ಧರ್ಮ ಇರುವವರೆಗೆ ಭಾರತ ನಾಶ ಅಸಾಧ್ಯ

Team Udayavani, Mar 15, 2017, 1:13 PM IST

dvg6.jpg

ಹರಪನಹಳ್ಳಿ: ಆಧ್ಯಾತ್ಮಿಕವಾಗಿ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಇಲ್ಲಿ ಧರ್ಮ, ದೇವರು, ಭಕ್ತಿ, ಶ್ರದ್ಧೆ, ಗುರು ಪರಂಪರೆ ಇವುಗಳು ಅವನತಿ ಹೊಂದುವವರೆಗೂ ಯಾರಿಂದಲೂ ಭಾರತವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಪಂಚಪೀಠದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಮಂಗಳವಾರ ಊರಮ್ಮದೇವಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ಗೋಪುರ ಕಳಸರೋಹಣ ಮತ್ತು ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ದೇಶದಲ್ಲಿ ದೇವಸ್ಥಾನಗಳಿಲ್ಲದ ಗ್ರಾಮಗಳಿಲ್ಲ. ಪಾಶ್ಚಿಮಾತ್ಯರು ದೇವರಿಗಿಂತ ದೇಹವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ, ಭಾರತದಲ್ಲಿ ದೇಹಕ್ಕಿಂತ ಅತೀ ಹೆಚ್ಚಾಗಿ ದೇವರನ್ನು ಆರಾಧಿಸುತ್ತಾರೆ. ಉಪವಾಸ, ಸನ್ಯಾಸ, ಆಚರಣೆ ಮಾಡುವ ಸಂಸ್ಕೃತಿ ನಮ್ಮಲ್ಲಿದೆ. ಅತ್ಯಂತ ಸನಾತನ ಧರ್ಮವೆಂದರೆ ಅದು ಹಿಂದೂ ಧರ್ಮವಾಗಿದೆ ಎಂದರು.

ವಿಶ್ವದ ಅನೇಕ ದೇಶಗಳಲ್ಲಿ ದಬ್ಟಾಳಿಕೆ, ಅತಿಕ್ರಮಣದಿಂದ ಅಲ್ಲಿನ ಸಂಸ್ಕೃತಿ ಬದಲಾಗಿರುವುದನ್ನು ಕಾಣಬಹುದು. ಭಾರತ ಮುಸ್ಲಿಂರ ಅತಿಕ್ರಮಣ, ದಬ್ಟಾಳಿಕೆ, ಬ್ರಿಟಿಷರು, ಫ್ರೆಂಚರು, ಡಚ್ಚರು ಸೇರಿದಂತೆ ಅನೇಕರು ದೇಶವನ್ನೂ ಹಾಳು ಮಾಡಿದ್ದರೂ ಇಲ್ಲಿನ ಮೂಲ ಸಂಸ್ಕೃತಿಗೆ ಧಕ್ಕೆಯಾಗದೇ ಹಿಂದೂಸ್ತಾನವಾಗಿಯೇ ಉಳಿದಿದೆ. 

ಇದಕ್ಕೆ ಧರ್ಮ, ದೇವರು, ಭಕ್ತಿ ಕಾರಣವಾಗಿದೆ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಬರಗಾಲವಿದ್ದರೂ ಭಕ್ತಿಗೆ ಬರವಿಲ್ಲ. ಜನರನ್ನು ದುಶ್ಚಟಗಳಿಂದ ರಕ್ಷಿಸುವ ಜವಾಬ್ದಾರಿ ಮಠಗಳ ಮೇಲಿದೆ.

ಭಗವಂತನ ಅನುಗ್ರಹ ವ್ಯರ್ಥ ಮಾಡದೇ ಸಮಾಜಕ್ಕೆ ಪ್ರಾಮಾಣಿಕ ಸೇವೆ ಮಾಡಬೇಕು. ಪ್ರತಿಯೊಬ್ಬರೂ ಸಂಸ್ಕಾರವಂತರಾದಲ್ಲಿ ಮಕ್ಕಳು ಕೂಡ ಸಂಸ್ಕಾರವಂತರಾಗಿ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು. ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮೀಜಿ ಮಾತನಾಡಿ, ಮಹಿಳೆಯರು ಧಾರವಾಹಿಗಳನ್ನು ನೋಡುವುದರಿಂದ ಸಂಸ್ಕೃತಿ, ಧರ್ಮ ಬೆಳೆಯುವುದಿಲ್ಲ.

ಜೀವನಕ್ಕೆಹತ್ತಿರವಾಗಿರುವ ಆಚರಣೆ, ಭಕ್ತಿ ಇವುಗಳನ್ನು  ಅನುಸರಿಸಬೇಕು. ಹಿರಿಯರನ್ನು ಗೌರವಿಸುವ, ಅವರ ಮಾರ್ಗದರ್ಶನದಲ್ಲಿ ಮುನ್ನಡೆದಲ್ಲಿ ಅನಾಹುತ ವಿರಳ ಎಂದರು. ಗ್ರಾಮದಲ್ಲಿ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧಿಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. 

ಚಾನಕೋಟಿ ಮಠದ ಡಾ| ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಲಹಳ್ಳಿ ಪಟ್ಟಣದ ಚಿನ್ಮಯಿ ಸ್ವಾಮೀಜಿ ಮಾತನಾಡಿದರು. ಮಾಡಲಗೇರಿ ಹಾಲಸ್ವಾಮಿ ಮಠದ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಸ್ವಾಮೀಜಿ, ಜಿಪಂ ಸದಸ್ಯ ಎಚ್‌.ಬಿ. ಪರುಶುರಾಮಪ್ಪ, ತಾಪಂ ಉಪಾಧ್ಯಕ್ಷ ಎಲ್‌. ಮಂಜ್ಯನಾಯ್ಕ, 

ಮಾಡಲಗೇರಿ ಗ್ರಾಪಂ ಅಧ್ಯಕ್ಷ ಟಿ. ಅಶೋಕ್‌, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಪಿ.ಟಿ. ಭರತ್‌, ವೈದ್ಯರಾದ ಡಾ| ಮಹೇಶ್‌, ಡಾ| ಜಯಶ್ರೀ, ಮುಖಂಡರಾದ ಎಂ.ಪಿ.ನಾಯ್ಕ, ಕಬ್ಬಳ್ಳಿ ಹನುಮಂತಪ್ಪ, ಡಿ.ಕೆ. ಪ್ರಕಾಶ್‌, ರಾಧಾ, ಅಂಜಿನಪ್ಪ, ಟಿ. ಹೊನ್ನಪ್ಪ, ಎಸ್‌. ಕೆಂಚಪ್ಪ, ಟಿ. ಪ್ರಕಾಶ್‌, ಹಾಲಪ್ಪ, ಧರ್ಮಪ್ಪ ಇತರರು ಇದ್ದರು.  

ಟಾಪ್ ನ್ಯೂಸ್

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Martin Movie: ಮಾರ್ಟಿನ್‌ ಇಂಟ್ರೊಡಕ್ಷನ್‌ ಸಾಂಗ್‌ ಬಜೆಟ್‌ 6 ಕೋಟಿ!

Martin Movie: ಮಾರ್ಟಿನ್‌ ಇಂಟ್ರೊಡಕ್ಷನ್‌ ಸಾಂಗ್‌ ಬಜೆಟ್‌ 6 ಕೋಟಿ!

Jammu and Kashmir: ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ… ಭಿಗಿ ಭದ್ರತೆ

Jammu and Kashmir: ಬಿಗಿ ಭದ್ರತೆಯೊಂದಿಗೆ ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ

Rajinikanth: ಸೂಪರ್‌ ಸ್ಟಾರ್ ರಜಿನಿಕಾಂತ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

Rajinikanth: ಸೂಪರ್‌ ಸ್ಟಾರ್ ರಜಿನಿಕಾಂತ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

031

Horoscope: ರಾಜಕಾರಣಿಗಳಿಗೆ ನೆಮ್ಮದಿ ಭಂಗವಾಗಲಿದೆ

home–DCM

Political: ಡಿಸಿಎಂ ಡಿ.ಕೆ.ಶಿವಕುಮಾರ್‌ -ಪರಮೇಶ್ವರ್‌ ರಹಸ್ಯ ಭೇಟಿ; ಮಾತುಕತೆ

G.parameshwar

Illegal immigration: ಪಾಕಿಸ್ಥಾನಿಗರ ವಿಚಾರಣೆ ನಡೆಯುತ್ತಿದೆ: ಗೃಹ ಸಚಿವ ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Martin Movie: ಮಾರ್ಟಿನ್‌ ಇಂಟ್ರೊಡಕ್ಷನ್‌ ಸಾಂಗ್‌ ಬಜೆಟ್‌ 6 ಕೋಟಿ!

Martin Movie: ಮಾರ್ಟಿನ್‌ ಇಂಟ್ರೊಡಕ್ಷನ್‌ ಸಾಂಗ್‌ ಬಜೆಟ್‌ 6 ಕೋಟಿ!

Jammu and Kashmir: ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ… ಭಿಗಿ ಭದ್ರತೆ

Jammu and Kashmir: ಬಿಗಿ ಭದ್ರತೆಯೊಂದಿಗೆ ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ

Rajinikanth: ಸೂಪರ್‌ ಸ್ಟಾರ್ ರಜಿನಿಕಾಂತ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

Rajinikanth: ಸೂಪರ್‌ ಸ್ಟಾರ್ ರಜಿನಿಕಾಂತ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

031

Horoscope: ರಾಜಕಾರಣಿಗಳಿಗೆ ನೆಮ್ಮದಿ ಭಂಗವಾಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.