ಮಂಜೇಶ್ವರದ ಲಾಲಕಿ, ಸ್ವರ್ಣ ಕಲಶಕ್ಕೆ ಸ್ವಾಗತ
Team Udayavani, Mar 14, 2017, 1:04 PM IST
ಉಡುಪಿ: ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಿಂದ ಹೊರಟ ಮಂಜೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳುವ ನೂತನ ಬೆಳ್ಳಿ ಲಾಲಕಿ ಮತ್ತು ಸ್ವರ್ಣ ಕಲಶದ ಸಮರ್ಪಣಾ ಯಾತ್ರೆ ಶನಿವಾರ ಉಡುಪಿ ಲಕ್ಷಿ¾à ವೆಂಕಟೇಶ ದೇವಸ್ಥಾನಕ್ಕೆ ತಲುಪಿದಾಗ ದೇಗುಲದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ, ವಿಶೇಷ ಪೂಜೆ ನಡೆದ ಬಳಿಕ ಉದ್ಯಾವರ ಕಟಪಾಡಿಗೆ ಬೀಳ್ಕೊಡಲಾಯಿತು.
ದೇಗುಲದ ಆಡಳಿತ ಮಂಡಳಿ ಮೊಕ್ತೇಸರ ಪಿ.ವಿ. ಶೆಣೈ, ಮಂಡಳಿ ಸದಸ್ಯರಾದ ಮಟ್ಟಾರು ವಸಂತ ಕಿಣಿ, ಪುಂಡಲೀಕ ಕಾಮತ್, ಗಣೇಶ ಕಿಣಿ, ಅರ್ಚಕ ವಿನಾಯಕ ಭಟ್, ನಗರಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ ಮೊದಲಾದವರು ಉಪಸ್ಥಿತರಿದ್ದರು.
3 ಕೆ.ಜಿ. ಬಂಗಾರದ ಕಲಶವಾಗಿದ್ದು, ಮಂಜೇಶ್ವರ ನಾಗದೇವರ ಚಿತ್ರಣ ಹೊಂದಿದೆ. ಲಾಲಕಿ 80 ಕೆ.ಜಿ. ಬೆಳ್ಳಿಯಿಂದ ತಯಾರಿಸಲಾಗಿದ್ದು, ವಿಶೇಷ ಕಲಾಕೃತಿ ಹೊಂದಿದೆ.
ಮಂಜೇಶ್ವರ ದೇವಸ್ಥಾನ 18 ಪೇಟೆಯ ದೇವಸ್ಥಾನವಾದ ಕಾರಣ ವಿವಿಧೆಡೆ ಸಂಚರಿಸಿ ಮಂಜೇಶ್ವರಕ್ಕೆ ಮಾ. 12ರಂದು ತಲುಪಿದೆ. ಮಂಜೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣ ಶ್ರೀಭುವನೇಂದ್ರತೀರ್ಥ ಶ್ರೀಪಾದರ ವೃಂದಾವನವಿರುವ ಬಸ್ರೂರು ದೇವಸ್ಥಾನದಿಂದ ಸಮರ್ಪಣಾ ಯಾತ್ರೆ ಆರಂಭಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.