ಬರ ನೀರಿಗಷ್ಟೇ ಬಣ್ಣದಾಟಕ್ಕಲ್ಲ!


Team Udayavani, Mar 14, 2017, 1:19 PM IST

dvg1.jpg

ದಾವಣಗೆರೆ: ಹಬ್ಬದ ಸಂಭ್ರಮಾಚರಣೆಗೆ  ಯಾವುದೇ ಸಮಸ್ಯೆ, ತೊಂದರೆ ಅಡ್ಡಿಯಾಗಲಾರವು ಎನ್ನುವುದಕ್ಕೆ ಸಾಕ್ಷಿ ಸೋಮವಾರ ನಡೆದ ಬಣ್ಣದಾಟ. ಮಳೆ ಕೊರತೆ ಹಾಗೂ ಸತತ ಎರಡು ವರ್ಷದ ಬರದಿಂದಾಗಿ ನೀರಿನ ತೀವ್ರ ಸಮಸ್ಯೆ  ನಡುವೆಯೂ ನಡು ಕರ್ನಾಟಕ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸೋಮವಾರ ರಂಗಿನಾಟ ಭರ್ಜರಿಯಾಗಿ ನಡೆಯಿತು. 

ಭಾನುವಾರ ಸಂಜೆ ಪ್ರಮುಖ ವೃತ್ತ, ಬೀದಿ, ಸ್ಥಳದಲ್ಲಿ ಕಾಮಣ್ಣನ ಸುಟ್ಟು, ಸೋಮವಾರ ಬಣ್ಣ ಹಾಕುವುದಕ್ಕೆ ಯುವಕರು ಸಜ್ಜಾಗಿದ್ದರು. ಬಿಸಿಲು ಏರುತ್ತಿದ್ದಂತೆ ಬಣ್ಣದ ಎರೆಚಾಟವೂ ಹೆಚ್ಚಾಯಿತು. ಚಿಣ್ಣರು, ಹೆಂಗೆಳೆಯರು, ಯುವಕರು, ಮಧ್ಯ ವಯಸ್ಕರರು…ಹೀಗೆಯಾವುದೇ ವಯೋಮಾನ ಹಮ್ಮುಬಿಮ್ಮು ಇಲ್ಲದೆ ಎಲ್ಲರೂ ಹೋಳಿಯ ರಂಗಿನಾಟದಲ್ಲಿ ಮಿಂದೆದ್ದರು.

ದ್ವಿಚಕ್ರ ವಾಹನ, ಆಟೋ, ಕಾರುಗಳಲ್ಲಿಮನೆಗಳಿಗೆ ಹೋಗಿ ಬಣ್ಣ ಹಾಕುವುದು ಕಂಡು ಬಂದಿತು. ಸೇರಿಗೆ ಸೆವ್ವಾ ಸೇರು ಎನ್ನುವಂತೆ ಯುವತಿಯರು, ಮಹಿಳೆಯರು ದ್ವಿಚಕ್ರ ವಾಹನಗಳಲ್ಲಿಸುತ್ತಾಡುತ್ತಾ ಬಣ್ಣ ಹಾಕುವುದರಲ್ಲಿ ತಲೀನರಾಗಿದ್ದರು. ಚಿಕ್ಕ ಮಕ್ಕಳ ಸಂಭ್ರಮವಂತೂ ಹೇಳ ತೀರದ್ದಾಗಿತ್ತು. ಹಳೆಯ ಬಟ್ಟೆ ಹಾಕಿಕೊಂಡು, ಕೈಯಲ್ಲಿ ಬಣ್ಣ, ಪಿಚಕಾರಿ ಇಟ್ಟುಕೊಂಡು ತಮ್ಮ ಗೆಳೆಯರ ಬೆನ್ನತ್ತಿ ಬಣ್ಣ ಹಾಕಿ, ಕೇಕೇಹಾಕಿದರು. 

ದಾವಣಗೆರೆಯ ಮಟ್ಟಿಗೆ ಹೋಳಿ ಸರ್ಕಲ್‌ ಎಂಬ ಖ್ಯಾತಿಗೆ ಪಾತ್ರವಾಗಿರುವ ರಾಂ ಅಂಡ್‌ ಕೋ ವೃತ್ತದಲ್ಲಿ ನೆರೆದಿದ್ದಸಾವಿರಾರು ಜನರು ಧ್ವನಿವರ್ಧಕದಿಂದ ಹೊರ ಬರುತ್ತಿದ್ದಂತಹ ಹಾಡುಗಳಿಗೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾ, ಬಣ್ಣ ಬಳಿಯುತ್ತಾ ಸಂಭ್ರಮದಲ್ಲಿ ಮಿಂದೆದ್ದರು. ಇನ್ನು ಹೋಳಿ ಹಬ್ಬಕ್ಕೂ ಮೈ ಮೇಲಿನ ಬಟ್ಟೆಗೂ ಆಗಿ ಬರುವುದಿಲ್ಲವೇನೋ ಎನ್ನುವಂತೆ ಇದ್ದಕ್ಕಿದ್ದಂತೆ ಅಂಗಿ, ಟೀ ಶರ್ಟ್‌, ಬನಿಯನ್‌ ಕಿತ್ತೆಸೆಯುವುದು. 

ನೋಡ ನೋಡುತ್ತಿದ್ದಂತೆ ತಮ್ಮ ಅತ್ಯಾಪ್ತರ ಬಟ್ಟೆ ಕಿತ್ತು, ಮೇಲೆಕ್ಕೆ ಎಸೆಯುವ ಮೂಲಕ ತಮ್ಮದೇ ರೀತಿಯ ವಿಕೃತಸಂತಸ ಸಾಗರದಲ್ಲಿ ಮುಳುಗಿದರು. ರಂಗಿನಾಟದಲ್ಲಿ ಉನ್ಮಾದದಲ್ಲಿದ್ದ ಯುವ ಜನಾಂಗ ಒಂದು ಕ್ಷಣ ಎಡವಟ್ಟಾದರೆ ಏನಾಗುತ್ತದೆ ಎಂಬ ಅರಿವೇ ಇಲ್ಲದವರಂತೆ  ಚಿತ್ರ, ವಿಚಿತ್ರ, ವಿಕೃತ ವರ್ತನೆ ತೋರಿದರು. ಮೊಸರಿನ ಕುಡಿಕೆ ಒಡೆಯುವುದಕ್ಕೆ ಇನ್ನಿಲ್ಲದ ಹರಸಾಹಸ ಪಟ್ಟರು.

ನೀರು ಸುರಿಸುತ್ತಿದ್ದರೂ ಒಬ್ಬರ ಮೇಲೆ ಒಬ್ಬರು ನಿಂತು ಮಡಿಕೆ ಒಡೆಯುವುದಕ್ಕೆ ಸೆಣಸುವಾಗ ಆಯ ತಪ್ಪಿ ಧೊಪ್ಪನೆ  ಬೀಳುವುದರಲ್ಲೂ ಸಂಭ್ರಮಪಟ್ಟರು. ಅಂತೂ ಇಂತೂ ಹರಸಾಹಸ ಮಾಡಿ, ಮಡಕೆ ಒಡೆದಾಗ ಪಡುತ್ತಿದ್ದ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ.  ಇದೇ ಮೊದಲ ಬಾರಿ ಯುವತಿಯರಿಗಾಯೇ ಬಣ್ಣ ಹಾಕಲು,ಡ್ಯಾನ್ಸ್‌ ಮಾಡಲಿಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿತ್ತು.

ಈ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡ ಯುವತಿಯರು ತಾವು ಯಾರಿಗೇನು ಕಡಿಮೆ ಇಲ್ಲ ಎನ್ನುವಂತೆ ಸಖತ್ತಾಗಿ ಬಣ್ಣದ ಜೊತೆ ಜೊತೆಗೆ ಹೆಜ್ಜೆ ಹಾಕಿದರು. ಧಾರಾಳವಾಗಿಯೇ ಮೊಟ್ಟೆ ಹೊಡೆದರು. ಕುಣಿದು, ಕುಪ್ಪಳಿಸಿದರು. ಶವರ್‌ ವ್ಯವಸ್ಥೆ ಇನ್ನೂ ಹೆಚ್ಚಿನ ಉತ್ತೇಜನ ನೀಡುವಂತಿತ್ತು. ವಿನೋಬ ನಗರ 2ನೇ ಮುಖ್ಯ ರಸ್ತೆಯ ಗಣೇಶ ದೇವಸ್ಥಾನ ಬಳಿ ಮಡಕೆ  ಒಡೆಯುವ, 10 ರೂಪಾಯಿ ನೋಟುಕೆಳಕ್ಕೆ ತರುವ ಆಟ ಮೋಜಿನಿಂದ ಕೂಡಿತ್ತು.

ನೂರಾರು ಸಂಖ್ಯೆಯಲ್ಲಿದ್ದ ಯುವಕರು, ಚಿಣ್ಣರು, ಮಹಿಳೆಯರು, ವಿದ್ಯಾರ್ಥಿನಿಯರು ಸಂಭ್ರಮದಿಂದ ಹೋಳಿ ಹಬ್ಬದಾಚರಣೆಯಲ್ಲಿ ತೊಡಗಿದ್ದರು. ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ಹಳೆ ಬಸ್‌ ನಿಲ್ದಾಣ, ಹೊಂಡದ ಸರ್ಕಲ್‌, ಮಂಡಿಪೇಟೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ನಿಟುವಳ್ಳಿ, ಎಚ್‌ಕೆಆರ್‌ ವೃತ್ತ, ಸರಸ್ವತಿ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ…. ಬಹುತೇಕ ಎಲ್ಲಾ ಕಡೆ ಹೋಳಿ ಹಬ್ಬದ ಸಂಭ್ರಮ ಭರ್ಜರಿಯಾಗಿತ್ತು.

 ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ತಾಲೂಕು ಪಂಚಾಯತ್‌ ಅಧ್ಯಕ್ಷೆ  ಮಮತಾ ಮಲ್ಲೇಶಪ್ಪ, ಮೇಯರ್‌ ರೇಖಾ ನಾಗರಾಜ್‌ ಸಹ ಹೋಳಿ ಸಂಭ್ರಮಿಸಿದರು. ಎಸ್‌.ಎಸ್‌. ಬಡಾವಣೆ 3ನೇ ಮುಖ್ಯ ರಸ್ತೆ, 8ನೇ ಕ್ರಾಸ್‌ನಲ್ಲಿ ನೈಸರ್ಗಿಕ ಬಣ್ಣದ ಹೋಳಿಗೆ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಸೌಮ್ಯ ಬಾಪಟ್‌  ಚಾಲನೆ ನೀಡಿದರು.ವೇಗವಾಗಿ ಬೈಕ್‌ ಚಾಲನೆ, ತ್ರಿಬಲ್‌  ರೈಡಿಂಗ್‌, ಸೈಲೆನ್ಸರ್‌ ತೆಗೆದು ಹಾಕಿ, ಕರ್ಕಶ ಶಬ್ದ, ಜೋರಾಗಿ ಹಾರ್ನ್ ಮಾಡುವುದು, ಮೊಟ್ಟೆ ಬಳಕೆ, ನೃತ್ಯ ಮಾಡುವುದು, ಅಪರಿಚಿತರಿಗೆ ಬಣ್ಣ ಹಾಕುವುದನ್ನು ನಿಷೇಧಿಸಲಾಗಿ ತ್ತಾದರೂ ಹಬ್ಬದ ಸಂಭ್ರಮದಲ್ಲಿ ಅವೆಲ್ಲವೂ ಬಲು ಧಾರಾಳವಾಗಿಯೇ ನಡೆದವು. 

ಬಾರ್‌ ಅಂಡ್‌ ರೆಸ್ಟೋರೆಂಟ್‌ ಬಂದ್‌ ಆಗಿದ್ದರೂ ಗುಂಡು ಪ್ರಿಯರಿಗೆ ತೊಂದರೆಆಗಲೇ ಇಲ್ಲ. ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದವರ ಮೇಲೆ ಏಕಾಏಕಿ ಬಣ್ಣ, ನೀರು ಹಾಕಿದ ಪರಿಣಾಮ ಅನೇಕರು ಬಿದ್ದು ಗಾಯಗೊಂಡರು. ಬಣ್ಣದ ಹಬ್ಬದ ನಡುವೆಯೂ ಪಿಯು ವಿದ್ಯಾರ್ಥಿಗಳು ಧಾವಂತದಲ್ಲಿ ಪರೀಕ್ಷಾ ಕೇಂದ್ರಗಳತ್ತ ದೌಡಾಯಿಸುವುದು ಕಂಡು ಬಂದಿತು. ಒಟ್ಟಾರೆಯಾಗಿ ದಾವಣಗೆರೆಯಲ್ಲಿ ಹೋಳಿ ಭರ್ಜರಿಯಾಗಿಯೇ ಇತ್ತು.  

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.