“ದಕ್ಷಿಣ ಭಾರತೀಯರೂ ಹೋಳಿ ಸಂಭ್ರಮಿಸುವಂತಾಗಲಿ’
Team Udayavani, Mar 14, 2017, 5:18 PM IST
ಉಪ್ಪಿನಂಗಡಿ: ದುಷ್ಟ ಶಕ್ತಿಗಳ ಸಂಹಾರದೊಂದಿಗೆ ಶಿಷ್ಟ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ಹೋಳಿ ಹಬ್ಬವನ್ನು ದಕ್ಷಿಣ ಭಾರತೀಯರೂ ಸಂಭ್ರಮದಿಂದ ಆಚರಿಸುವಂತಾಗಬೇಕೆಂದು ಯುವ ಮುಂದಾಳು ಅರುಣ್ ಕುಮಾರ್ ಪುತ್ತಿಲ ಆಶಯವನ್ನು ವ್ಯಕ್ತಪಡಿಸಿದರು.
ಅವರು ಸೋಮವಾರ ಉಪ್ಪಿನಂಗಡಿಯಲ್ಲಿ ರಾಜಸ್ಥಾನ್ ಬ್ರದರ್ಸ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಹೋಳಿ ಹಬ್ಬವನ್ನು ಬಣ್ಣ ಎರಚುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಧಿ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ ಮಾತನಾಡಿ, ಸಹೋದರತೆಯಿಂದ ಸಾಮರಸ್ಯತೆಯನ್ನು ಮೂಡಿಸಲು ಪ್ರೇರಣೆ ನೀಡುವ ಹೋಳಿ ಹಬ್ಬ ಇನ್ನಷ್ಟು ಜನಪ್ರಿಯವಾಗಿ ಈ ಭಾಗದಲ್ಲಿ ಆಚರಿಸಲ್ಪಡಲಿ. ಒಗ್ಗೂಡಿ ಸಂಭ್ರಮಿಸುವುದರಿಂದ ಸಮಾಜದಲ್ಲಿ ಸಾಂ ಕತೆ ಬಲಗೊಳ್ಳುತ್ತದೆ ಎಂದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯ ಬೆಳ್ಳಿಪ್ಪಾಡಿ ಪ್ರಕಾಶ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜಸ್ಥಾನ್ ಬ್ರದರ್ಸ್ ಸಂಘಟನೆಯ ಮುಂದಾಳು ಅನೂಪ್ ಸಿಂಗ್, ಸ್ಥಳೀಯ ಸಂಘಟಕರಾದ ಯು ಕೆ ರೋಹಿತಾಕ್ಷ , ಸುನಿಲ್ ದಡ್ಡು, ರವೀಂದ್ರ ಇಳಂತಿಲ, ರಮೇಶ್ ಭಂಡಾರಿ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.