ಶಾಶ್ವತ ನೀರಿಗಾಗಿ ಒಗ್ಗಟ್ಟು ಅಗತ್ಯ


Team Udayavani, Mar 13, 2017, 1:25 PM IST

dvg6.jpg

ಹರಿಹರ: ನಗರಕ್ಕೆ ಕುಡಿಯುವ ನೀರಿನ ಶಾಶ್ವತ ಯೋಜನೆ ಕಲ್ಪಿಸಲು ಒಗ್ಗಟ್ಟಿನ ಹೋರಾಟ ಅತ್ಯಗತ್ಯವಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಮುಂಚೂಣಿಯಲ್ಲಿ ಈ ಹೋರಾಟ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್‌.ಎಸ್‌.ಶಿವಶಂಕರ್‌ ಹೇಳಿದರು. 

ಜನಪರ ವೇದಿಕೆ, ಸಿವಿಲ್‌ ಇಂಜಿನಿಯರ್ ಅಸೋಶಿಯೇಷನ್‌, ಚೇಂಬರ್‌ ಆಫ್‌ ಕಾಮರ್ಸ್‌, ಪರಸ್ಪರ ಬಳಗ, ಕನ್ನಡ ಪರ ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಶ್ವತ ನೀರಿನ ಹೋರಾಟ ಸಮಿತಿ ಆಶ್ರಯದಲ್ಲಿ ರಚನಾ ಕ್ರೀಡಾ ಟ್ರಸ್ಟ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. 

ಪಕ್ಕದಲ್ಲೆ ತುಂಗಭದ್ರೆ ಹರಿಯುತ್ತಿದ್ದು, ಹಿಂದೆಲ್ಲ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸರ ಅಸಮತೋಲನದಿಂದ ನದಿ ನೀರು ಕ್ಷೀಣಿಸಿ, ನಗರ ಕುಡಿಯುವ ನೀರಿನ ಬವಣೆ ಎದುರಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಅಗತ್ಯ ಅನುದಾನ ತರಲು ಬೃಹತ್‌ ಹೋರಾಟ ಅನಿವಾರ್ಯವಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. 

ಡಾ| ವೈ.ನಾಗರ ನಾಯಕತ್ವದಲ್ಲಿ ಈ ಹೋರಾಟ ಆರಂಭಿಸೋಣ, ನಾಗಪ್ಪರ ನೇತೃತ್ವದಲ್ಲಿ ಸಿಎಂ ಬಳಿ ತೆರಳಿ ಕೆರೆ ಅಭಿವೃದ್ದಿಗೆ ಅನುದಾನ ನೀಡಲು ಕೋರಬೇಕು. 22 ಕೆರೆಗಳಿಗೆ ನೀರು ಪೂರೈಸುವ ಪೈಪ್‌ಲೈನ್‌ ಅಗಸನಕಟ್ಟೆ ಕೆರೆ ಪಕ್ಕದಲ್ಲೆ ಹಾದು ಹೋಗಿದ್ದು, ಜಿಲ್ಲಾ ಮಂತ್ರಿಗಳು, ಸಿರಿಗೆರೆ ಸ್ವಾಮಿಗಳಿಗೆ ಮನವಿ ಮಾಡಿ ಕೆರೆಗೆ ನೀರು ಹರಿಸುವಂತೆ ಕೇಳಿಕೊಳ್ಳೋಣ ಎಂದರು.  

ಮಾಜಿ ಸಚಿವ ಡಾ| ವೈ.ನಾಗಪ್ಪ ಮಾತನಾಡಿ, ತಾವು ಶಾಸಕರಿದ್ದಾಗಲೂ ಬರ ಬಂದು, ನೀರಿಗೆ ಹಾಹಾಕಾರ ಉಂಟಾಗಿತ್ತು. ಕೂಡಲೇ ಕೊಳವೆ ಬಾವಿಗಳನ್ನು ರಿಬೋರ್‌ ಮಾಡಿಸಿದಾಗ 4-5 ಇಂಚು ನೀರು ಬಂತು. ಈಗಲೂ ರೀಬೋರ್‌ ಮಾಡಿಸಿ, ನೋಡಬಹುದು. ಜನಪ್ರತಿನಿಧಿಧಿಗಳು ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಜನರ ಪ್ರೀತಿಗಳಿಸಲು ಸಾಧ್ಯ ಎಂದರು. 

ಇಂಜಿನಿಯರ್‌ ಗುರುನಾಥ್‌ ಅಗಸನಕಟ್ಟೆ ಕೆರೆಯ ಉಪಯೋಗ ಮತ್ತು ತಾಂತ್ರಿಕ ವಿವರವನ್ನು ಸಭೆಗೆ ತಿಳಿಸಿದರು. ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್‌, ಕಾಂಗ್ರೆಸ್‌ ಮುಖಂಡ ಎಸ್‌.ರಾಮಪ್ಪ, ನಗರಸಭೆ ಸದಸ್ಯ ಶಂಕರ್‌ ಖಟಾವ್‌ಕರ್‌, ರೇವಣಸಿದ್ದಪ್ಪ, ನಾಗರಾಜ್‌ ಮೆಹರಾÌಡೆ, ಬೆಳ್ಳೂಡಿ ರಾಮಚಂದ್ರಪ್ಪ, ರಮೇಶ್‌ ಮಾನೆ, ಪ್ರೊ| ಎಚ್‌ .ಎ.ಭಿûಾವರ್ತಿಮಠ, ಎಸ್‌.ಎಂ.ವೀರೇಶ್‌ ಹನಗವಾಡಿ, 

ಡಿ.ಕುಮಾರ್‌ ಹೋರಾಟದ ರೂಪರೇಷಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಡಿ.ಜಿ.ರಘುನಾಥ್‌, ಸಿ.ಎನ್‌.ಹುಲಿಗೇಶ್‌, ಜೆ.ಕಲೀಂಭಾಷಾ, ಪ್ರೊ| ಸಿ.ವಿ.ಪಾಟೀಲ್‌, ನಗರಸಭೆ ಸದಸ್ಯ ಮರಿದೇವ, ಶರದ್‌ ಕೊಣ್ಣೂರು, ಕೃಷ್ಣಾಸಾ ಭೂತೆ, ಅಂಬುಜಾ ರಾಜೋಳಿ, ಬಿ.ಮಗು, ಪ್ರಸನ್ನ ಕುಮಾರ್‌, ಎಸ್‌.ಎಚ್‌ .ಪ್ಯಾಟಿ ಮತ್ತಿತರರಿದ್ದರು. ಶಿವಪ್ರಕಾಶ್‌ ಶಾಸ್ತ್ರಿ ಸ್ವಾಗತಿಸಿದರು. ಪ್ರಕಾಶ್‌ ಕೋಳೂರು ನಿರೂಪಿಸಿದರು. ಎಚ್‌.ಕೆ.ಕೊಟ್ರಪ್ಪ ವಂದಿಸಿದರು. 

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.