ಹೋಳಿ ಹಬ್ಬ: ಬೆಲೆ ಕಳೆದುಕೊಂಡ ಸಕ್ಕರೆ ಸರ
Team Udayavani, Mar 13, 2017, 3:35 PM IST
ವಾಡಿ: ಕಾಮದಹನ ಮತ್ತು ಬಣ್ಣದಾಟ ಇವು ಹೋಳಿ ಹಬ್ಬದಲ್ಲಿ ಕಂಡು ಬರುವ ಪ್ರಮುಖ ಆಚರಣೆ. ಬಣ್ಣ ಎರಚಿ ಬೊಬ್ಬೆ ಹೊಡೆದು ದಣಿದವರ ಬಾಯಿಗೆ ಸಿಹಿ ಹಾಕಲೆಂದೇ ಸಿದ್ಧಗೊಳ್ಳುವ ಸಕ್ಕರೆ ಸರವೂ ಹೋಳಿ ಸಂಭ್ರಮದ ಭಾಗ ಎಂಬುದೇ ಇಂದಿನ ಬಹುತೇಕ ಪೀಳಿಗೆಗೆ ನೆನಪಿಲ್ಲದಂತಾಗಿದೆ.
ಆಧುನಿಕ ಜಗತ್ತಿನ ಪರಿಣಾಮದಿಂದ ರಾಸಾಯಿನಿಕ ಮಿಶ್ರಣದ ತೈಲ ವರ್ಣ ಮಾರುಕಟ್ಟೆ ಆವರಿಸಿಕೊಂಡಿದ್ದು, ಯುವ ಜನರನ್ನು ಆಕರ್ಷಿಸಿದೆ. ಹೋಳಿ ಹಬ್ಬದ ಆಕರ್ಷಣೆಯಾಗಿದ್ದ ಪುಡಿ ಬಣ್ಣ ಬೇಡಿಕೆ ಕಳೆದುಕೊಂಡಿದೆ. ಮೊಟ್ಟೆ ಹೊಡೆದು, ಕಪ್ಪು ಮಸಿ ಬಳೆಯುವುದೇ ಪಡ್ಡೆ ಹುಡುಗರ ರಂಗಿನಾಟವಾಗಿರುವಾಗ, ಬಣ್ಣ ಬಣ್ಣದ ಸಕ್ಕರೆ ಸರಗಳು ಕಹಿಯಾಗಿ ಸಾಂಪ್ರದಾಯದಿಂದ ಹಿಂದೆ ಸರಿದುಕೊಂಡಿವೆ.
ಹೋಳಿ ಹಬ್ಬದ ನಿಮಿತ್ತ ಸಂಬಂಧಿಕರು ತಮ್ಮ ಹತ್ತಿರದ ಕುಟುಂಬಸ್ಥರ ಮಕ್ಕಳ ಕೊರಳಿಗೆ ಈ ಸಕ್ಕರೆ ಸರ ಹಾಕಿ ಶುಭಾಶಯ ಕೋರುತ್ತಿದ್ದ ಪ್ರಸಂಗಗಳು ಈಗ ವಿರಳ. ಮಾರುಕಟ್ಟೆ ಬೀದಿಗಳಲ್ಲಿ ಸಕ್ಕರೆ ಸರದ ವ್ಯಾಪಾರಿಗಳ ಸಾಲು ನೋಡುವುದು ಜಾತ್ರೆ ಅನುಭವ ನೀಡುತ್ತಿತ್ತು. ಕೊರಳಿಗೆ ಸರ ಹಾಕಿಕೊಂಡು ಸಕ್ಕರೆ ಗಂಟೆಯನ್ನು ಒಂದೊಂದಾಗಿ ಕಡಿದು ತಿನ್ನೋದರ ಮಜವೇ ಬೇರೆಯಾಗಿರುತ್ತಿತ್ತು.
ಆದರೆ, ಈಗ ಅಂತಹ ಸಕ್ಕರೆ ಸರಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ವ್ಯಾಪಾರಿ ಗಂಟೆ ಸರ ಮಾರಾಟಕ್ಕೆ ನಿಂತರೂ ಯಾರೂ ಇತ್ತ ಹೊರಳಿ ನೋಡುವವರಿಲ್ಲ. ಬೇಡಿಕೆಯಿಲ್ಲದ್ದರಿಂದ ಸಕ್ಕರೆ ಸರಗಳು ಹೋಳಿ ಹಬ್ಬದಿಂದ ಸಂಪೂರ್ಣ ಮಾಯವಾಗುತ್ತಿರುವುದು ಬದಲಾದ ಸಂಪ್ರದಾಯ ಎತ್ತಿತೋರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.