ಸವಾಯಿ ಗಂಧರ್ವ ನವೀಕೃತ ಕಲಾಮಂದಿರ ಜೂನ್ ಅಂತ್ಯಕ್ಕೆ ಲೋಕಾರ್ಪಣೆ
Team Udayavani, Mar 13, 2017, 2:54 PM IST
ಹುಬ್ಬಳ್ಳಿ: ನವೀಕರಣದ ನಾಮಫಲಕ ಹಾಕಿಕೊಂಡು ಮೂರು ವರ್ಷ ಕಳೆದಿವೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂಬ ಹೇಳಿಕೆಗಳು, ಹೇಳಿಕೆಗಳಾಗಿಯೇಮುಂದುವರಿದಿವೆ. ಇದೀಗ ಜೂನ್ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂಬ ಹೊಸ ಹೇಳಿಕೆಯೊಂದು ಹೊರಬಿದ್ದಿದೆ.
ಇಲ್ಲಿನ ದೇಶಪಾಂಡೆ ನಗರದಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದ ನವೀಕರಣದ ವೃತ್ತಾಂತವಿದು. ಕಲಾ ಮಂದಿರದ ನವೀಕರಣಕ್ಕೆ ಈಗಾಗಲೇ ಸುಮಾರು 2.05 ಕೋಟಿ ರೂ.ನಷ್ಟುಅನುದಾನ ನೀಡಲಾಗಿದ್ದು, ಕಾಮಗಾರಿ ವೇಗ ಮಾತ್ರ ನಿರೀಕ್ಷಿತ ರೀತಿಯಲ್ಲಿಲ್ಲ ಎಂಬುದು ಹಲವರ ಅಸಮಾಧಾನವಾಗಿದೆ. ಕಲಾ ಮಂದಿರ ದ್ವಾರ ಬದಲಾವಣೆ ಕುರಿತಾಗಿ ಸಣ್ಣ ವಿವಾದವೂ ಎದ್ದಿತ್ತು.
ಇದು ಕೂಡ ಕಾಮಗಾರಿ ವಿಳಂಬಕ್ಕೆತನ್ನದೇ ಕೊಡುಗೆ ನೀಡಿದೆ ಎನ್ನಲಾಗುತ್ತಿದೆ. ನವೀಕರಣಕ್ಕಾಗಿ 2013ರಲ್ಲೇ ಸಾರ್ವಜನಿಕ ಬಳಕೆಯನ್ನು ಸ್ಥಗಿತಗೊಳಿಸಿದ್ದ ಭವನ 2017ರಲ್ಲಾದರೂ ಸೇವೆಗೆ ಲಭ್ಯವಾಗುವುದೇ ಎಂಬ ಕುತೂಹಲ ಹೆಚ್ಚಿಸಿದೆ. ಸವಾಯಿ ಗಂಧರ್ವ ಕಲಾ ಮಂದಿರ ನವೀಕರಣಕ್ಕಾಗಿ 2013 ರಲ್ಲಿಯೇ ಭವನ ಬಂದ್ ಮಾಡಲಾಯಿತು.
2014ರಲ್ಲಿ ಕಲಾ ಭವನ ನವೀಕರಣ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು. ಅದಾದ ನಂತರ ನವೀಕರಣ ಕಾಮಗಾರಿಯನ್ನು ನಿರ್ಮಿತ ಕೇಂದ್ರ ವಹಿಸಿಕೊಂಡು ಮಂದಿರದ ಮೇಲ್ಛಾವಣೆ ತೆಗೆದು ಹೊಸ ಮೇಲ್ಛಾವಣೆ ಅಳವಡಿಕೆ, ಹಿಂಭಾಗದಲ್ಲಿರುವ ಶೌಚಾಲಯ ತೆಗೆದು ನೂತನ ಶೌಚಾಲಯ ನಿರ್ಮಾಣ, ಭಾಗದಲ್ಲಿ ಶಿಥಿಲಗೊಂಡ ಕಟ್ಟಡ ಭಾಗದ ಮರು ನಿರ್ಮಾಣ, ವೇದಿಕೆ ನವೀಕರಣ, ಆಸನ, ಹವಾ ನಿಯತ್ರಿತ ವ್ಯವಸ್ಥೆ, ವೈರಿಂಗ್, ಪ್ಲೋರಿಂಗ್ ಸೇರಿದಂತೆ ಇನ್ನು ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು.
ಕೇವಲ ಎಂಟು ತಿಂಗಳ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣದ ಒಡಂಬಡಿಕೆ ಇತ್ತಾದರೂ ಅವಧಿ ವಿಸ್ತರಣೆ, ವಿಸ್ತರಣೆಯೊಂದಿಗೆ ಅಂತಿಮವಾಗಿ ನಿರ್ಮಿತಿಕೇಂದ್ರದ ಕಾಮಗಾರಿ ಮುಗಿದಿದೆ. ಕಲಾ ಮಂದಿರ ನವೀಕರಣಕ್ಕಾಗಿ ರಾಜ್ಯ ಸರಕಾರ ಪಾಲಿಕೆಗೆ ನೀಡುವ ವಿಶೇಷ ಅನುದಾನದಲ್ಲಿ 2ನೇ 100 ಕೋಟಿ ರೂ. ಅನುದಾನದಲ್ಲಿ 1.75 ಕೋಟಿ ಹಾಗೂ 3ನೇ 100 ಕೋಟಿ ರೂ. ಅನುದಾನದಲ್ಲಿ 1.5 ಕೋಟಿ ರೂ. ನೀಡಲಾಗಿದೆ.
ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ಕಾಮಗಾರಿ ಮುಗಿದ ಅನಂತವೂ ಮಂದಿರದಲ್ಲಿ ಇನ್ನೂ ಆಸನ, ಹವಾ ನಿಯಂತ್ರಿತ ವ್ಯವಸ್ಥೆ, ಪ್ಲೋರಿಂಗ್, ಪ್ಲಾಸ್ಟರಿಂಗ್ ಹಾಗೂ ವಿದ್ಯುತ್ ಸೌಲಭ್ಯ ಅಳವಡಿಕೆ ಕಾರ್ಯ ಆಗಬೇಕಿದೆ. ಇದಕ್ಕಾಗಿ ಮತ್ತೂಂದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಟೆಂಡರ್ ಪಡೆದ ಗುತ್ತಿಗೆದಾರ ಸದ್ಯದಲ್ಲೇ ಕಾಮಗಾರಿ ಆರಂಭಿಸಬೇಕಿದೆ.
ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ, ತಹಶೀಲ್ದಾರ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಸವಾಯಿ ಗಂಧರ್ವ ಕಲಾ ಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಲಾಮಂದಿರಕಾಮಗಾರಿಗೆ ಬೇಕಾಗುವ ಅನುದಾನ ನೀಡಲಾಗಿದ್ದು, ವೇದಿಕೆ ನವೀಕರಣಕ್ಕೆ ಬೇಕಾಗುವ ಹಣವನ್ನು ಪಾಲಿಕೆ ವಿಶೇಷ ಅನುದಾನದಲ್ಲಿ ನೀಡಲು ನಿರ್ಧರಿಸಲಾಗಿದೆ.
ಕಲಾ ಮಂದಿರದ ಬಾಕಿ ಉಳಿದಿರುವ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರ ವ್ಯಕ್ತಪಡಿಸಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಂಡು ಕಲಾ ಮಂದಿರಸಾರ್ವಜನಿಕ ಸೇವೆಗೆ ಲಭ್ಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.