ಮಿಚೆಲ್ ಮಾರ್ಷ್ಗೆ 9 ತಿಂಗಳು ವಿಶ್ರಾಂತಿ
Team Udayavani, Mar 14, 2017, 3:40 AM IST
ಸಿಡ್ನಿ: ಭುಜದ ನೋವಿನಿಂದಾಗಿ ಭಾರತ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಆಸ್ಟ್ರೇಲಿಯದ ಆಲ್ರೌಂಡರ್ ಮಿಚೆಲ್ ಮಾರ್ಷ್ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಅವರು 9 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ತಿಳಿದು ಬಂದಿದೆ. ವೆಸ್ಟರ್ನ್ ಆಸ್ಟ್ರೇಲಿಯದ ಪತ್ರಿಕೆಯೊಂದರ ಪ್ರಕಾರ, ಮಾರ್ಷ್ ಭುಜದ ಸಮಸ್ಯೆ ಗಂಭೀರ ವಾಗಿದೆ. ಇದಕ್ಕೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರ. ಹೀಗಾಗಿ ವರ್ಷಾಂತ್ಯದ ಆ್ಯಶಸ್ ಸರಣಿಯಲ್ಲಿ ಆಡುವುದು ಅಸಾಧ್ಯ ಎನ್ನಲಾಗಿದೆ.
2014ರಲ್ಲಿ ಟೆಸ್ಟ್ಕ್ಯಾಪ್ ಧರಿಸಿದ ಮಿಚೆಲ್ ಮಾರ್ಷ್ ಆಸ್ಟ್ರೇಲಿಯದ ಟೆಸ್ಟ್ ಆಲ್ರೌಂಡರ್ಗಳ ಕೊರತೆಯನ್ನು ನೀಗಿಸುತ್ತಾರೆಂದು ಭಾವಿಸ ಲಾಗಿತ್ತು. ಆದರೆ ಈವರೆಗೆ ಇದು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಟ್ಟಿಲ್ಲ. 21 ಟೆಸ್ಟ್ಗಳಿಂದ ಕೇವಲ 674 ರನ್ ಹಾಗೂ 29 ವಿಕೆಟ್ ಸಂಪಾದಿಸಿದ್ದಾರೆ. ಪ್ರಸಕ್ತ ಸರಣಿಯ ಮೊದಲೆರಡು ಟೆಸ್ಟ್ಗಳ 4 ಇನ್ನಿಂಗ್ಸ್ಗಳಲ್ಲಿ ಮಿಚೆಲ್ ಮಾರ್ಷ್ ಗಳಿಸಿದ್ದು ಕೇವಲ 48 ರನ್ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.