ಎಂಡೋಸಲ್ಫಾನ್ ಸಂತ್ರಸ್ತರ ವೈದ್ಯಕೀಯ ಶಿಬಿರಕ್ಕೆ ಮೀನಮೇಷ
Team Udayavani, Mar 14, 2017, 3:01 PM IST
ಕಾಸರಗೋಡು: ದುರಂತ ಮಯ ಜೀವನ ನಡೆಸುತ್ತಿರುವ ಕಾಸರಗೋಡು ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗಾಗಿ ವೈದ್ಯಕೀಯ ಶಿಬಿರವನ್ನು ಆಯೋಜಿಸ ಲಾಗುವುದು ಎಂಬ ಘೋಷಣೆ ಮಾಡಿ ವರ್ಷಗಳು ಕಳೆದರೂ ಶಿಬಿರ ಮಾತ್ರ ನಡೆಯದೆ ವಿಳಂಬಗೊಳ್ಳುತ್ತಲೇ ಹೋಗುತ್ತಿದೆ.
ಈ ಮಧ್ಯೆ ಎಂಡೋಸಲ್ಫಾನ್ ದುರಂತ ಬಾಧಿತರ ಪುನರ್ವಸತಿಗಿರುವ ಎಂಡೋ ಸಲ್ಫಾನ್ ಸೆಲ್ ಸಭೆಯು ಮಾ.18ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ಜರಗಲಿದೆ. ಮಾರ್ಚ್ ತಿಂಗಳಿಗಿಂತ ಮೊದಲು ವೈದ್ಯಕೀಯ ಶಿಬಿರ ನಡೆಸಲು ಮರು ಸ್ಥಾಪನೆಗೊಂಡ ಎಂಡೋ ಸೆಲ್‌ನ ಪ್ರಥಮ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಈಗಾಗಲೇ ಅರ್ಜಿ ಸ್ವೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿ ಎಂಡೋ ಬಾಧಿತರ ಪಟ್ಟಿಯಲ್ಲಿರುವವರನ್ನು ಸೇರಿದಂತೆ ಒಟ್ಟು ಏಳು ಸಾವಿರಕ್ಕೂ ಅಧಿಕ ಮಂದಿ ವೈದ್ಯಕೀಯ ಶಿಬಿರಕ್ಕಾಗಿ ಕಾಯುತ್ತಿದ್ದಾರೆ. ಮಾತ್ರವಲ್ಲದೆ ಸಂತ್ರಸ್ತರಲ್ಲಿ ಕೆಲವರಂತೂ ಅಕ್ಷರಶಃ ನರಕಯಾತನೆ ಪಡುತ್ತಿದ್ದಾರೆ. ಆದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದಿರುವುದು ಎಂಡೋ ವಲಯವನ್ನು ಮಾತ್ರವಲ್ಲ ಸಾರ್ವಜನಿಕರನ್ನೂ ರೊಚ್ಚಿಗೇಳುವಂತೆ ಮಾಡಿದೆ.
ಈ ಮಧ್ಯೆ ಪರೀûಾ ಸಮಯ ವಾದ್ದರಿಂದ ಶಾಲೆಗಳನ್ನು ಶಿಬಿರಕ್ಕಾಗಿ ಬಿಟ್ಟುಕೊಡುವುದಿಲ್ಲ ಎಂಬ ನೆಪ ಒಡ್ಡಲಾಗಿದೆ. ಈ ಬಗ್ಗೆ ಶಿಬಿರದ ದಿನಾಂಕ ನಿಗದಿಪಡಿಸುವಾಗ ಯೋಚಿಸಿ ರಲಿಲ್ಲ ಎಂದು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮಜಾ ಯಿಷಿ ನೀಡಿದ್ದಾರೆ.
ಮಾ.18ರಂದು ಸಭೆ ನಡೆಯುವುದಕ್ಕಿಂತ ಮೊದಲು ವೈದ್ಯಕೀಯ ಶಿಬಿರದ ದಿನಾಂಕ ಹಾಗೂ ಸ್ಥಳ ಘೋಷಿಸಲು ಶಾಲೆಗಳನ್ನು ಸಂದರ್ಶಿಸಿ ಅಧಿಕಾರಿಗಳು ಚರ್ಚಿಸುತ್ತಿ ದ್ದಾರೆ. ಈ ನಿಮಿತ್ತ ಜಿಲ್ಲೆಯಲ್ಲಿ ಅನುಕೂಲತೆಗಳಿರುವ ಐದು ಶಾಲೆಗಳನ್ನು ಆಯ್ಕೆ ಮಾಡಿ ಅರ್ಹ ದಿನಾಂಕಗಳಲ್ಲಿ ಶಿಬಿರ ನಡೆಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
2013ರ ಆಗಸ್ಟ್ 20ರಿಂದ 25ರ ವರೆಗೆ ಕೊನೆಯದಾಗಿ ಎಂಡೋಸಲ್ಫಾನ್ ಪೀಡಿತರ ವೈದ್ಯಕೀಯ ಶಿಬಿರ ನಡೆದಿತ್ತು. ಸಂತ್ರಸ್ತರನ್ನು ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರವನ್ನು ನಡೆಸಬೇಕು ಎಂದು ಎಂಡೋ ವಿರುದ್ಧ ಹೋರಾಟ ನಡೆಸುವ ಕ್ರಿಯಾ ಸಮಿತಿಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಲಿಖೀತ ರೂಪದಲ್ಲಿ ಭರವಸೆ ನೀಡಿದ್ದರು. ಆದರೆ ಈ ಭರವಸೆ ಕೂಡ ಮಣ್ಣು ಪಾಲಾಗಿರುವುದು ಸುಳ್ಳಲ್ಲ.
2016ರ ಫೆಬ್ರವರಿ ತಿಂಗಳಾಂತ್ಯದಲ್ಲಿ ಶಿಬಿರ ನಡೆಸಲಾಗುವುದು ಎಂದು ಸತ್ಯಾಗ್ರಹ ನಿರತರಾಗಿದ್ದ ಹೋರಾಟ ಸಮಿತಿ ಮುಖಂಡರಿಗೆ ಮತ್ತೆ ಭರವಸೆ ಕೊಡಲಾಗಿತ್ತಾದರೂ ಅದನ್ನೂ ಪಾಲಿಸ ಲಿಲ್ಲ. ಶಿಬಿರದಲ್ಲಿ ಭಾಗವಹಿಸಿದ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಸರಿಲ್ಲದಿರುವುದರಿಂದ ಹಲವು ಮಂದಿ ಸಂತ್ರಸ್ತರಿಗೆ ಚಿಕಿತ್ಸಾ ಸಹಾಯ ನಿರಾಕರಿಸಲಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ಕಾಸರಗೋಡು ಜಿಲ್ಲೆಯ ಯಾವುದೇ ರೋಗಿ ಎಂಡೋಸಲ್ಫಾನ್ ಬಾಧಿತ ರಾಗಿದ್ದರೆ ಉಚಿತ ಚಿಕಿತ್ಸೆ ಒದಗಿಸಬೇಕು ಎಂಬ ನಿಯಮವಿದೆ. ಆದರೂ ವೈದ್ಯರು ಅದಕ್ಕೆ ಸಿದ್ಧರಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
2013ರ ವೈದ್ಯಕೀಯ ಶಿಬಿರದ ಮಾನದಂಡಗಳಿಗೆ ಅನುಸಾರವಾಗಿ ನೂತನ ಶಿಬಿರದಿಂದ ರೋಗಿಗಳನ್ನು ಎಂಡೋಸಲ್ಫಾನ್ ಪೀಡಿತರ ಪಟ್ಟಿಗೆ ಸೇರಿಸಲಾಗುವುದು ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ.
ಇದೀಗ 5,848 ಮಂದಿ ಎಂಡೋಸಲ್ಫಾನ್ ಸಂತ್ರಸ್ತರು ಪಟ್ಟಿಯಲ್ಲಿದ್ದಾರೆ ಎಂದು ಎಂಡೋ ಬಾಧಿತರ ಕಲ್ಯಾಣ ಚಟುವಟಿಕೆಗಳ ಉಸ್ತುವಾರಿ ಹೊಂದಿರುವ ಸಹಾಯಕ ಜಿಲ್ಲಾಧಿಕಾರಿ ಕೆ.ಆರ್. ರವೀಂದ್ರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭರವಸೆ ನೀಡಿದರೂ ಪಾಲನೆಯಾಗಿಲ್ಲ
2013ರ ಆಗಸ್ಟ್ 20ರಿಂದ 25ರ ತನಕ ಕೊನೆಯದಾಗಿ ಎಂಡೋ ಸಲ್ಫಾನ್ ಬಾಧಿತರ ವೈದ್ಯಕೀಯ ಶಿಬಿರವನ್ನು ನಡೆಸಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಸಂತ್ರಸ್ತರನ್ನು ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರ ನಡೆಸಲಾಗುವುದು ಎಂದು ಎಂಡೋಸಲ್ಫಾನ್ ವಿರೋಧಿ ಹೋರಾಟ ಕ್ರಿಯಾ ಸಮಿತಿಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಭರವಸೆ ನೀಡಿದ್ದರು. 2016ರ ಫೆಬ್ರವರಿ ತಿಂಗಳಲ್ಲಿ ಶಿಬಿರ ಏರ್ಪಡಿಸಲಾಗುವುದು ಎಂದು ನಿರಶನ ನಿರತರಾಗಿದ್ದ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಕೇರಳ ಸರಕಾರದ ಕಡೆಯಿಂದ ಮತ್ತೆ ಭರವಸೆ ನೀಡಲಾಗಿತ್ತಾದರೂ ಅದನ್ನು ಇಲ್ಲಿಯವರೆಗೆ ಈಡೇರಿಸಿಲ್ಲ ಎಂಬುದು ಬಹುದೊಡ್ಡ ದುರಂತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.