“ಅಂಚೆ ನೌಕರರ ಸಂಘಟನೆಗಳು ಒಗ್ಗಟ್ಟಾದರೆ ಸಮಸ್ಯೆ ಪರಿಹಾರ ‘
Team Udayavani, Mar 13, 2017, 2:16 PM IST
ಕೋಟ: ಗ್ರಾಮೀಣ ಅಂಚೆ ನೌಕರರಿಗೆ ಹಲವಾರು ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಲು ಇದುವರೆಗೆ ಆಡಳಿತಕ್ಕೆ ಬಂದ ಎಲ್ಲ ಸರಕಾರಗಳು ವಿಫಲವಾಗಿವೆ. ಇವರ ಸಂಘಟನೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಆಡಳಿತ ವ್ಯವಸ್ಥೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಬೇರೆ-ಬೇರೆ ವಿಭಾಗಗಳಾಗಿ ಹರಿದು ಹಂಚಿಹೋಗಿರುವ ಅಂಚೆ ನೌಕರರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ನಿಂತು ಹೋರಾಟ ಮಾಡಿದ್ದಲ್ಲಿ ಸರಕಾರ ನಿಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಮೀನುಗಾರಿಕೆ, ಯುವಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಅವರು ಮಾ.12ರಂದು ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿದ ಅಖೀಲ ಭಾರತ ಗ್ರಾಮೀಣ ಅಂಚೆನೌಕರರ ಸಂಘ ಉಡುಪಿ ವಿಭಾಗದ ದ್ವೆ„ವಾರ್ಷಿಕ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಇಲಾಖೆ ಇದ್ದರೆ ಅದು ಅಂಚೆ ಇಲಾಖೆ ಮಾತ್ರ. ಆದರೂ ಈ ಇಲಾಖೆಯಲ್ಲಿ ದುಡಿಯುವವರಿಗೆ ವೇತನ, ಸವಲತ್ತುಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಇವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಹೋರಾಟದಲ್ಲಿ ನಿಮ್ಮ ಜತೆ ಕೈಜೋಡಿಸುತ್ತೇನೆ ಎಂದರು.
ಸಮಸ್ಯೆಗಳನ್ನು ಕೇಂದ್ರ
ಸರಕಾರದ ಗಮನಕ್ಕೆ ತರುವೆ
ಅಂಚೆ ಇಲಾಖೆ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ನನ್ನ ಗಮನದಲ್ಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸದರು, ಸಚಿವರ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಅಂಚೆ ಇಲಾಖೆಯ ಅಧೀಕ್ಷಕರಾದ ರಾಜಶೇಖರ ಭಟ್ ಕಾರ್ಯಕ್ರಮ ಉದ್ಘಾಟಿಸಿ, ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಅಂಚೆ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಬಸವ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಿವೃತ್ತ ನೌಕರರಿಗೆ ಸಮ್ಮಾನ, ನಿಧನರಾದ ನೌಕರರಿಗೆ ಶ್ರದ್ಧಾಂಜಲಿ, ಗೌರವಾರ್ಪಣೆ ನಡೆಯಿತು. ಕರ್ನಾಟಕ ರೈತ ಸಂಘ ಆಂದೋಲನದ ಮುಖಂಡ ವಿಜಯ ಕುಮಾರ್ ಹೆಗ್ಡೆ, ರೈತ ಮುಖಂಡ ರಾಘವೇಂದ್ರ ಉಪ್ಪೂರು, ಸಂಸ್ಥೆಯ ಮುಖಂಡರಾದ ಕೆ.ಸಿ. ಅಣ್ಣಪ್ಪ, ರುದ್ರೇಶ, ಎಂ.ಎನ್.ಕುರಹಟ್ಟಿ, ಎಸ್.ಎಸ್. ಮಂಜುನಾಥ, ಎಂ.ಜಿ.ಹೆಗ್ಡೆ, ಶೇಷಪ್ಪ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯ ನಾರಾಯಣ ಸ್ವಾಗತಿಸಿ, ಶಿವರಾಮ್ ಕಾರ್ಕಡ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಸಂತೋಷ ಮಧ್ಯಸ್ಥ ವರದಿ ವಾಚಿಸಿ, ಖಜಾಂಚಿ ರಮಾನಾಥ ಆರ್. ಮಾçಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.