ಸ್ಲೆಜಿಂಗ್ ಎಂದರೆ ಈಗ ಜಗಳ!
Team Udayavani, Mar 13, 2017, 12:08 PM IST
ಅಣಕವಾಡುವುದು ಎಂದು ಕರೆದರೆ ಆ ಪದದ ತೂಕಬರಲಾರದೇನೋ? ಅಪಹಾಸ್ಯ ಮಾಡುವುದು ಎಂದರೆ? ಇಲ್ಲ, ಈಗಲೂ ಆ ಅರ್ಥ ಬರಲಾರದು! ಹರಾಕಿರಿ ಎಂದರೆ? ಬಹುಶಃ ಅರ್ಥದ ಸಮೀಪ ಬರುತ್ತದೆ. ಹಾಗಾದರೆ ಆ ಪದಕ್ಕೆ ಸರಿಸಮಾನವಾಗಿ ಏನು ಹೇಳಬಹುದು? ಈ ಪದವಾದರೂ ಏನು?
ಸ್ಲೆಜಿಂಗ್!
ಕ್ರಿಕೆಟ್ ಜಗತ್ತಿನಲ್ಲಿ ಈ ತರಹದ್ದೊಂದು ಪರಂಪರೆ ಬೆಳೆದು ಬಂದಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸ್ಲೆಜಿಂಗ್ ಅದರ ಭಾಗ ವೇನೋ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಸ್ಲೆಜಿಂಗ್ ಹೊರತುಪಡಿಸಿದರೆ ಟೆಸ್ಟ್ ಕ್ರಿಕೆಟ್‌ನ ಸೌಂದರ್ಯವೇ ಕಳೆದುಹೋಗುವುದೇನೋ ಎಂಬಂತೆ ಅದರ ವ್ಯಾಖ್ಯಾನಗಳು ಬದ ಲಾಗಿವೆ. ಆದರೆ ಸ್ಲೆಜಿಂಗ್ ಎಂದಿನಂತೆ ಹಾಸ್ಯ ಮಾಡುವುದಕ್ಕೆ, ಅಣಕಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರ ಗಡಿಮೀರಿನಿಂದಿಸು ವುದಕ್ಕೆ, ಕೈ ಮಿಲಾಯಿಸುವ ಹಂತಕ್ಕೆ ಚಿಗುರಿ ಕೊಂಡಿದೆ. ಆದ್ದರಿಂದಲೇ ಇದಕ್ಕೊಂದು ಲಕ್ಷ್ಮಣರೇಖೆ ಎಳೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧರಿಸಿದೆ. ಇನ್ನೇನಾದರೂ ಆಟಗಾರ ವಿಪರೀತ ಅಶಿಸ್ತು ತೋರಿದರೆ ಮೈದಾನದಿಂದಲೇ ಹೊರ ಹೋಗಬೇಕಾಗು ತ್ತದೆ. ಕ್ರಿಕೆಟ್ ಮಟ್ಟಿಗೆ ಇದು ಕ್ರಾಂತಿಕಾರಕ ಬೆಳವಣಿಗೆ.
ಸ್ಲೆಜಿಂಗ್‌ಗೆ ಕಾರಣವೇನು ಗೊತ್ತಾ?
ಸ್ಲೆಜಿಂಗ್ ಶುರುವಾಗಿದ್ದು ಟೆಸ್ಟ್ ಕ್ರಿಕೆಟ್‌ಮೂಲಕ. ಸುದೀರ್ಘ 5 ದಿನಗಳ ಕಾಲ ಆಡುತ್ತಿದ್ದ ಎದುರಾಳಿ ತಂಡದ ಆಟ ಗಾರರು ಪರಸ್ಪರ ಕಾಲೆಳೆಯುವ ಮಟ್ಟಕ್ಕೆ ಆಪ್ತ ರಾಗಿರುತ್ತಿದ್ದರು. ಆಗ ಎದುರಾಳಿಯನ್ನು ಅಣಕಿಸುವ, ಹಾಸ್ಯ ಮಾಡುವ ಸ್ವಾತಂತ್ರ್ಯವನ್ನು ಆಟಗಾರರು ತೆಗೆದುಕೊಂಡರು. ದೀರ್ಘ ಕಾಲದ ಆಟದಲ್ಲಿ ಕ್ರಿಕೆಟಿಗರು ದಣಿದಾಗಲೂ ಇಂತಹ ಹಾಸ್ಯ ಮನೋಭಾವ ಪ್ರಕಟಗೊಳ್ಳ ತೊಡಗಿತು. ಎದುರಾಳಿಯನ್ನು ಹಣಿಯು ವುದಕ್ಕೆ ಸಾಧ್ಯವಾಗದೇ ಬೇಸತ್ತಾಗ ಕೆಣಕು ವುದು ಶುರುವಾಯಿತು. ಇಲ್ಲೇ ಅದು ಅಪಾಯ ಕಾರಿಯಾಗಿದ್ದು. ಪರಿಸ್ಥಿತಿ ತಮ್ಮ ಪರವಾಗಿರಲಿ, ವಿರುದ್ಧವಾಗಿರಲಿ ಬೌಲರ್ ಅಥವಾ ಬ್ಯಾಟ್ಸ್‌ಮನ್ ತಾಳ್ಮೆ ಕಳೆದುಕೊಳ್ಳುವಂತೆ ಮಾಡಲು ಉದ್ದೇಶಪೂರ್ವಕವಾಗಿ ಕೆಣಕಲು ಶುರುವಾಯಿತು.
ಕಡೆಗೆ ಸ್ಲೆಜಿಂಗ್ ಎಂದರೆ ಕೆಣಕುವುದು, ಜಗಳ ಕಾಯುವುದು ಎಂಬಲ್ಲಿಗೆ ಬಂದು ನಿಂತಿದೆ. ಈಗ ಕ್ರಿಕೆಟ್ ಜಗತ್ತಿನಲ್ಲಿ ಚಾಲ್ತಿ ಯಲ್ಲಿರುವುದು ಆರೋಗ್ಯಕರ ಅಣಕಕ್ಕಿಂತ ಕೆಣಕಿ ಜಗಳ ಮಾಡುವ ಪ್ರವೃತ್ತಿ. ಇದು ಐಸಿಸಿಯನ್ನು ಚಿಂತೆಗೆ ದೂಡಿದೆ. ಕ್ರಿಕೆಟ್ ಸಭ್ಯರ ಆಟ ಎಂಬ ಹಣಪಟ್ಟಿ ಉಳಿಸಿಕೊಳ್ಳಲು ಅದು ಹೆಣಗಾಡುವಂತಾಗಿದೆ.
2008ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಭಾರತ, ಆಸ್ಟ್ರೇಲಿಯಕ್ಕೆ ತೆರಳಿತ್ತು. 2ನೇ ಟೆಸ್ಟ್ ವೇಳೆ ಹರ್ಭಜನ್ ಸಿಂಗ್ ಮತ್ತು ಆಸೀಸ್‌ನ ಬ್ರೆಟ್ ಲೀ ನಡುವೆ ಏನೋ ಗಲಾಟೆಯಾಗಿತ್ತು. ಆಗ ಸೈಮಂಡ್ಸ್ ಮಧ್ಯಪ್ರವೇಶಿಸಿದ್ದಾರೆ. ಸಿಟ್ಟಿಗೆದ್ದ ಹರ್ಭಜನ್ ಸಿಂಗ್, ಉತ್ತರ ಭಾರತೀಯರು ಸಹಜವಾಗಿ ಬಳಸುವ ತೇರಿ ಮಾಕಿ ಎಂಬ ಪದ ಪ್ರಯೋಗ ಮಾಡಿದ್ದಾರೆ. ಇದನ್ನು ಸೈಮಂಡ್ಸ್ ಮಂಕಿ ಎಂದು ಭಾವಿಸಿ, ತಾನು ಕರಿಯನಾಗಿರುವುದರಿಂದ ಹೀಗೆ ಜನಾಂಗೀಯ ನಿಂದನೆ ಮಾಡಿದ್ದಾರೆಂದು ದೂರಿದ್ದಾರೆ. ಈ ಪ್ರಕರಣ ವಿಕೋಪಕ್ಕೆ ಮುಟ್ಟಿ ಹರ್ಭಜನ್‌ಗೆ 3 ಟೆಸ್ಟ್ ನಿಷೇಧವಾಗುವ ಮಟ್ಟಕ್ಕೆ ಹೋಗಿತ್ತು. ಬಿಸಿಸಿಐ ಮಧ್ಯಪ್ರವೇಶದಿಂದ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ಸಚಿನ್ ತೆಂಡುಲ್ಕರ್ ಇದನ್ನು ತಮ್ಮ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೇನಲ್ಲಿ ಉಲ್ಲೇಖೀಸಿದ್ದಾರೆ.
ನಿನ್ನ ಹೆಂಡತಿ ದಿನಾ ನಂಗೆ ಬಿಸ್ಕಿಟ್ ಕೊಡ್ತಾಳೆ !
ಆಸ್ಟ್ರೇಲಿಯದ ವೇಗದ ಬೌಲರ್ ಗ್ಲೆನ್ ಮೆಗ್ರಾಥ್ ಎಂದರೆ ತೀಕ್ಷ್ಣ ಎಸೆತಗಳು ನೆನಪಾಗುತ್ತವೆ. ಅವರ ಬೌಲಿಂಗ್‌ನಷ್ಟೇ ಮಾತೂ ಹರಿತ. ಅವರು ಕಿರಿಕ್ ಮಾಡಿಕೊಳ್ಳದಿರುವ ಆಟಗಾರರೇ ಇಲ್ಲ. ಮೆಗ್ರಾಥ್ ಒಮ್ಮೆ ಜಿಂಬಾಬ್ವೆಯ ಕೆಳಹಂತದ ಬ್ಯಾಟ್ಸ್‌ಮನ್ ಎಡ್ಡೋ ಬ್ರಾಂಡಿಸ್‌ರೊಂದಿಗೆ ಕಿರಿಕಿರಿ ಮಾಡಿಕೊಂಡರು. ತಮ್ಮ ಬೌಲಿಂಗ್‌ಗೆ ಸತತವಾಗಿ ಎಡವುತ್ತಿದ್ದ ಬ್ರಾಂಡಿಸ್ ಬಳಿ ಹೋದ ಮೆಗ್ರಾಥ್, ನಿನಗೇಕೆ ಅಷ್ಟು ಕೊಬ್ಬು ಎಂದು ಪ್ರಶ್ನಿಸಿದರು. ಬ್ರಾಂಡಿಸ್ ಅಷ್ಟೇ ವೇಗವಾಗಿ, ನಾನು ನಿನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ, ಅವಳು ದಿನಾ ಒಂದು ಬಿಸ್ಕಿಟ್ ಕೊಡ್ತಾಳೆ ಎಂದು ಬಿಟ್ಟರು. ಮೆಗ್ರಾಥ್ ಮರು ಮಾತಿಲ್ಲದೇ ಹಿಂತಿರುಗಿದರು.
ನಿನ್ನಪ್ಪನನ್ನು ಕೇಳು
ಅವನು ಹೊಡೀತಾನೆ
ಇದು ನಡೆದಿದ್ದು ಭಾರತ ತಂಡ ಪಾಕ್ ಪ್ರವಾಸದಲ್ಲಿದ್ದಾಗ. ಆಗ ತೆಂಡುಲ್ಕರ್ -ಸೆಹ್ವಾಗ್ ಕ್ರೀಸ್‌ನಲ್ಲಿದ್ದರು. ಬೌಲಿಂಗ್ ಮಾಡುತ್ತಿದ್ದ ಶೋಯಬ್ ಅಖ್ತರ್, ಪದೇ ಪದೇ ಸೆಹ್ವಾಗ್ ಬಳಿ ಹೋಗಿ ತಾಕತ್ತಿದ್ದರೆ ಈ ಎಸೆತಕ್ಕೆ ಹೊಡಿ ಎಂದು ಕೆಣಕುತ್ತಿದ್ದರು. ತಾಳ್ಮೆ ಕಳೆದುಕೊಂಡ ಸೆಹ್ವಾಗ್, ಆ ಕಡೆ ನಿಮ್ಮಪ್ಪ ಇದ್ದಾನೆ, ಅವನಿಗೆ ಹೇಳು ಹೊಡೀತಾನೆ ಎಂದು ತೆಂಡುಲ್ಕರ್ ಕಡೆ ಬೆರಳು ತೋರಿಸಿದರು.
ಆ ತುದಿಯಲ್ಲ
ಆ ತುದಿ ನೋಡು
ಇದು ಬಹಳ ಹಳೆಯ ಘಟನೆ. ಆಸ್ಟ್ರೇಲಿಯ ಕ್ರಿಕೆಟ್‌ನ ದೈತ್ಯ ವೇಗದ ಬೌಲರ್ ಡೆನ್ನಿಸ್ ಲಿಲ್ಲಿಗೆ ಸಂಬಂಧಿಸಿದ್ದು. ಅವರು ಯಾವಾಗಲೂ ಬ್ಯಾಟ್ಸ್‌ಮನ್ ಬಳಿ ಹೋಗಿ, ನೀನು ಯಾಕೆ ಅಷ್ಟು ಕೆಟ್ಟದಾಗಿ ಬ್ಯಾಟಿಂಗ್ ಮಾಡ್ತಾ ಇದೀಯಾ ಅಂತ ಗೊತ್ತಾಯ್ತು, ನಿನ್ನ ಬ್ಯಾಟ್ ತುದಿಯಲ್ಲಿ ವೇಶ್ಯೆ ಇದ್ದಾಳೆ ನೋಡಿಕೋ ಎನ್ನುತ್ತಿದ್ದರಂತೆ. ಸಾಮಾನ್ಯವಾಗಿ ಕಕ್ಕಾಬಿಕ್ಕಿಯಾಗುವ ಬ್ಯಾಟ್ಸ್‌ಮನ್‌ಗಳು ಬ್ಯಾಟ್‌ನ ಕೆಳಭಾಗ ನೋಡುತ್ತಿದ್ದರಂತೆ. ತಕ್ಷಣ ಲಿಲ್ಲಿ, ಆ ತುದಿಯಲ್ಲ ಮತ್ತೂಂದು ತುದಿ ನೋಡು ಎಂದು ಕಣ್ಣು ಮಿಟುಕಿಸುತ್ತಿದ್ದರಂತೆ!
ತಾಕತ್ತಿದ್ದರೆ ಅಪಾನವಾಯುವಿಗೆ ಬೌಂಡರಿ ಹೊಡಿ!
ಇದು ಕೂಡ ಬಹಳ ಹಳೆ ಕತೆ. ದಯವಿಟ್ಟು ಹೇಸಿಗೆ ಮಾಡಿಕೊಳ್ಳದೇ ಓದಿ. ವಿಂಡೀಸ್‌ನ ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ಒಮ್ಮೆ ಆಸ್ಟ್ರೇಲಿಯದ ವೇಗದ ಬೌಲರ್ ಮರ್ವ್ ಹ್ಯೂಸ್ ಓವರ್‌ನಲ್ಲಿ ಸತತ 4 ಬೌಂಡರಿ ಬಾರಿಸಿದರು. ಆಗ ಪಿಚ್ ಮಧ್ಯಕ್ಕೆ ಹೋದ ಹ್ಯೂಸ್, ಜೋರಾಗಿ ಅಪಾನವಾಯು ಬಿಟ್ಟು, ತಾಕತ್ತಿದ್ದರೆ ಇದಕ್ಕೆ ಬೌಂಡರಿ ಹೊಡಿ ಎಂದುಬಿಟ್ಟರು!
ನೀನು 12ನೇ ಆಟಗಾರನಾಗಿದ್ದು ಏಕೆ ಗೊತ್ತಾ?
ಇದು ರವಿ ಶಾಸ್ತ್ರಿ ಕಾಲದಲ್ಲಿ ನಡೆದಿದ್ದು. ಶಾಸ್ತ್ರಿ ಆಗ ಕ್ರೀಸ್‌ನಲ್ಲಿದ್ದರು. ಆಸ್ಟ್ರೇಲಿಯಾದ ವೇಗದ ಬೌಲರ್ ಮೈಕ್ ವಿಟ್ನಿ ಸ್ವಲ್ಪ ತಾಳ್ಮೆ ಕಳೆದುಕೊಂಡಿದ್ದರು. ಶಾಸ್ತ್ರಿಯತ್ತ ತೆರಳಿದ ಅವರು, “ಮುಚ್ಚಿಕೊಂಡು ಕ್ರೀಸ್‌ನಲ್ಲಿರು, ಇಲ್ಲಾಂದ್ರೆ ತಲೆ ಒಡೆದು ಬಿಡ್ತೀನಿ’ ಅಂದರು. ಶಾಸ್ತ್ರಿ ಯೋಚಿಸದೆ ಪ್ರತಿಕ್ರಿಯಿಸಿದ್ದು
ಹೀಗೆ: ನೀನು ಮಾತಾಡಿದಷ್ಟೇ ಚೆನ್ನಾಗಿ ಬೌಲಿಂಗ್ ಮಾಡಿದ್ದರೆ, ತಂಡದಲ್ಲಿ 12ನೇ ಆಟಗಾರನಾಗುವ ದುಃಸ್ಥಿತಿ ಬರಿ¤ರಲಿಲ್ಲ.
– ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.