ನೂತನ ಅನುಭವ ಮಂಟಪಕ್ಕೆ ಅನುದಾನ ಕಲ್ಪಿಸಲು ಮನವಿ
Team Udayavani, Mar 14, 2017, 3:50 PM IST
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗಾಗಿ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುವಂತೆ ನೂತನ ಅನುಭವ ಮಂಟಪ ನಿರ್ಮಾಣ ತಜ್ಞರ ಸಮಿತಿ ಅಧ್ಯಕ್ಷ ಗೋ.ರು. ಚನ್ನಬಸಪ್ಪ ಅವರಿಗೆ ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ ಮನವಿ ಮಾಡಿದರು.
ಸರ್ಕಾರದಿಂದ ನೂರು ಎಕರೆ ಜಮೀನು ತೆಗೆದುಕೊಂಡು ಅಲ್ಲಿ ಅನುಭವ ಮಂಟಪ ನಿರ್ಮಿಸಬೇಕು. ಶರಣರ ಗವಿಗಳ ಗೋಡೆಗಳ ಮೇಲೆ ಶರಣರ ಜೀವನ ದರ್ಶನಕ್ಕೆ ಸಂಬಂಧಿಧಿಸಿದ ಉಬ್ಬುಚಿತ್ರ, ವರ್ಣ ಚಿತ್ರ ನಿರ್ಮಿಸಬೇಕು. ಪರುಷಕಟ್ಟೆಯ ಸ್ಥಳವನ್ನು ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು.
ಬೆಟಬಾಲಕುಂದಾದಲ್ಲಿಯ ಗುಹೆಗಳು, ದಾಸೋಹ ಮಂಟಪ, ಗಂಜಿಕೇಂದ್ರ ಸಂಶೋಧಿಧಿಸಿ ಅವುಗಳನ್ನು ಬಿಕೆಡಿಬಿಯಿಂದ ಅಭಿವೃದ್ಧಿಪಡಿಸಬೇಕು. ಹರಳಯ್ಯ ದಿಬ್ಬ ಗುರುತಿಸಿ ವಿಶ್ವಮಟ್ಟದ ಸ್ಮಾರಕ ಸ್ತಂಭ ನಿರ್ಮಿಸಬೇಕೆಂದು ಮನವಿ ಮಾಡಿದರು. ಅಕ್ಕ ಡಾ| ಗಂಗಾಂಬಿಕಾ ಪಾಟೀಲ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುನಾಥ ಗಡ್ಡೆ, ಶ್ರೀಮಂತ ರಾಜೇಶ್ವರ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.