂಬುವರು, ಬಿಬಿಎಂಪಿ ನಿಯಮಾವಳಿಯಂತೆ ಓಡಾಡಲು ಮೂರು ಅಡಿ ಸೆಟ್‌ಬ್ಯಾಕ್‌ ಜಾಗ ಬಿಟ್ಟು ಕಾಮಗಾರಿ ನಡೆಸುವಂತೆ ಸೂಚಿಸಿದ್ದರು.

ಇದೇ ವಿಚಾರದಲ್ಲಿ ರಾಜು ಮತ್ತು ದೇವಸ್ವಿ ನಡುವೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಮಧ್ಯಪ್ರವೇಶಿಸಿ ರಾಜಿ ಸಂಧಾನ ಮಾಡಿದ್ದಾರೆ. ಈ ಮಧ್ಯೆ, ದೇವಸ್ವಿ ಅವರು ಮನೆ ನಿರ್ಮಾಣದ ವೇಳೆ ಸೆಟ್‌ಬ್ಯಾಕ್‌ ಜಾಗ ಬಿಡದೆ ನಿಯಮ ಉಲ್ಲಂ ಸಿದ್ದಾರೆ ಎಂದು ಆರೋಪಿಸಿ ರಾಜು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಸೆಟ್‌ಬ್ಯಾಕ್‌ ಜಾಗ ಬಿಟ್ಟು ಮನೆ ನಿರ್ಮಿಸುವಂತೆ ಪಾಲಿಕೆಯೂ ಸೂಚಿಸಿತ್ತು.  

ಈ ನಡುವೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆ ನಿರ್ಮಾಣ ಕಾಮಗ­ರಿಗಾಗಿ ದೇವಸ್ವಿ ಅವರು ಲಾರಿಯಲ್ಲಿ ಮರಳು ತರಿಸಿದ್ದರು. ಈ ವೇಳೆ ಮನೆ ಬಳಿ ಮರಳು ಲಾರಿ ಅಡ್ಡಗಟ್ಟಿದ ರಾಜು, ಮರಳು ಸುರಿಯದಂತೆ ಲಾರಿ ಚಾಲಕನನ್ನು ಬೆದರಿಸಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ದೇವಸ್ವಿ ಹಾಗೂ ಆತನ ಸಹಚರರಾದ ಜಾನ್‌, ಬಾಬು ಅವರು, ರಾಜುವನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಾಜು ಹಾಗೂ ದೇವಸ್ವಿ ಜತೆಗಿದ್ದವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಆಕ್ರೋಶ­ಗೊಂಡ ದೇವಸ್ವಿ ಮತ್ತಿತರರು ರಾಜು ಮನೆಯ ಕಾಂಪೌಂಡ್‌ ಹಾರಿ ಆತನನ್ನು ಹಿಗ್ಗಾಮುಗ್ಗಾ ಥಳಿ­ಸಿದ್ದಾರೆ. ಮಗನ ರಕ್ಷಣೆಗೆ ಬಂದ ತಾಯಿ  ಲಕ್ಷ್ಮೀ­ಬಾಯಿ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾ ವಾಳಿಗಳನ್ನು ರಾಜು ಪುತ್ರಿ ಮೊಬೈಲ್‌ನಲ್ಲಿ  ಸೆರೆಹಿಡಿ­ದ್ದರು. ಈ ಸಂಬಂಧ ದೇವಸ್ವಿ ಹಾಗೂ ಆತನ ಬೆಂಬ­ಲಿಗರ ವಿರುದ್ಧ ರಾಜು ಹಲ್ಲೆ ಪ್ರಕರಣ ದಾಖಲಿಸಿದ್ದರು. 

ಹಲ್ಲೆಗೊಳಗಾಗಿದ್ದ ರಾಜು ನೀಡಿದ್ದ ದೂರನ್ನು ಆಧರಿಸಿ ಮತ್ತು ಮೊಬೈಲ್‌ ದೃಶ್ಯಾವಳಿಗಳನ್ನು ವೀಕ್ಷಿಸಿದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ದೇವಸ್ವಿ ಅವರು ನಿಯಮ ಉಲ್ಲಂ ಸಿ ಮನೆ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಬಿಬಿಎಂಪಿ ಪರಿಶೀಲನೆ ನಡೆಸಿ ಕ್ರಮ  ಕೈಗೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.